30-Year-Old Debt: 30 ವರ್ಷಗಳ ಹಳೆಯ ಸಾಲ ತೀರಿಸಲು 1200 ಕಿ.ಮೀ. ಪ್ರಯಾಣ! ಕೊಟ್ಟ ಮಾತು ಉಳಿಸಿಕೊಂಡ ಸ್ನೇಹಿತ

Published : Jul 12, 2026, 10:50 AM IST
Kerala Man Travels 1200 KM to Repay 30 Year Old Debt to Friend

ಸಾರಾಂಶ

ಕೇರಳದ ವ್ಯಕ್ತಿಯೊಬ್ಬರು ಸುಮಾರು 30 ವರ್ಷಗಳ ಹಿಂದೆ ಸ್ನೇಹಿತನಿಂದ ಪಡೆದಿದ್ದ ಸಾಲವನ್ನು ಮರುಪಾವತಿಸಲು 1200 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಈ ಘಟನೆ ಈಗ ಸ್ನೇಹದ ಮೌಲ್ಯವನ್ನು ಸಾರುವ ಅಪರೂಪದ ಕಥೆಯಾಗಿ ಗಮನ ಸೆಳೆದಿದೆ.

ಕೇರಳದ ವ್ಯಕ್ತಿಯೊಬ್ಬರು 30 ವರ್ಷಗಳ ಹಿಂದಿನ ಹಳೆಯ ಸಾಲವೊಂದನ್ನು ತೀರಿಸಲು ಬರೋಬ್ಬರಿ 1200 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಿ ಸಾಲ ತೀರಿಸಿ ಬಂದಿದ್ದಾರೆ! ನಂಬೋಕೆ ಆಗ್ತಿಲ್ಲವೇ? ಹೌದು ಇದು, ನಿಜ. ಸಾಲ ಕೊಟ್ಟು. ದಶಕಗಳೇ ಕಳೆದರೂ ಸ್ನೇಹಿತ ಕೊಟ್ಟ ಮಾತನ್ನು ಮರೆಯದೆ, ಋಣ ತೀರಿಸಿದ ಅಪರೂಪದ ಘಟನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಇದು ಕೇವಲ ಹಣದ ವಿಷಯವಲ್ಲ, ಬದಲಿಗೆ ಸ್ನೇಹ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದೆ. ಈ ಘಟನೆ ನಡೆದಿರುವುದು ಕೇರಳದಲ್ಲಿ. ಸುಮಾರು ಮೂವತ್ತು ವರ್ಷಗಳ ಹಿಂದೆ, ಈ ವ್ಯಕ್ತಿ ತನ್ನ ಸ್ನೇಹಿತನಿಂದ ಹಣವನ್ನು ಸಾಲವಾಗಿ ಪಡೆದಿದ್ದರು. ಆದರೆ, ಕಾಲಾನಂತರದಲ್ಲಿ ಇಬ್ಬರೂ ಬೇರೆ ಬೇರೆ ಕಡೆ ನೆಲೆಸಬೇಕಾಗಿ ಬಂದಿದ್ದರಿಂದ ಇಬ್ಬರ ನಡುವೆಯೂ ಸಂಪರ್ಕ ಕಳೆದುಹೋಗಿತ್ತು.

ಮರೆಯಲಾಗದ ಮಾತು, ಮುಗಿಯದ ಸ್ನೇಹ

ನೋಡಿ ಸಾಮಾನ್ಯವಾಗಿ ನೀವು ಯಾರಿಗಾದ್ರೂ ನೂರೋ ಸಾವಿರೋ ಸಾಲ ಕೊಟ್ಟರೆ ಪಡೆದವರು ಮರೆತೇ ಬಿಡ್ತಾರೆ, ನೀವಾಗಿ ಕೇಳಿದ್ರೂ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ತಾರೆ, ಕೊನೆ ಸಂಪರ್ಕ ಕಡಿದುಕೊಳ್ತಾರೆ, ದೊಡ್ಡ ಮೊತ್ತ ಇದ್ದರೆ ಸಂಬಂಧ ಕಡಿದುಕೊಂಡರೂ ಸಾಲ ವಾಪಸ್ ಕೊಡೋದಿಲ್ಲ, ಕೆಲವು ಸಂದರ್ಭಗಳಂತೂ ಸಾಲ ಕೇಳಲು ಹೋದವರನ್ನೇ ಕೊಂದು ಹಾಕಿದ ಘಟನೆ ಸಾಕಷ್ಟಿವೆ ಅಲ್ಲವೇ? ಆದರೆ ಕೇರಳದ ಈ ವ್ಯಕ್ತಿ ಎಷ್ಟೊಂದು ಪ್ರಾಮಾಣಿಕ ಸ್ನೇಹಿತ ಅಂದ್ರೆ ಸ್ನೇಹಿತನಿಂದ ಸಾಲ ಪಡೆದು ಬರೋಬ್ಬರು ಮೂವತ್ತು ವರ್ಷಗಳೇ ಕಳೆದಿವೆ. ಆದ್ರೂ ಸಾಲ ಪಡೆದಿದ್ದ ವಿಚಾರ ಮರೆತಿಲ್ಲ. ಸಾಲ ಕೊಡೋಣ ಅಂದ್ರೆ ಸ್ನೇಹಿತ ಎಲ್ಲಿದ್ದಾನೆಂದೇ ತಿಳಿದಿಲ್ಲ. ಆದ್ರೂ ಹೇಗಾದರೂ ಮಾಡಿ ಸ್ನೇಹಿತನನ್ನು ಪತ್ತೆಹಚ್ಚಬೇಕುನ ಅಂದು ಪಡೆದಿದ್ದ ಸಾಲ ವಾಪಸ್ ಕೊಟ್ಟು ಮಾತು ಉಳಿಸಿಕೊಳ್ಳಬೇಕೆಂಬ ದೃಢ ಸಂಕಲ್ಪ ಅವರಲ್ಲಿತ್ತು.

ಸಾಲ ಕೊಟ್ಟ ಗೆಳೆಯನ ಪತ್ತೆ ಹಚ್ಚಿದ್ದು ಹೇಗೆ?

ಇದೇ ಕಾರಣಕ್ಕೆ ಕೇರಳದ ಈ ವ್ಯಕ್ತಿ ತನ್ನ ಗೆಳೆಯ ಎಲ್ಲಿ ಇರಬಹುದು ಎಂಬ ಮಾಹಿತಿ ಕಲೆಹಾಕಿ, ಹುಡುಕಿಕೊಂಡು ನೂರಾರು ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾರೆ.

ಕೊನೆಗೂ ತಮ್ಮ ಸ್ನೇಹಿತನನ್ನು ಪತ್ತೆಹಚ್ಚಿ, 30 ವರ್ಷಗಳ ಹಿಂದಿನ ಸಾಲವನ್ನು ಮರುಪಾವತಿಸುವ ಮೂಲಕ ಮಾತು ಉಳಿಸಿಕೊಂಡಿದ್ದಾರೆ. ಈ ಇಬ್ಬರು ಸ್ನೇಹಿತರ ನಡುವಿನ ಬಾಂಧವ್ಯ ಎಂಥದ್ದು ಮತ್ತು ಕೊಟ್ಟ ಮಾತಿಗೆ ಇರುವ ಬೆಲೆ ಏನು ಎಂಬುದಕ್ಕೆ ಈ ಘಟನೆಯೇ ದೊಡ್ಡ ಸಾಕ್ಷಿಯಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಗಳು ಹಾಳಾಗುವ ಇಂದಿನ ದಿನಗಳಲ್ಲಿ, ಮೂರು ದಶಕಗಳ ನಂತರವೂ ಸಾಲ ತೀರಿಸಲು ಇಷ್ಟು ದೂರ ಪ್ರಯಾಣಿಸಿದ್ದು ನಿಜಕ್ಕೂ ಅಪರೂಪವೇ ಸರಿ. ಈ ಕಥೆ ನಿಜವಾದ ಸ್ನೇಹಕ್ಕೆ ಯಾವುದೇ ಕಾಲಮಿತಿ ಅಥವಾ ದೂರದ ಅಂತರ ಅಡ್ಡಿಯಾಗುವುದಿಲ್ಲ ಎಂಬುದನ್ನು ನಿರೂಪಿಸಿದೆ.

PREV
Read more Articles on
click me!

Recommended Stories

ಕಸದ ಗುಂಡಿಯಾಗಿದ್ದ 150 ವರ್ಷದ ಬಾವಿ ಈಗ ಬೆಂಗಳೂರಿನ ಜನರ ಜೀವನಾಡಿ..ಪ್ರತಿದಿನ ಸಾವಿರಾರು ಲೀಟರ್ ನೀರು
5 ಲಕ್ಷ ಕೊಟ್ಟರು ನೆಮ್ಮದಿ ಇಲ್ಲ! ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಇಂಟರ್ನ್ಯಾಷನಲ್ ಶಾಲೆಯ ವಿರುದ್ಧ ಪೋಷಕರ ಗಂಭೀರ ಆರೋಪ