ಈ ಮನೆಯ ಬೆಡ್‌ರೂಮ್‌ ಒಂದು ರಾಜ್ಯದಲ್ಲಿ, ಟಾಯ್ಲೆಟ್‌ ಇನ್ನೊಂದು ರಾಜ್ಯದಲ್ಲಿ! ವಿಚಿತ್ರ ಸ್ಟೋರಿ ಕೇಳಿ

Published : Aug 31, 2026, 08:28 PM IST
House Story

ಸಾರಾಂಶ

ಮಹಾರಾಷ್ಟ್ರ-ತೆಲಂಗಾಣ ಗಡಿಯಲ್ಲಿರುವ ಪವಾರ್ ಕುಟುಂಬದ ಮನೆಯು ಎರಡು ರಾಜ್ಯಗಳ ನಡುವೆ ಹಂಚಿಹೋಗಿದೆ. ಈ ವಿಶಿಷ್ಟ ಮನೆಯ ಅಡುಗೆಮನೆಯು ತೆಲಂಗಾಣದಲ್ಲಿದ್ದರೆ, ಮಲಗುವ ಕೋಣೆ ಮಹಾರಾಷ್ಟ್ರದಲ್ಲಿದೆ. ಈ ಕುಟುಂಬವು ಎರಡೂ ರಾಜ್ಯಗಳಿಗೆ ತೆರಿಗೆ ಪಾವತಿಸಿ, ಸರಕಾರಿ ಯೋಜನೆಗಳ ಲಾಭ ಪಡೆಯುತ್ತಿದೆ.

ಒಂದು ಮನೆ ಕಟ್ಟುವಾಗ, ವಾಸ್ತು ಪ್ರಕಾರ ಆಯಾ ಕೋಣೆಗಳು, ಅದೇ ದಿಕ್ಕಿಗೆ ಬರಬೇಕು ಎಂದು ಹಲವರು ಯೋಚಿಸುವುದು ಸಾಮಾನ್ಯ. ಹೀಗೆ ಇಲ್ಲದ ಎಷ್ಟೋ ಮನೆಗಳನ್ನು ಕೆಡವಿ ಪುನಃ ಕಟ್ಟಲಾಗುತ್ತದೆ. ವಾಸ್ತುವಿನ ಮೇಲೆ ಅಷ್ಟೊಂದು ನಂಬಿಕೆ ಹಲವರದ್ದು. ಆದರೆ ಇಲ್ಲೊಂದು ಮನೆಯ ವಿಚಿತ್ರ ಏನು ಎಂದರೆ, ಬೆಡ್‌ರೂಮ್‌ ಒಂದು ರಾಜ್ಯದಲ್ಲಿದೆ, ಟಾಯ್ಲೆಟ್‌ ಮತ್ತೊಂದು ರಾಜ್ಯದಲ್ಲಿದೆ! ಇದೇನಿದು ವಿಚಿತ್ರ ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.

ಅಷ್ಟಕ್ಕೂ, ಎರಡು ವಿಭಿನ್ನ ರಾಜ್ಯಗಳ ಗಡಿಯಲ್ಲಿರುವ ಮನೆಯಲ್ಲಿ ವಾಸಿಸುವುದನ್ನು ನೀವು ಎಂದಾದರೂ ಊಹಿಸಿದ್ದೀರಾ? ಒಂದು ವಿಶಿಷ್ಟ ಪ್ರಕರಣದಲ್ಲಿ, ಚಂದ್ರಾಪುರ ಜಿಲ್ಲೆಯ ಸಿಮಾವರ್ತಿ ಜೀವತಿ ತಹಸಿಲ್‌ನ ಮಹಾರಾಜಗುಡ ಗ್ರಾಮದಲ್ಲಿರುವ ಪವಾರ್ ಕುಟುಂಬವು ಮಹಾರಾಷ್ಟ್ರ ಮತ್ತು ತೆಲಂಗಾಣ ಎರಡರಲ್ಲೂ ವಾಸಿಸುತ್ತಿದೆ! 13 ಸದಸ್ಯರ ಪವಾರ್ ಕುಟುಂಬವು ಎರಡು ರಾಜ್ಯಗಳ ನಡುವೆ ಅಡ್ಡಾಡುವ ವಿಚಿತ್ರ ಅನುಭವವನ್ನು ಅನುಭವಿಸುತ್ತದೆ. ಎರಡೂ ರಾಜ್ಯಗಳು ಮಹಾರಾಷ್ಟ್ರ-ತೆಲಂಗಾಣ ಗಡಿಯಲ್ಲಿರುವ 14 ಹಳ್ಳಿಗಳ ಮೇಲೆ ತಮ್ಮ ಹಕ್ಕು ಸಾಧಿಸಿವೆ.

ಎರಡೂ ರಾಜ್ಯಗಳಿಗೆ ತೆರಿಗೆ- ಯೋಜನೆಗಳ ಉಪಯೋಗ

ಅವರು ಎರಡೂ ರಾಜ್ಯಗಳ ಕಲ್ಯಾಣ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯುತ್ತಾರೆ ಮತ್ತು ಮಹಾರಾಷ್ಟ್ರ ಮತ್ತು ತೆಲಂಗಾಣ ನೋಂದಣಿ ಫಲಕಗಳನ್ನು ಹೊಂದಿರುವ ವಾಹನಗಳನ್ನು ಸಹ ಹೊಂದಿದ್ದಾರೆ. ಅವರು ಎರಡೂ ರಾಜ್ಯಗಳಿಗೆ ತೆರಿಗೆಯನ್ನು ಸಹ ಪಾವತಿಸುತ್ತಾರೆ. ಮತ್ತು ಮಹಾರಾಜಗುಡ ಗ್ರಾಮದಲ್ಲಿರುವ ಅವರ 10 ಕೋಣೆಗಳ ಮನೆ ತೆಲಂಗಾಣದಲ್ಲಿ ನಾಲ್ಕು ಕೊಠಡಿಗಳು ಮತ್ತು ಮಹಾರಾಷ್ಟ್ರದಲ್ಲಿ ನಾಲ್ಕು ಕೊಠಡಿಗಳನ್ನು ಹೊಂದಿದೆ. ಅಡುಗೆಮನೆ ತೆಲಂಗಾಣದಲ್ಲಿದೆ, ಆದರೆ ಮಲಗುವ ಕೋಣೆ ಮತ್ತು ಹಾಲ್ ಮಹಾರಾಷ್ಟ್ರದಲ್ಲಿದೆ. ಕುಟುಂಬವು ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿದೆ.

ಯಾವುದೇ ಸಮಸ್ಯೆಯಿಲ್ಲ

"ನಮ್ಮ ಮನೆ ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವೆ ವಿಭಜನೆಯಾಗಿದೆ, ಆದರೆ ಇಲ್ಲಿಯವರೆಗೆ ನಮಗೆ ಯಾವುದೇ ಸಮಸ್ಯೆಯಾಗಿಲ್ಲ, ನಾವು ಎರಡೂ ರಾಜ್ಯಗಳಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸುತ್ತೇವೆ ಮತ್ತು ಎರಡೂ ರಾಜ್ಯಗಳ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತೇವೆ" ಎಂದು ಮನೆಯ ಮಾಲೀಕ ಉತ್ತಮ್ ಪವಾರ್‌ ಹೇಳುತ್ತಾರೆ.

1969 ರಲ್ಲಿ ಗಡಿ ವಿವಾದ ಇತ್ಯರ್ಥವಾದಾಗ ಪವಾರ್ ಕುಟುಂಬದ ಭೂಮಿಯನ್ನು ಎರಡು ರಾಜ್ಯಗಳಾಗಿ ವಿಂಗಡಿಸಲಾಗಿದೆ. ಇದರ ಪರಿಣಾಮವಾಗಿ, ಮನೆಯನ್ನು ಸಹ ವಿಭಜಿಸಲಾಯಿತು. ಕಾನೂನುಬದ್ಧವಾಗಿ ಈ ಗ್ರಾಮಗಳು ಮಹಾರಾಷ್ಟ್ರದ ಭಾಗವಾಗಿದ್ದರೂ, ತೆಲಂಗಾಣ ಸರ್ಕಾರವು ತನ್ನ ಯೋಜನೆಗಳೊಂದಿಗೆ ಈ ಗ್ರಾಮಗಳ ಜನರನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ಇದೇ ರೀತಿಯ ಸಮಸ್ಯೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿಯೂ ಇದೆ.

PREV
Read more Articles on
click me!

Recommended Stories

ಬರದಲ್ಲೂ ಹಸನು! 26 ವರ್ಷಗಳಿಂದ ಹೊಲಕ್ಕೆ ಹನಿ ನೀರನ್ನೂ ಹಾಯಿಸದೆ ಈ ರೈತ ಸಮೃದ್ಧ ಬೆಳೆ ತೆಗೆದಿದ್ದು ಹೇಗೆ?
19 ತಿಂಗಳ ಮಗುವನ್ನು ಅಂಗಾಂಗದಾನಕ್ಕೆ ಕೊಟ್ಟು ಹಿಂತಿರುಗಿ ನೋಡಿದೆ ಹೋದ ಅಮ್ಮ!