
ಆಫೀಸ್ ಡ್ಯೂಟಿ ಮುಗಿದ ನಂತರ ಕೆಲಸ ಮಾಡಲು ನಿರಾಕರಿಸುವ ಒಬ್ಬನೇ ಒಬ್ಬ ಉದ್ಯೋಗಿ ಕಂಪನಿಯ ನೀತಿಯನ್ನೇ (Policy) ಬದಲಾಯಿಸಲು ಸಾಧ್ಯವೇ? 'X' (ಟ್ವಿಟರ್) ಸಾಮಾಜಿಕ ಜಾಲತಾಣದ ಬಳಕೆದಾರರಾದ ಸೋಫಿಯಾ (Sophia) ಹಂಚಿಕೊಂಡ ಕಥೆಯೊಂದು ಇದು ಸಾಧ್ಯ ಎಂದು ತೋರಿಸುತ್ತದೆ. ಕೆಲಸದ ಸ್ಥಳದ ಮಿತಿಗಳು (Workplace Boundaries) ಮತ್ತು ಹೆಚ್ಚುವರಿ ಅವಧಿಯ ಕೆಲಸಕ್ಕೆ ನೀಡುವ ವೇತನದ (Paid Overtime) ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿರುವ ಈ ಪೋಸ್ಟ್, Gen Z ತಲೆಮಾರಿನ ಒಬ್ಬ ಉದ್ಯೋಗಿ ತನ್ನ ಮ್ಯಾನೇಜರ್ ನೀಡಿದ ಸೂಚನೆಗಳನ್ನು ಅಕ್ಷರಶಃ ಹೇಗೆ ಪಾಲಿಸಿದರು ಮತ್ತು ಅದರಿಂದ ಎಂತಹ ಅನೀರಿಕ್ಷಿತ ಪರಿಣಾಮ ಉಂಟಾಯಿತು ಎಂಬುದನ್ನು ವಿವರಿಸುತ್ತದೆ.
ಸೋಫಿಯಾ ಪ್ರಕಾರ, ಕಂಪನಿಯು ಓವರ್‌ಟೈಮ್ (ಹೆಚ್ಚುವರಿ ಕೆಲಸ) ಕೆಲಸಕ್ಕೆ ಯಾವುದೇ ಹಣ ಪಾವತಿಸುವುದಿಲ್ಲವಾದ್ದರಿಂದ ಪ್ರತಿಯೊಬ್ಬರೂ ಸರಿಯಾಗಿ ಸಂಜೆ 5 ಗಂಟೆಗೆ ಕೆಲಸ ಮುಗಿಸಿ ಹೊರಡಬೇಕು (Clock Out) ಎಂದು ಮ್ಯಾನೇಜರ್ ಉದ್ಯೋಗಿಗಳಿಗೆ ತಿಳಿಸಿದಾಗ ಈ ಘಟನೆ ಪ್ರಾರಂಭವಾಯಿತು. ಆ ನಿರ್ಧಾರವನ್ನು ಪ್ರಶ್ನಿಸುವುದಾಗಲಿ ಅಥವಾ ವಾದ ಮಾಡುವುದಾಗಲಿ ಮಾಡದ Gen Z ಉದ್ಯೋಗಿಯೊಬ್ಬ, ಆ ನಿಯಮವನ್ನು ಸುಮ್ಮನೆ ಒಪ್ಪಿಕೊಂಡು ಮ್ಯಾನೇಜರ್ ಹೇಳಿದಂತೆಯೇ ಪಾಲಿಸಿದನು.
ಅಸಲಿ ಟ್ವಿಸ್ಟ್ ಎದುರಾದದ್ದೇ ಮುಂದಿನ ವಾರ. ಉದ್ಯೋಗಿಗಳು ಸಂಜೆ 5 ಗಂಟೆಗೆ ಆಫೀಸ್‌ನಿಂದ ಹೊರಬಿದ್ದ ಸರಿಯಾಗಿ ಮೂರು ನಿಮಿಷಗಳ ನಂತರ, ಮುಖ್ಯ ಕ್ಲೈಂಟ್ ಒಬ್ಬರು ತುರ್ತು ಸಮಸ್ಯೆಯೊಂದಿಗೆ ಕರೆ ಮಾಡಿದರು. ಆ ಸಮಸ್ಯೆಯನ್ನು ಬಗೆಹರಿಸುವುದು ಆ Gen Z ಉದ್ಯೋಗಿಗೆ ಮಾತ್ರ ಗೊತ್ತಿತ್ತು. ಮ್ಯಾನೇಜರ್ ತಕ್ಷಣವೇ ಆತನಿಗೆ ಆಫೀಸ್‌ನಲ್ಲೇ ತಡೆದು ಸಹಾಯ ಮಾಡುವಂತೆ ಕೇಳಿಕೊಂಡರು.
ಆ ಉದ್ಯೋಗಿ ಶಾಂತವಾಗಿ ಗಡಿಯಾರದತ್ತ ಬೆರಳು ಮಾಡಿ, ಸಂಜೆ 5 ಗಂಟೆಯ ನಂತರ ತನ್ನ ಸಮಯ ಕಂಪನಿಗೆ ಸೇರಿದ್ದಲ್ಲ ಎಂದು ಮ್ಯಾನೇಜರ್‌ಗೆ ನೆನಪಿಸಿದನು. ಮ್ಯಾನೇಜರ್ 'ಇದು ಕೇವಲ ಕೆಲವೇ ನಿಮಿಷಗಳ ಕೆಲಸ' ಎಂದು ಒತ್ತಾಯಿಸಿದಾಗ, ಉದ್ಯೋಗಿ ಸರಳವಾದ ಉತ್ತರ ನೀಡಿದನು: "ಇದು ಕೆಲಸ ಎಂದು ಪರಿಗಣಿಸಲ್ಪಟ್ಟರೆ, ಇದನ್ನು ಓವರ್‌ಟೈಮ್ ಎಂದು ಪರಿಗಣಿಸಿ ಹಣ ನೀಡಬೇಕು. ಒಂದು ವೇಳೆ ಇದನ್ನು ಓವರ್‌ಟೈಮ್ ಎಂದು ಪರಿಗಣಿಸದಿದ್ದರೆ, ಹಾಗಾದರೆ ಇದು ಕೆಲಸವೇ ಅಲ್ಲ."
ಕ್ಲೈಂಟ್‌ನ ಸಮಸ್ಯೆಯನ್ನು ಪರಿಹರಿಸಲು ಬೇರೆ ಯಾರೂ ಇಲ್ಲದ ಕಾರಣ, ಆ ಸಮಸ್ಯೆ ಇಡೀ ವಾರಾಂತ್ಯ (Weekend) ಹಾಗೆಯೇ ಉಳಿಯಿತು. ಸೋಫಿಯಾ ಪ್ರಕಾರ, ಆ ಕ್ಲೈಂಟ್ ಸೋಮವಾರ ಬೆಳಗ್ಗೆಯವರೆಗೂ ಆಫ್‌ಲೈನ್‌ನಲ್ಲೇ ಉಳಿದರು ಮತ್ತು ಅಷ್ಟರಲ್ಲಾಗಲೇ ಕಂಪನಿಯು ಆ ಕ್ಲೈಂಟ್‌ನ ಕಾಂಟ್ರಾಕ್ಟ್ (Account) ಅನ್ನು ಕಳೆದುಕೊಂಡಿತ್ತು. ಈ ಅನುಭವವು ಕಂಪನಿಯ ಆಡಳಿತ ಮಂಡಳಿಯು ತನ್ನ ಧೋರಣೆಯನ್ನು ಮರುಪರಿಶೀಲಿಸುವಂತೆ ಮಾಡಿತು.
ಮುಂದಿನ ಸಿಬ್ಬಂದಿ ಸಭೆಯಲ್ಲಿ (Staff Meeting), ಇನ್ಮುಂದೆ ಅನುಮೋದಿತ ಓವರ್‌ಟೈಮ್ (Approved Overtime) ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚುವರಿ ಹಣ ಪಾವತಿಸಲಾಗುವುದು ಎಂದು ಕಂಪನಿ ಘೋಷಿಸಿತು. ಸೋಫಿಯಾ ಹೇಳುವಂತೆ, ಆ Gen Z ಉದ್ಯೋಗಿ ತನ್ನ ನೋಟ್‌ಬುಕ್‌ನಿಂದ ಕಣ್ಣೆತ್ತಿ ನೋಡದೆ ಶಾಂತವಾಗಿ ಈ ಘೋಷಣೆಗೆ ಪ್ರತಿಕ್ರಿಯಿಸಿದನು. "ಓವರ್‌ಟೈಮ್‌ಗೆ ಹಣ ನೀಡದಿರುವ ಪರಿಣಾಮಗಳು ದೊಡ್ಡದಾಗಿದ್ದಾಗ, ಇದ್ದಕ್ಕಿದ್ದಂತೆ ಓವರ್‌ಟೈಮ್ ನೀಡುವುದು ಕಂಪನಿಗೆ ಸಾಧ್ಯವಾಯಿತು" ಎಂದು ಆತ ಟೀಕಿಸಿದನು.
Our manager announced that every employee had to clock out exactly at 5:00 p.m. because "we don't pay for overtime." A Gen Z coworker didn't argue.
The following Friday, a major client called at 5:03 with an emergency that only he could fix. The manager begged him to stay.
He…— Sophia ❣️ (@KeruboSk) July 22, 2026