ಗಿಳಿಗಳ ಕಿತಾಪತಿಗೆ ಮೃಗಾಲಯ ಸಿಬ್ಬಂದಿ ಹೈರಾಣು: ಪ್ರವಾಸಿಗರನ್ನೆಲ್ಲಾ ಬೈದು ಸುಸ್ತು ಮಾಡಿದ ಪಕ್ಷಿಗಳು

Published : Nov 07, 2026, 05:15 PM IST
Parrots

ಸಾರಾಂಶ

ಬ್ರಿಟನ್‌ನ ಮೃಗಾಲಯವೊಂದರಲ್ಲಿ ವೀಕ್ಷಕರನ್ನು ನಿಂದಿಸುತ್ತಿದ್ದ ಐದು ಗಿಳಿಗಳನ್ನು ಪ್ರತ್ಯೇಕಗೊಳಿಸಲಾಗಿದೆ. ಒಟ್ಟಿಗೆ ಇದ್ದಾಗ ಶಪಿಸುವುದನ್ನು ಕಲಿತ ಈ ಗಿಳಿಗಳು, ಸಂದರ್ಶಕರಿಗೆ ಮುಜುಗರ ಉಂಟುಮಾಡಿದ್ದವು. ಈ ಘಟನೆ ವೈರಲ್ ಆಗಿದ್ದು, ತಮಾಷೆಯ ಚರ್ಚೆಗಳಿಗೆ ಕಾರಣವಾಗಿದೆ.

ನೀವು ಆಗಾಗ್ಗೆ ಗಿಳಿಯು ಹಾಡುವುದನ್ನು ಅಥವಾ ಮಾನವ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದ್ದೀರಿ. ಗಿಣಿ ಎಂದರೆ ಮಾನವ ಭಾಷೆಯನ್ನು ಮಾತನಾಡಬಲ್ಲ ಪಕ್ಷಿ, ಆದರೆ ಇದೇ ಮಾತನಾಡುವ ಗಿಳಿಯಿಂದ ಮೃಗಾಲಯದವರು ಅವಮಾನವನ್ನು ಎದುರಿಸಬೇಕಾದ ಪ್ರಸಂಗವೊಂದು ನಡೆದಿದ್ದು, ಅದರ ಸುದ್ದಿ ಮತ್ತೀಗ ವೈರಲ್​ ಆಗುತ್ತಿದೆ. ಬ್ರಿಟನ್‌ನಲ್ಲಿ ನಡೆದ ಘಟನೆ ಇದಾಗಿದ್ದು, ಇದೀಗ ಬೆಳಕಿಗೆ ಬಂದಿದೆ. ಮೃಗಾಲಯವನ್ನು ವೀಕ್ಷಿಸಲು ಬಂದವರನ್ನು ಅಲ್ಲಿಯ ಗಿಳಿಯಲು ಹಾಸ್ಯ ಮಾಡಲು ಆರಂಭಿಸಿದ್ದರಿಂದ ವೀಕ್ಷಕರು ಗರಂ ಆಗಿ ಮೃಗಾಲಯದ ವಿರುದ್ಧ ಕೇಸ್​​ ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಗುಂಪಿನಲ್ಲಿದ್ದ ಐದು ಗಿಳಿಗಳನ್ನು ಪ್ರತ್ಯೇಕಗೊಳಿಸಿರುವ ಘಟನೆ ಇದಾಗಿದೆ.

ಐದು ಸ್ನೇಹಿತ ಗಿಳಿಗಳು ಸದಾ ಒಂದು ಕಡೆ ಇರುತ್ತಿದ್ದವು. ಈ ಗಿಳಿಗಳು ಸಂದರ್ಶಕರು ಮತ್ತು ಮಕ್ಕಳನ್ನು ನಿಂದಿಸಲು ಪ್ರಾರಂಭಿಸಿದ್ದವು, ಇದು ಮೃಗಾಲಯಕ್ಕೆ ಸಮಸ್ಯೆಗಳನ್ನು ಉಂಟುಮಾಡಿತು. ಅವುಗಳ ನಡವಳಿಕೆಯನ್ನು ಪರಿಗಣಿಸಿ, ಅವುಗಳನ್ನು ತಕ್ಷಣವೇ ಮೃಗಾಲಯದಿಂದ ತೆಗೆದುಹಾಕಲಾಗಿದೆ. ಈ ಐದು ಗಿಳಿಗಳನ್ನು ಸ್ವಲ್ಪ ಸಮಯದವರೆಗೆ ಒಟ್ಟಿಗೆ ಕ್ವಾರಂಟೈನ್ ಮಾಡಲಾಗಿತ್ತು ಎಂದು ವರದಿಯಾಗಿದೆ, ನಂತರ ಈ ಬದಲಾವಣೆ ಕಂಡುಬಂದಿದೆ. ಕೆಲವು ದಿನಗಳ ಹಿಂದೆ, ಯುಕೆಯ ಲಿಂಕನ್‌ಶೈರ್ ವನ್ಯಜೀವಿ ಉದ್ಯಾನವನದ ಅಧಿಕಾರಿಗಳು ವಿವಿಧ ಜನರಿಂದ ಎರಿಕ್, ಜೇಡ್, ಎಲ್ಸಿ, ಟೈಸನ್ ಮತ್ತು ಬಿಲ್ಲಿ ಎಂಬ ಐದು ಬೂದು ಗಿಳಿಗಳನ್ನು ದತ್ತು ಪಡೆದರು ಮತ್ತು ಅವುಗಳನ್ನು ಒಟ್ಟಿಗೆ ಪಂಜರದಲ್ಲಿ ಕ್ವಾರಂಟೈನ್ ಮಾಡಲು ನಿರ್ಧರಿಸಿದರು. ಕೆಲವೇ ದಿನಗಳಲ್ಲಿ, ಅಧಿಕಾರಿಗಳಿಗೆ ಗಿಳಿಗಳ ಬಗ್ಗೆ ದೂರುಗಳು ಬರಲು ಪ್ರಾರಂಭಿಸಿದವು.

ಆಗಿದ್ದೇನು?

ಉದ್ಯಾನವನದ ಸಿಬ್ಬಂದಿಯ ಪ್ರಕಾರ, ಗಿಳಿಗಳು ಆರಂಭದಲ್ಲಿ ಪರಸ್ಪರ ದೂರಿಕೊಳ್ಳುತ್ತಿದ್ದರು ಮತ್ತು ನಂತರ ಅವುಗಳು ಫ್ರೆಂಡ್ಸ್​​ ಆಗಿ ಸಂದರ್ಶಕರನ್ನು ಶಪಿಸಲಾರಂಭಿಸಿದವು. ಉದ್ಯಾನವನದ ಅಧಿಕಾರಿಗಳು ನಂಬುವುದೇನೆಂದರೆ, ಗಿಳಿಗಳು ಒಟ್ಟಿಗೆ ಇರುವ ಸಮಯದಲ್ಲಿ ಪರಸ್ಪರ ಶಪಿಸುವುದನ್ನು ಕಲಿತಿರಬಹುದು ಎನ್ನುವುದು. ಈ ಬಗ್ಗೆ, ವನ್ಯಜೀವಿ ಉದ್ಯಾನವನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ನಿಕೋಲ್ಸ್, "ಗಿಳಿಗಳ ನಿಂದನೆಯಿಂದ ಎಲ್ಲರೂ ಆಶ್ಚರ್ಯಚಕಿತರಾದರು. ಭೇಟಿ ನೀಡಿದ ಮಕ್ಕಳ ಬಗ್ಗೆ ನಮಗೆ ಸ್ವಲ್ಪ ಚಿಂತೆಯಾಯಿತು" ಎಂದು ಹೇಳಿದರು. ಒಂದು ಗಿಳಿ ನಿಂದಿಸಿದಾಗ ಉಳಿದ ಗಿಳಿಗಳು ನಗಲು ಪ್ರಾರಂಭಿಸಿದ್ದರಿಂದ ಮೃಗಾಲಯಕ್ಕೆ ಬಂದವರಿಗೆ ಮುಜುಗರ ಉಂಟಾಗಿದೆ.

ಹೆಣ್ಣು ಗಿಳಿ?

ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಹಲವರು ಬಹುಶಃ ಇದು ಹೆಣ್ಣುಗಿಳಿಗಳು ಇರಬೇಕು ಎನ್ನುತ್ತಿದ್ದಾರೆ. ಮೊದಲಿಗೆ ಒಟ್ಟಿಗೇ ಇದ್ದಾಗ ಒಬ್ಬರನ್ನೊಬ್ಬರು ನಿಂದಿಸುತ್ತಿದ್ದರು. ಆ ಬಳಿಕ ಎಲ್ಲರೂ ಒಟ್ಟಾಗಿ ಬೇರೆಯವರನ್ನು ನಿಂದಿಸಲು ಶುರು ಮಾಡಿದರು ಎಂದರೆ ಖಂಡಿತವಾಗಿಯೂ ಇವು ಹೆಣ್ಣುಗಿಳಿ ಎಂದು ತಮಾಷೆ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

ಪಶ್ಚಿಮ ಘಟ್ಟದಲ್ಲಿ ಎರಡುತಲೆ ಮಣ್ಣಮುಕ್ಕ ಹಾವನ್ನು ಹೋಲುವ ಹೊಸ ಪ್ರಬೇಧದ ಹಾವು ಪತ್ತೆ!
'ಭಾರತಕ್ಕೆ ಬಾ, ನನ್ನನ್ನು ಮದುವೆಯಾಗು' ಎಂದಿದ್ದ ಯುವಕನ ಮಾತು ನಂಬಿ 4,300 ಕಿ.ಮೀ ಬಂದ ರಷ್ಯನ್ ಯುವತಿ; ಕೊನೆಗೆ ಕಾದಿತ್ತು ಶಾಕ್!