ಒಬ್ಬ ಮಾಡಿದ ಎಡವಟ್ಟಿಗೆ ಇಡೀ ಟೀಮ್‌ಗೆ ಪನಿಶ್‌ಮೆಂಟ್: ಕೆಲವೇ ಗಂಟೆಗಳಲ್ಲಿ ವರ್ಕ್ ಫ್ರಮ್ ಆಫೀಸ್ ಕಡ್ಡಾಯ

Published : Aug 07, 2026, 04:08 PM IST
employee joined a client call while driving 2 hours later the entire team faced mandatory work from office

ಸಾರಾಂಶ

ವರ್ಕ್ ಫ್ರಮ್ ಹೋಮ್ (WFH) ಮಾಡುತ್ತಿದ್ದ ಉದ್ಯೋಗಿಯೊಬ್ಬರ ಕ್ಲೈಂಟ್ ಕಾಲ್‌ನಿಂದಾಗಿ ಕಂಪನಿಯೇ ರಿಟರ್ನ್ ಟು ಆಫೀಸ್ (RTO) ನೀತಿ ಜಾರಿಗೆ ತಂದಿದೆ ಎನ್ನಲಾದ ರೆಡ್ಡಿಟ್ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ವರ್ಕ್ ಫ್ರಮ್ ಹೋಮ್ (WFH) ಮಾಡುತ್ತಿದ್ದ ಉದ್ಯೋಗಿಯೊಬ್ಬರ ಕ್ಲೈಂಟ್ ಕಾಲ್‌ನಿಂದಾಗಿ ಕಂಪನಿಯೇ ರಿಟರ್ನ್ ಟು ಆಫೀಸ್ (RTO) ನೀತಿ ಜಾರಿಗೆ ತಂದಿದೆ ಎನ್ನಲಾದ ರೆಡ್ಡಿಟ್ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ WFH ರದ್ದುಪಡಿಸಲು ಕಾರಣವಾಯಿತೇ? ಅಥವಾ ಕಂಪನಿ ಮೊದಲೇ ಆಫೀಸ್‌ಗೆ ಕರೆಸಿಕೊಳ್ಳಲು ನಿರ್ಧರಿಸಿತ್ತೇ? ಎಂಬ ಪ್ರಶ್ನೆಯೂ ಎದ್ದಿದೆ.

ಒಂದು ವರ್ಷಕ್ಕೂ ಹೆಚ್ಚು ಕಾಲ WFH

ವೈರಲ್ ರೆಡ್ಡಿಟ್ ಪೋಸ್ಟ್ ಪ್ರಕಾರ, ಈ ತಂಡವು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಸಮಸ್ಯೆಗಳಿಲ್ಲದೆ ರಿಮೋಟ್ ಆಗಿ ಕೆಲಸ ಮಾಡುತ್ತಿತ್ತು. ಎಲ್ಲಾ ಕೆಲಸವು ಅವಧಿಯಲ್ಲಿ ಮುಗಿಯುತ್ತಿತ್ತು, ಲಾಭವು ಉತ್ತಮವಾಗಿತ್ತು. ಜೊತೆಗೆ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವುದನ್ನು ಆನಂದಿಸುತ್ತಿದ್ದರು. ಆದರೆ, ತಂಡದ ಒಬ್ಬ ಉದ್ಯೋಗಿಯ ಕ್ಲೈಂಟ್ ಕಾಲ್‌ ಬಳಿಕ ಪರಿಸ್ಥಿತಿ ಬದಲಾಗಿದೆ ಎನ್ನಲಾಗಿದೆ.

ಡ್ರೈವಿಂಗ್ ಮಾಡುತ್ತಲೇ ಕ್ಲೈಂಟ್ ಕಾಲ್‌ಗೆ ಎಂಟ್ರಿ

ರೆಡ್ಡಿಟ್ ಬಳಕೆದಾರರ ಹೇಳಿಕೆಯ ಪ್ರಕಾರ, ಸಹೋದ್ಯೋಗಿಯೊಬ್ಬರು ಕಾರ್ ಚಾಲನೆ ಮಾಡುತ್ತಲೇ ಕ್ಲೈಂಟ್ ಮೀಟಿಂಗ್‌ಗೆ ಸೇರಿದ್ದರು. ಕಾಲ್ ನಡೆಯುತ್ತಿದ್ದ ವೇಳೆ ಅವರ ಕ್ಯಾಮೆರಾ ಆಕಸ್ಮಿಕವಾಗಿ ಆನ್ ಆಗಿದೆ. ಜೋರಾಗಿ ಮ್ಯೂಸಿಕ್ ಕೂಡ ಕೇಳಿಸುತ್ತಿತ್ತು. ಸಹೋದ್ಯೋಗಿಗಳು ಕ್ಯಾಮೆರಾ ಆಫ್ ಮಾಡಿ, ಮೈಕ್ ಮ್ಯೂಟ್ ಮಾಡುವಂತೆ ಸೂಚಿಸಿದ್ದಾರೆ. ಆದರೆ ಗಾಬರಿಗೊಂಡ ಉದ್ಯೋಗಿ ತಪ್ಪಾಗಿ ಹಲವು ಆಯ್ಕೆಗಳನ್ನು ಕ್ಲಿಕ್ ಮಾಡಿದ್ದು, ಕೊನೆಗೆ ಸ್ಕ್ರೀನ್ ಶೇರ್ ಆಗಿದೆ. ಆಗ ಅವರ ಕಂಪ್ಯೂಟರ್‌ನಲ್ಲಿ ವಿಡಿಯೋ ಗೇಮ್ ಓಪನ್ ಆಗಿರುವುದು ಕ್ಲೈಂಟ್ ಮತ್ತು ತಂಡದವರಿಗೆ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಕೆಲವೇ ಗಂಟೆಗಳಲ್ಲಿ HRನಿಂದ ಶಾಕಿಂಗ್ ಘೋಷಣೆ

ಈ ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ಕಂಪನಿಯ HR ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಮುಂದಿನ ತಿಂಗಳಿಂದ ಉದ್ಯೋಗಿಗಳು ಕಡ್ಡಾಯವಾಗಿ ಆಫೀಸ್‌ನಿಂದ ಕೆಲಸ ಮಾಡಬೇಕು, ನಿಗದಿತ ಕೆಲಸದ ಸಮಯ ಪಾಲಿಸಬೇಕು, ಬ್ಯಾಡ್ಜ್ ಟ್ರ್ಯಾಕಿಂಗ್ ವ್ಯವಸ್ಥೆ ಅನುಸರಿಸಬೇಕು ಎಂಬ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ರಿಮೋಟ್ ಕೆಲಸದ ವೇಳೆ ಉದ್ಯೋಗಿಗಳ ವೃತ್ತಿಪರತೆ ಮತ್ತು ಎಂಗೇಜ್‌ಮೆಂಟ್ ಬಗ್ಗೆ ಕಳವಳವಿದೆ ಎಂಬ ಕಾರಣವನ್ನು ಆಡಳಿತ ಮಂಡಳಿ ನೀಡಿದೆ ಎನ್ನಲಾಗಿದೆ.

ಒಬ್ಬನ ತಪ್ಪಿಗೆ ಎಲ್ಲರೂ ಯಾಕೆ ಶಿಕ್ಷೆ?

ಈ ಘಟನೆಗೆ ಸಂಬಂಧಿಸಿದಂತೆ ತಂಡದ ಇತರ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಬ್ಬ ಉದ್ಯೋಗಿಯ ತಪ್ಪಿನಿಂದ WFH ಸೌಲಭ್ಯವನ್ನು ಸರಿಯಾಗಿ ಬಳಸುತ್ತಿದ್ದ ಉಳಿದ ಉದ್ಯೋಗಿಗಳಿಗೂ ತೊಂದರೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಆದರೆ ರೆಡ್ಡಿಟ್‌ನಲ್ಲಿ ಮತ್ತೊಂದು ವಾದವೂ ಜೋರಾಗಿದೆ.

ಕಂಪನಿ ಮೊದಲೇ WFH ನಿಲ್ಲಿಸಲು ನಿರ್ಧರಿಸಿತ್ತು?

ಅನೇಕ ನೆಟ್ಟಿಗರು ಕಂಪನಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಆಡಳಿತ ಮಂಡಳಿಗೆ ಈಗಾಗಲೇ ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆಸಿಕೊಳ್ಳುವ ಉದ್ದೇಶವಿತ್ತು, ಈ ಘಟನೆ ಕೇವಲ ಅದಕ್ಕೆ ನೆಪವಾಯಿತೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರ ಪ್ರಕಾರ, ಇಷ್ಟು ದೊಡ್ಡ ನೀತಿ ಬದಲಾವಣೆಯನ್ನು ಕೇವಲ ಒಬ್ಬ ಉದ್ಯೋಗಿಯ ತಪ್ಪಿನ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ನಂಬುವುದು ಕಷ್ಟ. ಇನ್ನೊಬ್ಬರು, ಜನರನ್ನು ಕಚೇರಿಗೆ ಮರಳಿ ಕರೆತರಲು ಮೊದಲೇ ನಿರ್ಧರಿಸಿದ್ದರು; ಅದಕ್ಕೆ ಒಂದು ನೆಪ ಬೇಕಿತ್ತು ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕ್ಯಾಮೆರಾ ಆನ್ ಎಂದರೆ ಯಾಕೆ ಟೆನ್ಷನ್?

ಕೆಲವರು ಈ ಘಟನೆಯನ್ನು ರಿಮೋಟ್ ಮೀಟಿಂಗ್‌ಗಳಲ್ಲಿನ ಸಾಮಾನ್ಯ ಸಮಸ್ಯೆಗಳಿಗೂ ಹೋಲಿಸಿದ್ದಾರೆ. ವರ್ಚುವಲ್ ಮೀಟಿಂಗ್‌ಗಳಲ್ಲಿ ಮ್ಯಾನೇಜರ್‌ಗಳು ಎಲ್ಲರೂ ಕ್ಯಾಮೆರಾ ಆನ್ ಮಾಡುವಂತೆ ಹೇಳಿದಾಗ ಉದ್ಯೋಗಿಗಳು ಯಾಕೆ ಗಾಬರಿಯಾಗುತ್ತಾರೆ ಎಂಬುದಕ್ಕೆ ಇಂತಹ ಘಟನೆಗಳೇ ಉದಾಹರಣೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ, ಒಬ್ಬ ಉದ್ಯೋಗಿಯ ನಿರ್ಲಕ್ಷ್ಯದಿಂದ ಇಡೀ ತಂಡದ WFH ಅವಕಾಶ ಕಳೆದುಹೋಯಿತೇ, ಅಥವಾ ಕಂಪನಿಗೆ RTO ಜಾರಿಗೆ ತರಲು ಇದು ಕೇವಲ ಒಂದು ನೆಪವೇ? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ.

PREV
Read more Articles on
click me!

Recommended Stories

Viral: ಅಯ್ಯೋ ದೇವರೇ ದೆವ್ವದ ಕಾಟವೋ? ಭೂಕಂಪದ ಸೂಚನೆಯೋ? ಬಾವಿಯ ನೀರು ತನ್ನಷ್ಟಕ್ಕೆ ತಾನೇ ಅಲ್ಲಾಡ್ತಿದೆ!
ಅಲಾಸ್ಕಾದಲ್ಲಿ ಕರಗಿದ ಹಿಮನದಿ, ಜನ್ಮತಳೆದ ಹೊಸ ದ್ವೀಪ! ನಾಸಾ ಉಪಗ್ರಹ ಚಿತ್ರಗಳಲ್ಲಿ ಬಯಲಾಯ್ತು ಪ್ರಕೃತಿಯ ಭೀಕರತೆ!