ಕೊನೆಯ ಕ್ಷಣದವರೆಗೂ ಮಕ್ಕಳಿಗಾಗಿ ಕಾದ ತಂದೆ… ₹5,100 ಕಳುಹಿಸಿ, Video Callನಲ್ಲಿ ಅಂತ್ಯ ಸಂಸ್ಕಾರ ವೀಕ್ಷಿಸಿದ ಪುತ್ರಿಯರು

Published : Aug 06, 2026, 11:35 AM IST
video call funeral

ಸಾರಾಂಶ

Viral News:ಇತ್ತೀಚಿನ ದಿನಗಳಲ್ಲಿ ಸಂಬಂಧ ಯಾವ ರೀತಿಯಲ್ಲಿ ಬದಲಾಗುತ್ತಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಕೊನೆಯ ಕ್ಷಣದವರೆಗೂ ಮಕ್ಕಳ ಬರುವಿಕೆಗಾಗಿ ಕಾದಿದ್ದ ವೃದ್ಧ, ಆದರೆ ಅಂತ್ಯಸಂಸ್ಕಾರಕ್ಕೂ ಬಾರದೆ, ವಿಡಿಯೋ ಕಾಲ್ ನಲ್ಲೆ ತಂದೆಯ ಅಂತ್ಯ ಸಂಸ್ಕಾರ ವೀಕ್ಷಿಸಿದ ಪುತ್ರಿಯರು.

ತಂದೆಯ ಅಂತ್ಯಸಂಸ್ಕಾರಕ್ಕೆ ಬಾರದ ಮಕ್ಕಳು

ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮದಲ್ಲಿ ನಡೆದ ಮನಕಲಕುವ ಘಟನೆ ಸಂಬಂಧಗಳ ಬದಲಾಗುತ್ತಿರುವ ಚಿತ್ರಣವನ್ನು ಮತ್ತೆ ನೆನಪಿಸಿದೆ. 74 ವರ್ಷದ ಬಟ್ಟೆ ವ್ಯಾಪಾರಿ ಶಿವಚರಣ್ ರಾಮರತನ ಗುಪ್ತಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟರೂ, ಅವರ ಮೂವರು ಪುತ್ರಿಯರಲ್ಲಿ ಯಾರೂ ಕೂಡ ಅಂತಿಮ ದರ್ಶನಕ್ಕೆ ಅಥವಾ ಅಂತ್ಯಸಂಸ್ಕಾರಕ್ಕೆ ಹಾಜರಾಗಲಿಲ್ಲ. ಬದಲಿಗೆ, ಅವರು ವಿಡಿಯೋ ಕಾಲ್ ಮೂಲಕ ತಂದೆಯ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದರು ಎಂದು ವೃದ್ಧಾಶ್ರಮದ ಆಡಳಿತ ತಿಳಿಸಿದೆ.

ಮಹಾರಾಷ್ಟ್ರ ಮೂಲದ ಶಿವಚರಣ್ ಗುಪ್ತಾ ಪ್ರತಿಷ್ಟಿತ ಬಟ್ಟೆ ವ್ಯಾಪಾರಿಯಾಗಿದ್ದರು. ಅವರಿಗೆ ಪುತ್ರರಿರಲಿಲ್ಲ. ಮೂವರು ಪುತ್ರಿಯರನ್ನು ಉತ್ತಮವಾಗಿ ಓದಿಸಿ ಸ್ವಾವಲಂಬಿಗಳನ್ನಾಗಿ ಬೆಳೆಸಿದ್ದರು. ಇಬ್ಬರು ಪುತ್ರಿಯರು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಹಿರಿಯ ಮಗಳು ನೇಪಾಳದಲ್ಲಿ, ಎರಡನೇ ಮಗಳು ಉತ್ತರ ಪ್ರದೇಶ ಹಾಗೂ ಮೂರನೇ ಮಗಳು ಮುಂಬೈನಲ್ಲಿ ನೆಲೆಸಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆ ಶಿವಚರಣ ಗುಪ್ತಾ ತಮ್ಮ ಪತ್ನಿ ಮೀನಾ ಗುಪ್ತಾ ಅವರೊಂದಿಗೆ ಸೋನಿಪತ್‌ನ ವೃದ್ಧಾಶ್ರಮಕ್ಕೆ ಬಂದು ನೆಲೆಸಿದ್ದರು. ಕೆಲವು ತಿಂಗಳ ಹಿಂದೆ ಪತ್ನಿ ನಿಧನರಾದ ಬಳಿಕ ಶಿವಚರಣ ಅಲ್ಲಿಯೇ ಏಕಾಂಗಿಯಾಗಿ ವಾಸಿಸುತ್ತಿದ್ದರು.

ಇತ್ತೀಚೆಗೆ ಶಿವಚರಣ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಸುಮಾರು 20 ದಿನಗಳ ಹಿಂದೆಯೇ ಪುತ್ರಿಯರಾದ ಅನಿತಾ, ನಿಶಾ ಮತ್ತು ಪ್ರಿಯಾ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಅವರು ತಂದೆಯನ್ನು ಭೇಟಿಯಾಗಲು ಬಂದಿರಲಿಲ್ಲ. ಹಿಂದೆ ಪುತ್ರಿಯರು ಕರೆ ಮಾಡುತ್ತಿದ್ದರು. ಆದರೆ ಅನಾರೋಗ್ಯ ಹೆಚ್ಚಾದ ಬಳಿಕ ಪುತ್ರಿಯರಿಂದ ಕರೆಗಳೂ ಕಡಿಮೆಯಾಗಿದ್ದವು ಎನ್ನಲಾಗಿದೆ.

ವಿಡೀಯೋ ಕಾಲ್ ನಲ್ಲಿ ಅಂತ್ಯಸಂಸ್ಕಾರ ವೀಕ್ಷಣೆ

ಶಿವಚರಣ್ ಅವರ ನಿಧನದ ಬಳಿಕವೂ ಪುತ್ರಿಯರಿಗೆ ಮಾಹಿತಿ ನೀಡಲಾಗಿದ್ದು, ಅವರು ಬರುವುದಾದರೆ ಅಂತ್ಯಸಂಸ್ಕಾರವನ್ನು ಸ್ವಲ್ಪ ಸಮಯದವರೆಗೆ ಮುಂದೂಡಬಹುದಾಗಿಯೂ ತಿಳಿಸಲಾಗಿತ್ತು. ಆದರೆ ಯಾರೂ ಆಗಮಿಸಲಿಲ್ಲ. ಹಿರಿಯ ಪುತ್ರಿ ಅನಿತಾ ಆನ್‌ಲೈನ್ ಮೂಲಕ ₹5,100 ಕಳುಹಿಸಿ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸುವಂತೆ ಮನವಿ ಮಾಡಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಕಾಲ್‌ನಲ್ಲಿ ತೋರಿಸುವಂತೆ ಕೇಳಿಕೊಂಡಿದ್ದರು. ಬಳಿಕ ಸಮಾಜದ ಸದಸ್ಯರು ಹಾಗೂ ವೃದ್ಧಾಶ್ರಮದ ಸಿಬ್ಬಂದಿ ಸೇರಿ ಅಂತ್ಯಸಂಸ್ಕಾರ ನೆರವೇರಿಸಿದರು. ನಂತರ ಅಸ್ಥಿಗಳನ್ನು ಗಂಗೆಯಲ್ಲಿ ವಿಸರ್ಜಿಸುವ ಜವಾಬ್ದಾರಿಯನ್ನೂ ವೃದ್ಧಾಶ್ರಮವೇ ವಹಿಸಿಕೊಳ್ಳುವಂತೆ ಪುತ್ರಿಯರು ತಿಳಿಸಿರುವುದಾಗಿ ಆಡಳಿತ ಮಾಹಿತಿ ನೀಡಿದೆ.

PREV
Read more Articles on
click me!

Recommended Stories

ಖ್ಯಾತ ಕ್ರಿಕೆಟರ್ ಮನೆ ಮೇಲೆ ಬಾಂಬ್ ದಾಳಿ.. ಸಂಕಷ್ಟದಲ್ಲಿ ಶಕೀಬ್ ಅಲ್ ಹಸನ್..!
ಓದಲೆಂದು ಫೋನ್ ಹಿಡಿದ ಬಾಲಕ ಮರುಕ್ಷಣವೇ ಮಾಡಿದ್ದೇನು? ಮೆಸೇಜ್ ನೋಡಿ ತಂದೆಗೆ ಆಘಾತ!