ದೀಪಾವಳಿ ಹಬ್ಬಕ್ಕೆ ವಿದೇಶದಿಂದ ಸರ್ಪ್ರೈಸ್ ಆಗಿ ಬಂದ ಮಗಳು, ಕಣ್ಣೀರಿಟ್ಟ ಅಪ್ಪ: ಭಾವನಾತ್ಮಕ ವಿಡಿಯೋ

Published : Nov 09, 2026, 12:00 PM IST
Diwali surprise daughter returns home

ಸಾರಾಂಶ

ದೀಪಾವಳಿ ಸಂದರ್ಭದಲ್ಲಿ ಮಗಳು ಸರ್ಪ್ರೈಸ್ ಆಗಿ ಮನೆಗೆ ಎಂಟ್ರಿ ನೀಡಿದ್ದಾಳೆ. ಹಬ್ಬಕ್ಕೆ ಬರಲ್ಲ ಅಂದುಕೊಂಡಿದ್ದ ಮಗಳು ಏಕಾಏಕಿ ಬಂದಾಗ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಭಾವನಾತ್ಮ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ದೀಪಾವಳಿ ನಾಡಿನಲ್ಲೆಡೆ ಸಂಭ್ರಮ ಮನೆ ಮಾಡಿದೆ. ಬೆಳಕಿನ ಹಬ್ಬ ಎಲ್ಲರನ್ನೂ ಒಂದು ಮಾಡುವ ವಿಶೇಷ ದಿನ. ದೂರದ ನಗರಗಳಿಗೆ, ಊರುಗಳಿಗೆ ತೆರಳಿದ್ದ ಮಕ್ಕಳು, ಕುಟುಂಬದ ಸದ್ಯರು ಎಲ್ಲರೂ ಒಂದೇ ಕಡೆ ಸೇರಿ ಒಟ್ಟಾಗಿ ಮಾಡುವ ಹಬ್ಬ ಇದು. ಇಡೀ ಕುಟುಂಬವನ್ನ ಒಂದು ಮಾಡುವ ಹಬ್ಬ.

ಹಬ್ಬಕ್ಕೆ ಮಗಳು ಮನೆಗೆ ಬಂದಾಗ

ಮಗನೋ, ಮಗಳೋ ಓದಲು ಅಥವಾ ಕೆಲಸಕ್ಕೆ ಎಂದು ದೂರದ ಊರುಗಳಿಗೆ ಹೋದವರು ಹಬ್ಬಕ್ಕೆ ಬರಲ್ಲ. ಸಮಯ ಇಲ್ಲ ಎಂದಾಗ ಮನೆಯವರು ಬೇಸರ ಮಾಡಿಕೊಳ್ತಾರೆ. ಊಟ, ತಿಂಡಿ ಮಾಡುವ ಸಂದರ್ಭದಲ್ಲಿ ಅಪ್ಪ-ಅಮ್ಮ ದುಃಖ ಪಡುತ್ತಾರೆ. ಅಂತೆಯೇ ರಿಯಾ ಗೋಯೆಲ್ ಎಂಬ ಯುವತಿಯೊಬ್ಬಳು ಉದ್ಯೋಗಕ್ಕೆ ವಿದೇಶಕ್ಕೆ ಹೋಗಿರುತ್ತಾಳೆ.

ಬಾ ಮಗಳೇ ಹಬ್ಬಕ್ಕೆ ಎಂದು ಅಪ್ಪ-ಅಮ್ಮ ಕರೆದಿರುತ್ತಾರೆ. ಅದಕ್ಕೆ ಪ್ರತಿಯಾಗಿ ಮಗಳು ಸಾರಿ, ಅಪ್ಪ-ಅಮ್ಮ. ಈ ಸಲ ಬರೋಕೆ ಆಗಲ್ಲ ಎಂದಿದ್ದಳು. ಮಗಳು ಬರೋದಕ್ಕೆ ಆಗಲ್ಲ ಎಂದ ಬೇಸರ ಮಾಡಿಕೊಂಡಿದ್ದ ಅಪ್ಪ-ಅಮ್ಮ ಸರಿ. ಈ ಬಾರಿ ಸಿಂಪಲ್ಲಾಗಿ ಹಬ್ಬ ಮಾಡೋಣ ಅಂದ್ಕೊಂಡು ಸುಮ್ಮನ್ನಿದ್ದರು.

ಇತ್ತ ಮಗಳು ರಿಯಾ ಗೋಯೆಲ್ ಪ್ಲಾನ್ ಬೇರೆಯದ್ದೇ ಆಗಿತ್ತು. ಹಬ್ಬ ಸಮೀಪಿಸುತ್ತಿದ್ದಂತೆಯೇ ಅಪ್ಪ-ಅಮ್ಮನಿಗೆ ಸರ್ಪ್ರೈಸ್ ಕೊಡಲು ಬಿಗ್ ಪ್ಲಾನ್ ಮಾಡಿದ್ದಳು. ಮನೆಗೆ ಸರ್ಪ್ರೈಸ್ ಆಗಿ ಎಂಟ್ರಿ ಕೊಡುತ್ತಾಳೆ. ಈ ವಿಡಿಯೋವನ್ನು ರಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ. ಇನ್ನು ವಿಡಿಯೋ ತುಂಬಾ ಭಾವನಾತ್ಮಕವಾಗಿದೆ. ರಿಯಾ ಮನೆಗೆ ಬರಲು ವಿದೇಶದಿಂದ ಹೊರಡಲು ಪ್ಲಾನ್ ಮಾಡುತ್ತಾಳೆ. ಸಂಪೂರ್ಣ ವಿಡಿಯೋವನ್ನು ಮಾಡಿದ್ದಾಳೆ. ಸಿಟಿಯಿಂದ ಬರುವ ಆಕೆ ನೇರವಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾಳೆ. ವಿಮಾನ ಹತ್ತಿ ಅಲ್ಲಿ ಪೋಸ್ ನೋಡುತ್ತಾಳೆ. ವಿಮಾನ ಏರಿ ಹೊರಟು, ಲ್ಯಾಂಡ್ ಆಗಿದ್ದಾಳೆ. ಅಲ್ಲಿಂದ ಟ್ರೈನ್ ಹತ್ತಿ ಪ್ರಯಾಣ ಬೆಳೆಸುತ್ತಾಳೆ. ಟ್ರೈನ್ ಎಳಿದು ನಂತರ ಆಟೋ ಹತ್ತಿ ಮನೆಗೆ ಬರುತ್ತಾಳೆ.

ಆಟೋ ಇಳಿಯುತ್ತಿದ್ದಂತೆಯೇ ಮನೆಯತ್ತ ಧಾವಿಸುತ್ತಾಳೆ. ಮನೆಗೆ ಬಂದು ಮನೆಯ ಬಾಗಿಲು ತಟ್ಟಿ ಬಾಗಿಲು ಮುಂದೆ ನಿಲ್ಲುತ್ತಾಳೆ. ಮನೆಯ ಸೋಫಾ ಮೇಲೆ ಕೂತಿದ್ದ ಅಮ್ಮ, ಸದ್ದಿಲ್ಲದೇ ಮನೆಗೆ ಬಂದ ಮಗಳನ್ನು ನೋಡಿ ಅಚ್ಚರಿಗೆ ಒಳಗಾಗುತ್ತಾಳೆ. ಏನೂ ಮಾತು ಬರದೇ ಸೋಫಾ ಮೇಲೆಯೇ ಕೂತು ಭಾವುಕಳಾಗುತ್ತಾಳೆ. ಸ್ವಲ್ಪ ಸುಧಾರಿಸಿಕೊಂಡು ಮಗಳ ಬಳಿ ಬಂದು ಧಾವಿಸಿ ಜೋರಾಗಿ ತಬ್ಬಿಕೊಳ್ತಾಳೆ. ನಂತರ ಮುತ್ತು ಕೊಟ್ಟು ಭಾವುಕಳಾಗುತ್ತಾಳೆ.

ಮನೆಯಲ್ಲೇ ಕೆಲಸ ಮಾಡುತ್ತಿರುವ ಅಪ್ಪನೂ ಓಡಿ ಬಂದು ಮಗಳನ್ನು ಹಗ್ ಮಾಡುತ್ತಾರೆ. ಅವರೂ ಕೂಡ ಕಣ್ಣೀರು ಇಡುತ್ತಾರೆ. ಈ ಖುಷಿಯನ್ನು ತಡೆಯಲಾಗದೇ, ಅಮ್ಮ ಮಗಳು ಬಂದಿದ್ದಾಳೆ ಎಂದು ಸಂಬಂಧಿಕರಿಗೆ ಕರೆ ಮಾಡಿ ಎಲ್ಲರಿಗೂ ಹೇಳಿ ಖುಷಿ ಪಡುತ್ತಾಳೆ. ಈ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋ ಹಂಚಿಕೊಂಡಿರುವ ರಿಯಾ, ಮನೆಗೆ ಮರಳುವುದು, ದೀಪಾವಳಿ, ದಸರಾ, ಭಾವನಾತ್ಮಕ, ಪೋಷಕರನ್ನು ಅಚ್ಚರಿಗೊಳಿಸಿದೆ. ನನ್ನ ತಾಯಿ ಮತ್ತು ತಂದೆಯನ್ನು ಅಚ್ಚರಿಗೊಳಿಸಿದೆ. ಎಲ್ಲರೂ ಮನೆಗೆ ಹೋಗಿ, ವಿಮಾನ ಏರಿ ಎಂದು ಬರೆದುಕೊಂಡಿದ್ದಾಳೆ.

PREV
Read more Articles on
click me!

Recommended Stories

ಗರ್ಲ್‌ಫ್ರೆಂಡ್ ಜೊತೆ ಸಮೋಸಾ, ಟೀ ಸವಿಯುತ್ತಿದ್ದ ಪತಿ; ದಿಢೀರ್ ಬಂದ ಪತ್ನಿ ಇಬ್ಬರಿಗೂ ಕೊಟ್ಟ ಶಾಕ್, ಮುಂದೇನಾಯ್ತು?
ಬೆಂಗಳೂರಿನ ಟ್ರಾಫಿಕ್, ವಾಯುಮಾಲಿನ್ಯಕ್ಕೆ ಬೇಸತ್ತ ಇಂದಿರಾನಗರದ ನಿವಾಸಿ! ಭಾರತವನ್ನೇ ಬಿಟ್ಟು ಹೋಗಲು ನಿರ್ಧಾರ?