
ಬಹುತೇಕ ಫ್ಯಾಮಿಲಿಯಲ್ಲಿ ಮನೆಗೆ ಅಮ್ಮ ಬರ್ತಾಳೆ ಅನ್ನೋವಾಗಿದ್ದ ಖುಷಿ ಅತ್ತೆ ಬರ್ತಾಳೆ ಅಂದಾಗ ಇರೋದಿಲ್ಲ. ಅತ್ತೆ ಹಾಗೂ ಸೊಸೆ ಹಾವು – ಮುಂಗುಸಿ ಇದ್ದಂಗೆ ಅನ್ನೋ ಮಾತಿದೆ. ಹಾಗಂತ ಅತ್ತೆಯನ್ನು ಸೊಸೆಯರು ಪ್ರೀತಿ ಮಾಡೋದೇ ಇಲ್ಲ ಎಂದಲ್ಲ. ಕೆಲ ಸೊಸೆಯಂದಿರುವ ಅತ್ತೆಯನ್ನು ಅಮ್ಮನಂತೆ ನೋಡಿಕೊಳ್ತಾರೆ. ಅತ್ತೆ ಮನೆಗೆ ಬಂದ್ರೆ ಅವರನ್ನು ನಗ್ತಾ ವೆಲ್ ಕಂ ಮಾಡ್ತಾರೆ. ಇಲ್ಲೊಬ್ಬರು ಅತ್ತೆ ಮನೆಗೆ ಬರ್ತಿದ್ದಂತೆ ಡಾನ್ಸ್ ಮಾಡ್ತಾ ಅವರನ್ನು ಸ್ವಾಗತಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ವೈರಲ್ ಆಗಿದೆ.
ಕಟೆಂಟ್ ಕ್ರಿಯೇಟರ್ ಕೆನವಿತಾ ಗೋಲಾನಿ ಈ ವೀಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದ ಶೀರ್ಷಿಕೆಯೂ ಜನರನ್ನು ಆಕರ್ಷಿಸಿದೆ. ಅತ್ತೆಮನೆ ಮತ್ತೆ ಸಂಪೂರ್ಣವಾದ ಕ್ಷಣ ಅಂತ ಶೀರ್ಷಿಕೆ ಹಾಕಿದ್ದಾರೆ. ಬಹಳ ದಿನಗಳ ಬಳಿಕ ಮನೆಯವರು ಎಲ್ಲರೂ ಒಂದಾಗಿ ಸೇರಿದಾಗ, ಆ ಮನೆಯ ಸಂತೋಷವೇ ಬೇರೆ. ಆ ಭಾವನೆ ಈ ಸಂಪೂರ್ಣ ವಿಡಿಯೋದಲ್ಲಿ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ. ಅದಕ್ಕಾಗಿಯೇ ಈ ವಿಡಿಯೋವನ್ನು ಕೋಟ್ಯಂತರ ಜನರು ಮೆಚ್ಚಿದ್ದಾರೆ. 18 ಮಿಲಿಯನ್ ವೀವ್ಸ್ ಪಡೆದಿದೆ.
ವಿವಾಹೇತರ ಸಂಬಂಧ ಅಪರಾಧವಲ್ಲ: ಆದ್ರೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಾಗ ಪೊಲೀಸರು ಬರುವುದೇಕೆ?
ವೀಡಿಯೊ ಲಿವಿಂಗ್ ರೂಮಿನಲ್ಲಿ ಪ್ರಾರಂಭವಾಗುತ್ತದೆ. ಪ್ರಸಿದ್ಧ ಬಾಲಿವುಡ್ ಹಾಡು ಆಪ್ಕೆ ಆ ಜಾನೇ ಸೆ ಟಿವಿಯಲ್ಲಿ ಪ್ಲೇ ಆಗುತ್ತಿದೆ. ಕೆನವಿತಾ ಹಾಡಿಗೆ ಹೃತ್ಪೂರ್ವಕವಾಗಿ ನೃತ್ಯ ಮಾಡುತ್ತಿದ್ದಾರೆ. ಅವರ ಅತ್ತೆ ಬಾಗಿಲಿನಲ್ಲಿ ನಿಂತು ಸೊಸೆ ಡಾನ್ಸ್ ನೋಡ್ತಿದ್ದಾರೆ. ಒಳಗೆ ಬರಲು ಮುಂದಾಗಿದ್ದ ಅವರು ಸೊಸೆ ಡಾನ್ಸ್ ನೋಡ್ತಾ ಅಲ್ಲೇ ನಿಲ್ತಾರೆ. ಅವರಲ್ಲಿ ಆಶ್ಚರ್ಯ ಮತ್ತು ಸಂತೋಷವನ್ನು ಸ್ಪಷ್ಟವಾಗಿ ಕಾಣಬಹುದು. ಸೊಸೆ ಡಾನ್ಸ್ ಮಾಡ್ತಿದ್ದರೆ ಅತ್ತೆ ನಗ್ತಾ ನಿಧಾನಕ್ಕೆ ಮುಂದೆ ಬಂದು ಅವರನ್ನು ತಬ್ಬಿಕೊಳ್ತಾರೆ. ಪರಸ್ಪರ ಪ್ರೀತಿಯಿಂದ ಇಬ್ಬರೂ ಅಪ್ಪಿಕೊಳ್ಳುತ್ತಾರೆ. ಅತ್ತೆ ಅವರ ಹಣೆಗೆ ಮುತ್ತಿಡುತ್ತಾರೆ. ನಂತರ ಅವರೂ ಡಾನ್ಸ್ ಶುರು ಮಾಡ್ತಾರೆ. ಇಬ್ಬರ ಮುಖಗಳಲ್ಲಿಯೂ ಸಂತೋಷವನ್ನು ಸ್ಪಷ್ಟವಾಗಿ ಕಾಣ್ಬಹುದು.
ಪತಿ ವಿರುದ್ಧವೇ 9 ಕೇಸ್ ದಾಖಲಿಸಿದ ಪತ್ನಿ: ಗಂಡನ 'ಬದುಕು ಜಟಕಾಬಂಡಿ' ಕಥೆ!
ಸೋಶಿಯಲ್ ಮೀಡಿಯಾದಲ್ಲಿ ಜನರು ಸೊಸೆ ಮತ್ತು ಅತ್ತೆಯ ನಡುವಿನ ಮಧುರ ಬಾಂಧವ್ಯವನ್ನು ಹೊಗಳಿದ್ದಾರೆ. ಟಿವಿಯಲ್ಲಿ ತೋರಿಸುವಂತೆ ಎಲ್ಲ ಅತ್ತೆ –ಸೊಸೆ ನಿಜ ಜೀವನದಲ್ಲಿ ಜಗಳ ಮಾಡೋದಿಲ್ಲ. ಇಬ್ಬರ ಮಧ್ಯೆ ಪ್ರೀತಿ, ಗೌರವದ ಸಂಬಂಧವೂ ಇರುತ್ತದೆ ಅಂತ ಕಮೆಂಟ್ ಮಾಡಿದ್ದಾರೆ.