ಗ್ರಾಜುಯೇಷನ್‌ಗೆ ತಿಂಗಳ ಮುನ್ನ ಪುತ್ರಿಯ ಸಾವು… ಕಣ್ಣೀರಿಡುತ್ತಲೇ ಮಗಳ ಕಟ್‌ಔಟ್ ಜೊತೆ ಡಿಗ್ರಿ ಪಡೆದ ತಂದೆ

Published : Aug 10, 2026, 08:39 PM IST
daughter graduation

ಸಾರಾಂಶ

Viral News: ಮಗಳನ್ನು ಕಳೆದುಕೊಂಡ ತೀವ್ರ ದುಃಖದ ಹೊರತಾಗಿಯೂ, ಅವಳ ಕಠಿಣ ಪರಿಶ್ರಮ ಮತ್ತು ಕನಸುಗಳನ್ನು ನನಸಾಗಿಸಲು, ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ತನ್ನ ಮಗಳ ಈ ದೊಡ್ಡ ಸಾಧನೆಯನ್ನು ಶಾಶ್ವತವಾಗಿ ಸ್ಮರಣೀಯವಾಗಿಸಿದ ತಂದೆಯೊಬ್ಬನ ಹೃದಯ ವಿದ್ರಾವಕ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಜನರ ಕಣ್ಣಲ್ಲಿ ನೀರು ತರಿಸುತ್ತಿದೆ.

ಮಗಳು ಇರಲಿಲ್ಲ, ಆದರೆ ಆಕೆಯ ಕನಸು ವೇದಿಕೆಯಲ್ಲಿತ್ತು

ಮಕ್ಕಳ ಸಂತೋಷಕ್ಕಾಗಿ ಪೋಷಕರು ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಅವರ ಕನಸುಗಳಿಗೆ ರೆಕ್ಕೆ ನೀಡಲು ತಮ್ಮ ಸ್ವಂತ ಸಂತೋಷವನ್ನೂ ಬದಿಗಿರಿಸುತ್ತಾರೆ. ಆದರೆ ಕೆಲ ಪೋಷಕರು ಮಕ್ಕಳನ್ನು ಕಳೆದುಕೊಂಡ ನೋವನ್ನು ಹೃದಯದಲ್ಲೇ ಬಚ್ಚಿಟ್ಟುಕೊಂಡು, ಅವರ ಅಪೂರ್ಣ ಕನಸನ್ನು ನನಸು ಮಾಡಲು ಮುಂದಾಗುತ್ತಾರೆ. ಫಿಲಿಪೈನ್ಸ್‌ನಲ್ಲಿ ನಡೆದ ಇಂತಹದ್ದೇ ಒಂದು ಮನಕಲಕುವ ಘಟನೆ ಇದೀಗ ಅನೇಕರ ಕಣ್ಣಲ್ಲಿ ನೀರು ತರಿಸುತ್ತಿದೆ.

ಫಿಲಿಪೈನ್ಸ್‌ನ ಯೂನಿವರ್ಸಿಟಿ ಆಫ್ ಆಂಟಿಕ್ನಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ಪೂರ್ಣಗೊಳಿಸಿದ್ದ ವಿದ್ಯಾರ್ಥಿನಿ ಚೆರಿಲಿನ್ ಕಾಹಿಲಿಗ್ ಅವರ ಗ್ರಾಜುಯೇಷನ್‌ಗೆ ಇನ್ನೇನು ಒಂದು ತಿಂಗಳು ಬಾಕಿ ಇತ್ತು. ತಮ್ಮ ಗ್ರಾಜುಯೇಷನ್ ಸಮಾರಂಭದಲ್ಲಿ ವೇದಿಕೆಯ ಮೇಲೆ ನಿಂತು ಡಿಗ್ರಿ ಪಡೆಯಬೇಕು ಎಂಬುದು ಚೆರಿಲಿನ್ ಅವರ ದೊಡ್ಡ ಕನಸಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಗ್ರಾಜುಯೇಷನ್ ಸಮಾರಂಭಕ್ಕೆ ಸರಿಯಾಗಿ ಒಂದು ತಿಂಗಳು ಮುನ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚೆರಿಲಿನ್ ಮೃತಪಟ್ಟರು. ಮಗಳ ಅಗಲಿಕೆಯ ನೋವಿನಿಂದ ಕುಟುಂಬವೇ ದುಃಖದಲ್ಲಿತ್ತು.

ಮಗಳ ಕನಸನ್ನು ಗೌರವಿಸಿದ ವಿಶ್ವವಿದ್ಯಾಲಯ

ಚೆರಿಲಿನ್ ಅವರ ಪರಿಶ್ರಮ ಮತ್ತು ಅಪೂರ್ಣ ಕನಸಿಗೆ ಗೌರವ ಸಲ್ಲಿಸಲು ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ಸ್ನೇಹಿತರು ವಿಶೇಷ ನಿರ್ಧಾರ ಕೈಗೊಂಡರು. ಗ್ರಾಜುಯೇಷನ್ ಕ್ಯಾಪ್ ಮತ್ತು ಗೌನ್ ಧರಿಸಿರುವ ಚೆರಿಲಿನ್ ಅವರ ಲೈಫ್-ಸೈಜ್ ಕಾರ್ಡ್‌ಬೋರ್ಡ್ ಕಟ್‌ಔಟ್ ಸಿದ್ಧಪಡಿಸಲಾಯಿತು. ಚೆರಿಲಿನ್ ಸ್ವತಃ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರ ಉಪಸ್ಥಿತಿಯ ಭಾವನೆ ಮೂಡಿಸುವಂತೆ ಈ ಕಟ್‌ಔಟ್ ಸಿದ್ಧಪಡಿಸಲಾಗಿತ್ತು. ಅವರ ಹೆಸರನ್ನು ಗ್ರಾಜುಯೇಷನ್ ಸಮಾರಂಭದಲ್ಲಿ ಕರೆಯುವ ಮೂಲಕ ಅವರ ಪರಿಶ್ರಮಕ್ಕೆ ಗೌರವ ಸಲ್ಲಿಸಲಾಯಿತು.

ಕಣ್ಣೀರಿನೊಂದಿಗೆ ಮಗಳ ಬದಲು ಡಿಗ್ರಿ ಪಡೆದ ತಂದೆ

ಚೆರಿಲಿನ್ ಅವರ ಹೆಸರನ್ನು ವೇದಿಕೆಯಲ್ಲಿ ಕರೆಯುತ್ತಿದ್ದಂತೆ, ಅವರ ತಂದೆ ಮಗಳ ಲೈಫ್-ಸೈಜ್ ಕಟ್‌ಔಟ್ ಜೊತೆ ವೇದಿಕೆಯ ಮೇಲೆ ತೆರಳಿ ಆಕೆಯ ಡಿಗ್ರಿಯನ್ನು ಸ್ವೀಕರಿಸಿದರು. ಮಗಳ ಕೈಯಲ್ಲಿ ಇರಬೇಕಿದ್ದ ಡಿಗ್ರಿಯನ್ನು ತಂದೆಯೇ ಕಣ್ಣೀರಿನೊಂದಿಗೆ ಸ್ವೀಕರಿಸಿದ ದೃಶ್ಯ ನೆರೆದಿದ್ದವರ ಮನಸ್ಸನ್ನೂ ಭಾವುಕರನ್ನಾಗಿಸಿತು. ಮಗಳ ಕನಸು ನನಸಾಗಬೇಕು ಎಂಬ ತಂದೆಯ ಪ್ರೀತಿ ಮತ್ತು ನೋವು ಈ ಕ್ಷಣದಲ್ಲಿ ಸ್ಪಷ್ಟವಾಗಿ ಕಾಣಿಸಿತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಭಾವುಕ ಚಿತ್ರಗಳು

ಮಗಳ ಕಟ್‌ಔಟ್ ಜೊತೆ ತಂದೆ ಡಿಗ್ರಿ ಸ್ವೀಕರಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ದೃಶ್ಯಗಳನ್ನು ಕಂಡು ಅನೇಕರು ಭಾವುಕರಾಗಿದ್ದು, ಚೆರಿಲಿನ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

PREV
Read more Articles on
click me!

Recommended Stories

Viral News: ಕೈಯಲ್ಲಿ ಪೊರಕೆ, ಕಣ್ಣಲ್ಲಿ ನೀರು! ಮಹಿಳೆಗೆ ಸಹೋದ್ಯೋಗಿಗಳು ಮಾಡಿದ್ದೇನು? ವಿಡಿಯೋ ವೈರಲ್!
ಅಮ್ಮ ಕೆಲಸದಾಕೆಯಾಗಿ ದುಡಿದ ಮನೆಯನ್ನೇ ಗಿಫ್ಟ್​ ಕೊಟ್ಟ ಮಗ: ಹೃದಯಸ್ಪರ್ಶಿ ವಿಡಿಯೋ ವೈರಲ್​