
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಜನರ ಮನ ಗೆಲ್ಲುತ್ತಿದೆ, ಅದರಲ್ಲಿ ಮಹಿಳಾ ನೈರ್ಮಲ್ಯ ಕಾರ್ಯಕರ್ತೆಯ ಸಹೋದ್ಯೋಗಿಗಳು ಆಕೆಗಾಗಿ ಸಿಹಿ ಅಚ್ಚರಿಯನ್ನು ಸಿದ್ಧಪಡಿಸಿದ್ದಾರೆ. ಈ ಭಾವನಾತ್ಮಕ ಕ್ಷಣ ಕಝಕಿಸ್ತಾನ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆ ಮಹಿಳೆಯನ್ನು ಕಚೇರಿಗೆ ಕರೆದಾಗ, ಅಲ್ಲಿ ತನಗಾಗಿ ಏನೋ ವಿಶೇಷ ಕಾಯುತ್ತಿದೆ ಎಂದು ಆಕೆಗೆ ತಿಳಿದಿರಲಿಲ್ಲ. ಆದರೆ ಅವರು ಉಡುಗರೆ ನೀಡಿದ ಸನ್ನಿವೇಶ ಮಾತ್ರ ಎಲ್ಲರ ಕಣ್ಣಾಲಿಗಳನ್ನು ತೆವಗೊಳಿಸುತ್ತದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ವೀಡಿಯೊದಲ್ಲಿ, ಆ ಮಹಿಳೆ ತನ್ನ ದೈನಂದಿನ ಕೆಲಸದ ಬಟ್ಟೆಯಲ್ಲಿ, ಮಾಪ್ ಹಿಡಿದುಕೊಂಡಿರುವುದು ಕಂಡುಬರುತ್ತದೆ. ಬಹುಶಃ ಅವಳನ್ನು ಕೋಣೆಯನ್ನು ಸ್ವಚ್ಛಗೊಳಿಸಲು ಕರೆಯಲಾಗುತ್ತಿದೆ ಎಂದು ಅವಳು ಭಾವಿಸಿರಬಹುದು. ಆದರೆ ಅವಳು ಕೋಣೆಗೆ ಪ್ರವೇಶಿಸಿದ ತಕ್ಷಣ, ಅಲ್ಲಿನ ಜನರು ಅವಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಅಲ್ಲದೇ ಕೋಣೆಯಲ್ಲಿ ಅವಳಿಗಾಗಿ ಚಾಕೊಲೇಟ್, ಮತ್ತು ಸಿಹಿತಿಂಡಿಗಳ ದೊಡ್ಡ ಸಾಲನ್ನು ಇಡಲಾಗಿತ್ತು. ಆ ಮಹಿಳೆ ಆರಂಭದಲ್ಲಿ ಇದನ್ನು ನೋಡಿ ಸ್ವಲ್ಪ ಆಶ್ಚರ್ಯಚಕಿತಳಾಗಿದ್ದಾಳೆ. ಇದೆಲ್ಲವನ್ನೂ ತನಗಾಗಿ ಏಕೆ ಜೋಡಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಲು ಅವಳಿಗೆ ಕೆಲವು ಕ್ಷಣ ಬೇಕಾಯಿತು. ನಂತರ, ಅವಳ ಮುಖದಲ್ಲಿ ನಗು ಕಾಣಿಸಿಕೊಂಡಿತು ಮತ್ತು ಅವಳು ಸಂತೋಷದಲ್ಲಿ ತೇಲಾಡಿದಳು.
ಅವರ ಕೆಲಸ ಮತ್ತು ಸಮರ್ಪಣೆಗೆ ಕೃತಜ್ಞತೆಯ ಸಂಕೇತವಾಗಿ ಈ ಉಡುಗರೆಯನ್ನು ಅವರಿಗೆ ನೀಡಲಾಗಿದೆ ಎನ್ನಲಾಗಿದೆ. ಪ್ರತಿದಿನ ಅವರು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಕ್ಕಾಗಿ ಅವರ ಸಹೋದ್ಯೋಗಿಗಳು ಈ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ವೀಡಿಯೊದಲ್ಲಿನ ಈ ಕ್ಷಣವು ವಿಶೇಷವಾಗಿದೆ, ಏಕೆಂದರೆ ಶುಚಿಗೊಳಿಸುವಿಕೆಯಂತಹ ಅಗತ್ಯ ಕೆಲಸ ನಿರ್ವಹಿಸುವವರ ಕಠಿಣ ಪರಿಶ್ರಮ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಯಾವುದೇ ಕಚೇರಿ ಅಥವಾ ಸಂಸ್ಥೆ ಸ್ವಚ್ಛವಾಗಿಡುವಲ್ಲಿ ಇವರ ನಿರ್ಣಾಯಕ ಪಾತ್ರವಾಗಿದೆ. ಈ ಪ್ರಕ್ರಿಯೆಗೆ ಬಳಕೆದಾರರು ತುಂಬು ಹೃದಯದಿಂದ ಅಭಿನಂದಿಸುತ್ತಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಅಚ್ಚರಿಯನ್ನು ಶ್ಲಾಘಿಸಿದ್ದಾರೆ. ಕಷ್ಟಪಟ್ಟು ದುಡಿವ ಪ್ರತಿಯೊಬ್ಬ ಉದ್ಯೋಗಿಯೂ ಮನ್ನಣೆಗೆ ಅರ್ಹರು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಚಾಕೊಲೇಟ್‌ಗಳ ಸಂಖ್ಯೆಗೆ ತಮಾಷೆಯ ಪ್ರತಿಕ್ರಿಯೆಗಳನ್ನು ಸಹ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಚಾಕೊಲೇಟ್‌ಗಳ ಜೊತೆಗೆ ಉಡುಗೊರೆ ನೀಡಿದ್ದರೆ ಹಣಕಾಸಿನ ನೆರವು ಅಥವಾ ಉಪಯುಕ್ತ ಉಡುಗೊರೆ ಇನ್ನೂ ಹೆಚ್ಚು ಸಹಾಯಕವಾಗುತ್ತಿತ್ತು ಎಂದು ಭಾವಿಸಿದ್ದಾರೆ. ಈ ವೀಡಿಯೊ ಪ್ರಸ್ತುತ ಜನರಿಗೆ ಒಂದೊಳ್ಳೆ ಸಂದೇಶ ನೀಡುತ್ತದೆ. ಯಾರೊಬ್ಬರ ಕೆಲಸವನ್ನು ಕಡಿಮೆ ಮಾಡುವ ಬದಲು, ಅವರ ಕಠಿಣ ಪರಿಶ್ರಮ ಶ್ಲಾಘಿಸುವುದು ಮುಖ್ಯವಾಗುತ್ತದೆ.