
ಇಂದು ರೀಲ್ಸ್ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್ ಎಂದು ಫೇಮಸ್ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ, ಕೈ-ಕಾಲು ಮುರಿದುಕೊಂಡು ನರಳುತ್ತಿರುವವರೂ ಇದ್ದಾರೆ. ಇಂಥವರ ಬಗ್ಗೆ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತದೆ. ರೈಲು ಹಳಿಗಳ ಮೇಲೆ ನಿಲ್ಲುವುದು, ಬೆಟ್ಟದ ತುದಿಯಲ್ಲಿ ಹೋಗುವುದು... ಹೀಗೆ ರೀಲ್ಸ್ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವವರು ಒಂದೆಡೆಯಾದರೆ, ಚಿತ್ರ-ವಿಚಿತ್ರವಾಗಿ ರೀಲ್ಸ್ ಮಾಡಲು ಹೋಗಿ ಥಳಿತಕ್ಕೆ ಒಳಗಾಗುವವರೂ ಇದ್ದಾರೆ.
ಆದರೆ, ಇಲ್ಲೊಂದು ಘಟನೆಯಲ್ಲಿ ಗಂಡ- ಹೆಂಡತಿ ಸಮುದ್ರ ತೀರದಲ್ಲಿ ರೀಲ್ಸ್ ಮಾಡುತ್ತಿದ್ದಾಗ ತಮ್ಮ ಬಳಿ ಮಗು ಇದೆ ಎನ್ನೋದೇ ಮರೆತಿದ್ದಾರೆ. ಆ ಮಗು ನೀರನ್ನು ಕಂಡು ಖುಷಿಯಿಂದ ಸಮುದ್ರದ ಒಳಗೆ ಹೋಗಿದೆ. ಅಲ್ಲಿಯೇ ಇದ್ದ ಯುವಕನೊಬ್ಬ ಅದನ್ನು ನೋಡಿ, ಮಗುವನ್ನು ರಕ್ಷಿಸಿದ್ದಾನೆ. ಆದರೂ ಈ ಮಹಾನ್ ಅಪ್ಪ-ಅಮ್ಮನಿಗೆ ಅದರ ಅರಿವೇ ಇಲ್ಲ, ರೀಲ್ಸ್ನಲ್ಲಿಯೇ ಮುಳುಗಿದ್ದಾರೆ. ಒಂದು ವೇಳೆ ಆ ಮಗುವನ್ನುಯುವಕ ರಕ್ಷಿಸದೇ ಹೋಗಿದ್ದರೆ, ಈ ರೀಲ್ಸ್ ತಾರೆಯರು ತಾವು ಅಂದುಕೊಂಡಂತೆ ಫೇಮಸ್ ಆಗ್ತಿದ್ದರು, ಆದರೆ ಮಗುವನ್ನು ಕಳೆದುಕೊಳ್ಳುತ್ತಿದ್ದರಷ್ಟೇ. ಎಂಥ ವಿಪರ್ಯಾಸ ಇದು ಎನ್ನಿಸದೇ ಇರಲಾರದು.
ಇತ್ತೀಚೆಗೆ ಜಲಪಾತದ ಮಧ್ಯೆ ನಿಂತುಕೊಂಡು ರೀಲ್ಸ್ ಮಾಡುವ ಸಂದರ್ಭದಲ್ಲಿ, ಪ್ರವಾಹದಲ್ಲಿ ಸಿಲುಕಿಕೊಂಡು ಕುಟುಂಬವೊಂದು ಕೊಚ್ಚಿ ಹೋದ ದೃಶ್ಯ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಅನ್ವಿ ಕಂಬಾರ್ ಎಂಬ 27 ವರ್ಷದ ಯುವತಿ ರೀಲ್ಸ್ ಮಾಡಲು ಕಾರನ್ನು ರಿವರ್ಸ್ ತೆಗೆಯುವಾಗ 300 ಅಡಿ ಆಳದ ಕಂದಕಕ್ಕೆ ಕಾರು ಉರುಳಿ ಸಾವನ್ನಪ್ಪಿದ್ದರು. ಹೀಗೆ ರೀಲ್ಸ್ ಹುಚ್ಚು ಪ್ರಾಣವನ್ನು ಪಡೆಯುತ್ತಿದ್ದರೂ ಅದನ್ನು ಲೆಕ್ಕಿಸದ ಯುವ ಸಮೂಹ ಒಂದೆಡೆಯಾದರೆ, ಇನ್ನೊಂದು ಕಡೆ ಇಂಥ ಅಶ್ಲೀಲ ಎನ್ನುವ ರೀಲ್ಸ್ ಮಾಡಿ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗುವುದೂ ಇದೆ.
आज Husband के साथ समुन्द्र पर घूमने गई थी जहाँ हमने देखा एक पति पत्नी Reel बनाने में इतने मगन थे अपनी बच्ची को पानी में ही छोड़ दिया।
बच्ची समुन्द्र की लहरों में बहने से बच गई एक भय्या ने ध्यान दिया और बचा लिया।
क्या अब Reel बाजी लोगों के लिए इतनी जरूरी हो गई है अपने बच्चों... Real news
— 𝗠𝗮𝗿𝗶𝘆𝗮𝗺_𝗠𝗕𝗗 (@Mariyam_MBD) October 19, 2026