
ಮೈಮೇಲೆ ದೇವರು ಬರುವ ಸಂಪ್ರದಾಯ ಶತಮಾನಗಳಿಂದಲೂ ಇದೆ. ಇದು ಆ ಧರ್ಮ, ಈ ಧರ್ಮ ಅಂತೇನಿಲ್ಲ. ಕೆಲವರು ಇದನ್ನು ಅನುಸರಿಸುವುದು ಇದೆ. ಮೈಮೇಲೆ ದೇವರು, ದೆವ್ವ ಬರುವುದೆಲ್ಲವೂ ಸುಳ್ಳು, ಇದೊಂದು ಮಾನಸಿಕ ಕಾಯಿಲೆ ಎಂದೆಲ್ಲಾ ಸೈನ್ಸ್ ಹೇಳುತ್ತಿದ್ದರೂ, ತಲೆತಲಾಂತರಗಳಿಂದ ಕೆಲವು ಕಡೆಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯದ ಮುಂದೆ ಎಲ್ಲ ವಿಜ್ಞಾನವೂ ಗೌಣ ಆಗುವುದು ಇದೆ. ನಂಬಿಕೆಯ ಮುಂದೆ ಎಲ್ಲವೂ ಠುಸ್. ಆದ್ದರಿಂದ ಮೈಮೇಲೆ ದೇವರು ಬರುವುದು ನಿಜವೋ, ಸುಳ್ಳೋ, ಇದು ಮಾನಸಿಕ ಸಮಸ್ಯೆಯೋ ಅಥವಾ ನಿಜಕ್ಕೂ ಯಾರ ಮೈಮೇಲಾದರೂ ದೇವರು ಬಂದು ಜನರ ಸಮಸ್ಯೆಗೆ ಪರಿಹಾರ ನೀಡುತ್ತಾರೋ ಎನ್ನುವುದು ಯಾರ ತರ್ಕಕ್ಕೂ ನಿಲುಕದ ಮಾತು. ಏಕೆಂದರೆ ಒಬ್ಬೊಬ್ಬರ ಅನಿಸಿಕೆ, ಒಬ್ಬೊಬ್ಬರ ಅನುಭವ ಒಂದೊಂದು ರೀತಿ.
ಆದರೆ, ಇದನ್ನೇ ಬಂಡವಾಳ ಮಾಡಿಕೊಂಡು, ಕೆಲವರು ತಮಗೆ ಬೇಕಾದ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಮೈಮೇಲೆ ದೇವರನ್ನು ಬರಿಸಿಕೊಳ್ಳುವುದು ಇದೆ. ಈ ಡೋಂಗಿಗೆ ಕೆಲವರು ಭಯಭೀತರಾದರೆ, ಮತ್ತೆ ಕೆಲವು ಕಡೆಗಳಲ್ಲಿ ಇವರ ಆಟ ನಡೆಯುವುದಿಲ್ಲ. ಅಂಥದ್ದೇ ಒಂದು ಕುತೂಹಲ ಎನ್ನುವಂಥ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಎಲ್ಲಿಯ ವಿಡಿಯೋ ಎನ್ನುವುದು ತಿಳಿದಿಲ್ಲ. ಅಮಿತ್ ಥೋಮರ್ ಎನ್ನುವವರು ಇದನ್ನು ಸೋಷಿಷಯಲ್ ಮೀಡಿಯಾದಲ್ಲಿ ಶೇರ್ಮಾಡಿಕೊಂಡಿದ್ದಾರೆ.
ಇದರಲ್ಲಿ ಮಹಿಳೆಯೊಬ್ಬಳು ಗಂಡನಿಗೆ ಬೈಕ್ ಕೊಳ್ಳಲು ಷೋರೂಮ್ಗೆ ಹೋಗಿದ್ದಾಳೆ. ಅಲ್ಲಿ ಒಂದು ಇಷ್ಟವಾದ ಬೈಕ್ ಬೆಲೆ ಕೇಳಿದಾಗ ಮಾಲೀಕ 1ಲಕ್ಷದ 10 ಸಾವಿರ ಎಂದಿದ್ದಾನೆ. ಸ್ವಲ್ಪ ಕಮ್ಮಿ ಮಾಡಿಕೊಳ್ಳುವಂತೆ ಮಹಿಳೆ ಚೌಕಾಸಿ ಮಾಡಿದ್ದಾಳೆ.ಕೊನೆಯ ಪಕ್ಷ 10 ಸಾವಿರ ಆದ್ರೂ ಕಡಿಮೆ ಮಾಡಿ ಎಂದಾಗ, ಅದು ಸಾಧ್ಯವೇ ಇಲ್ಲ ಎಂದು ಮಾಲೀಕ ಹೇಳುತ್ತಿದ್ದಂತೆಯೇ ಮಹಿಳೆಯ ಮೈಮೇಲೆ 'ದೇವರ' ಆಗಮನ ಆಗಿದೆ. ಅಲ್ಲಿಯೇ ಮಹಿಳೆ ವಿಚಿತ್ರವಾಗಿ ವರ್ತಿಸುತ್ತಾ, ತಲೆ ಎಲ್ಲಾ ತಿರುಗಿಸುತ್ತಾ ಮಾಲೀಕ ಸೇರಿದಂತೆ ಷೋರೂಮ್ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದ್ದಾಳೆ.
ಕೊನೆಗೆ ಆಕೆಯ ಮೈಮೇಲೆ ಇರುವ 'ದೇವರು' ನಾನು ದೇವಿ. ನೀವು ಈ ಬೈಕ್ಗೆ ಹೆಚ್ಚು ಬೇಡಿಕೆ ಇಡುತ್ತಿದ್ದೀರಿ. ಈತ ನನ್ನ ಭಕ್ತ. ಕೊನೆಯ ಪಕ್ಷ 10 ಸಾವಿರ ರೂಪಾಯಿ ಕಡಿಮೆ ಮಾಡು. ಇದು ದೇವಿಯ ಆದೇಶ. ಇಲ್ಲದಿದ್ದರೆ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ದೇವಿಯ ಅವಕೃಪೆಗೆ ತುತ್ತಾಗುವಿ ಎಂದೆಲ್ಲಾ ಕಿರುಚುತ್ತಾ, ಕಣ್ಣು ಗುಡ್ಡೆಗಳನ್ನು ಹೊರಳಿಸುತ್ತಾ ಕೂಗಿದ್ದಾಳೆ. ಈ ಅವತಾರ ನೋಡಿ ಮಾಲೀಕ ಆರಂಭದಲ್ಲಿ ಬೆಚ್ಚಿಬಿದ್ದರೂ, ಕೊನೆಗೆ ಇದು ನಾಟಕ ಎನ್ನುವುದು ತಿಳಿದು, 1.10 ಲಕ್ಷಕ್ಕೆ ಬೇಕಿದ್ದರೆ ಕೊಂಡೊಯ್ಯಿರಿ, ಹಣ ಕಡಿಮೆ ಮಾಡಲು ಆಗುವುದಿಲ್ಲ ಎಂದು ಅಲ್ಲಿಂದ ಅವರನ್ನು ಸಾಗ ಹಾಕಿದ್ದಾನೆ!
एक औरत अपने पति के मोटरसाइकिल खरीदने के लिए गई थी, शोरूम वाले ने बाइक की कीमत 1 लाख 10 हजार रुपए बताई...
इतना सुनते ही वो महिला अजीब सी हरकत करते हुए जोर जोर से चिल्लाने लगी, उस इस हरकत को देखकर शोरूम में भगदड़ मच गई...
ये सब सुनते ही उस शोरुम का मालिक तुरंत उस औरत और आदमी के पास पहुंचा और औरत के पति से बोला कि इनको कोई दौरा पड़ा है क्या...?
अब वो महिला शोरुम के मालिक से बोली कि मैं माता रानी हूं, तुम इस बाइक के ज्यादा पैसे मांग रहे हो...
मै अपने भक्तों को ऐसे लूटने नहीं दूंगी, तुरंत इसके 10 हजार कम करके 1 लाख में मेरे भक्तों को दे दो, वरना तुम्हारे इस शोरूम को आज मेरे कहर से कोई नहीं बचा सकता है...
इतना डराने के बावजूद भी शोरूम का मालिक उस बाइक की कीमत जरा भी कम नहीं करता है...
— Amit Tomar (@AmitNationlist) October 17, 2026