3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ

Published : Jul 19, 2026, 07:17 PM ISTUpdated : Jul 19, 2026, 07:30 PM IST
China

ಸಾರಾಂಶ

ಶ್ರೀಮಂತ ಮಹಿಳೆಯೊಬ್ಬಳು ತನ್ನ 3 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಕಾರಿನಲ್ಲಿ ಬಂದು ರೆಸ್ಟೋರೆಂಟ್‌ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಸಂಪತ್ತಿನ ಹೊರತಾಗಿಯೂ ಕೆಲಸ ಮಾಡಲು ಇಷ್ಟಪಡುವ ಈಕೆಯ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈಕೆ ಮನೆಗೆಲಸದಾಕೆ. ಹಲವಾರು ಮನೆಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಇವಳದ್ದು. ಆದರೆ ಪ್ರತಿ ಮನೆಗೆ ಹೋಗುವಾಗ ಅವಳು ಹೋಗುವುದು ತನ್ನ 3 ಕೋಟಿ ರೂಪಾಯಿಯ ಕಾರಿನಲ್ಲಿ! ಹೆಚ್ಚಾಗಿ ಈಕೆ ರೆಸ್ಟೋರೆಂಟ್​ಗಳಲ್ಲಿಯೂ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಇದೀಗ ಈ ಮಹಿಳೆ ಸಿಕ್ಕಾಪಟ್ಟೆ ವೈರಲ್​ ಆಗಿದ್ದಾಳೆ. ರಾತ್ರೋರಾತ್ರಿ ಫೇಮಸ್​ ಆಗಿರೋ ಈಕೆ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸ್ತಿದ್ದಾಳೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್, ವೀಬೊದಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ನಲ್ಲಿ ಈ ಮಹಿಳೆಯ ವಿಡಿಯೋ ಶೇರ್​ ಮಾಡಲಾಗಿದೆ. ಇದರಲ್ಲಿ ಮಹಿಳೆ ಪ್ರಯಾಣಿಸುವಾಗ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಬಹುದಾಗಿದೆ.

ಎಲ್ಲಿದು ಘಟನೆ?

ಅಂದಹಾಗೆ ಈಕೆ ಭಾರತದವಳಲ್ಲ, ಬದಲಿಗೆ ಚೀನಾದಲ್ಲಿ ನಡೆಯುತ್ತಿರುವ ಘಟನೆ. ಚೀನಾದ ಚೆಂಗ್ಡುವಿನಲ್ಲಿ ವೃದ್ಧ ಮಹಿಳೆಯ ದೈನಂದಿನ ಪಾತ್ರೆ ತೊಳೆಯುವ ದಿನಚರಿ ವೈರಲ್ ಆಗಿದ್ದು ಐಷಾರಾಮಿ ಕಾರಿನಲ್ಲಿ ಬರುವುದನ್ನು ನೊಡಬಹುದು.

ವಿಡಿಯೋದ ಸ್ಕ್ರೀನ್‌ಶಾಟ್‌ಗಳು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ಗುಲಾಬಿ ಬಣ್ಣದ ಪಟ್ಟೆ ಶರ್ಟ್, ರಬ್ಬರ್ ಬೂಟುಗಳು ಮತ್ತು ಏಪ್ರನ್ ಧರಿಸಿದ ಮಹಿಳೆ ಐಷಾರಾಮಿ ಕಾರಿನಿಂದ ಹೊರಬಂದು ನಂತರ ರೆಸ್ಟೋರೆಂಟ್‌ಗೆ ಪ್ರವೇಶಿಸುವುದನ್ನು ಇದು ತೋರಿಸುತ್ತದೆ. ರಾತ್ರೋರಾತ್ರಿ ಈ ಮಹಿಳೆ ವರ್ಲ್ಡ್​ ಫೇಮಸ್​ ಆಗಿದ್ದಾಳೆ.

ಯಾರೀಕೆ?

ವರದಿಗಳ ಪ್ರಕಾರ, ಈ ಮಹಿಳೆ ಶ್ರೀಮಂತ ಕುಟುಂಬದಿಂದ ಬಂದವಳು ಮತ್ತು ಆಕೆಯ ಮಗಳು ಪ್ರತಿದಿನ ಬೆಳಿಗ್ಗೆ ತನ್ನ ಐಷಾರಾಮಿ ಬೆಂಟ್ಲಿ ಕಾರಿನಲ್ಲಿ ಅವಳನ್ನು ರೆಸ್ಟೋರೆಂಟ್‌ಗೆ ಬಿಡುತ್ತಾಳೆ. ಅವಳ ಸಂಪತ್ತಿನ ಹೊರತಾಗಿಯೂ, ಅವಳು ರೆಸ್ಟೋರೆಂಟ್‌ನಲ್ಲಿ ಡಿಶ್‌ವಾಶರ್ ಮತ್ತು ಕ್ಲೀನರ್ ಆಗಿ ಕೆಲಸ ಮಾಡಲು ಆರಿಸಿಕೊಂಡಿದ್ದಾಳೆ.

ಈ ಪೋಸ್ಟ್ ಆನ್‌ಲೈನ್‌ನಲ್ಲಿ ಪ್ರಶಂಸೆಯ ಅಲೆಯನ್ನು ಸೃಷ್ಟಿಸಿದೆ. ಅನೇಕ ಬಳಕೆದಾರರು ಅವರ ನಿರ್ಧಾರವನ್ನು ಬುದ್ಧಿವಂತ ನಿರ್ಧಾರ ಎಂದು ಹೊಗಳುತ್ತಿದ್ದಾರೆ. ದೀರ್ಘಾಯುಷ್ಯಕ್ಕೆ ಮಾನವ ಸಂಪರ್ಕಗಳು ನಿರ್ಣಾಯಕವಾಗಿ ಈ ವಯಸ್ಸಿನಲ್ಲಿಯೂ ಈಕೆಯ ಸಾಧನೆ ಮೆಚ್ಚುವಂಥದ್ದು ಎನ್ನುತ್ತಿದ್ದಾರೆ.

PREV
Read more Articles on
click me!

Recommended Stories

12 ಬಾರಿ ಗೂಗಲ್‌ನಿಂದ ರಿಜೆಕ್ಟ್! 13ನೇ ಪ್ರಯತ್ನದಲ್ಲಿ ಕೋಟಿ ಆಫರ್ ಗಿಟ್ಟಿಸಿಕೊಂಡ ಟೆಕ್ಕಿಯ ಕಥೆ ವೈರಲ್..!
ದೇಶ ಕಾದ ಯೋಧ ಈಗ ಹೊಲದಲ್ಲಿ ಹೀರೋ, ಡ್ರ್ಯಾಗನ್ ಫ್ರೂಟ್ ಕೃಷಿಯಿಂದ ಭರ್ಜರಿ ಆದಾಯ