ಶವಗಾರದಲ್ಲಿ 50ಕ್ಕೂ ಹೆಚ್ಚು ಕೊಳೆತ ಮೃತದೇಹ ಬಚ್ಚಿಟ್ಟ ಸಿಬ್ಬಂದಿ.. ಇಲಿ, ಹುಳುಗಳ ಮಧ್ಯೆ ರಾಶಿರಾಶಿ ಬಾಡಿಗಳು

Published : Aug 08, 2026, 11:45 AM IST
funeral home

ಸಾರಾಂಶ

ಕಳೆದ ಹಲವು ತಿಂಗಳುಗಳಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡುತ್ತಿದ್ದರು. ಅಧಿಕಾರಿಗಳು ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ಕಂಡು ಹೌಹಾರಿದ್ದಾರೆ. ಸರಿಯಾದ Refrigeration ವ್ಯವಸ್ಥೆಯಿಲ್ಲದ ಕೊಠಡಿಗಳಲ್ಲಿ ಮೃತದೇಹಗಳನ್ನು ರಾಶಿ ಹಾಕಲಾಗಿತ್ತು. ಏನಿದು ಕೇಸ್?

ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಅಮೆರಿಕಾದ ಚಿಕಾಗೋದಲ್ಲಿ ನಡೆದಿದೆ. ಇಲ್ಲಿನ ಅಂತ್ಯಕ್ರಿಯೆ ನಡೆಸುವ ಸಂಸ್ಥೆಯೊಂದರಲ್ಲಿ (Funeral Home) ಕನಿಷ್ಠ 50ಕ್ಕೂ ಹೆಚ್ಚು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಘಟನೆಯು ಇಡೀ ನಗರವನ್ನೇ ಬೆಚ್ಚಿಬೀಳಿಸಿದ್ದು, ಮೃತದೇಹಗಳ ಬಗ್ಗೆ ತೋರಿರುವ ನಿರ್ಲಕ್ಷ್ಯ ಅಮಾನವೀಯತೆಯ ಪರಮಾವಧಿ ಎಂದು ಬಣ್ಣಿಸಲಾಗುತ್ತಿದೆ...

ಏನಿದು ಪ್ರಕರಣ?

ಚಿಕಾಗೋದ 'ಸೌತ್ ಚಿಕಾಗೋ ಚಾಪೆಲ್' ಎಂಬ ಅಂತ್ಯಕ್ರಿಯೆ ಸಂಸ್ಥೆಯಿಂದ ಕಳೆದ ಹಲವು ತಿಂಗಳುಗಳಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡುತ್ತಿದ್ದರು. ಅಧಿಕಾರಿಗಳು ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ಕಂಡು ಹೌಹಾರಿದ್ದಾರೆ. ಸರಿಯಾದ Refrigeration ವ್ಯವಸ್ಥೆಯಿಲ್ಲದ ಕೊಠಡಿಗಳಲ್ಲಿ ಮೃತದೇಹಗಳನ್ನು ರಾಶಿ ಹಾಕಲಾಗಿತ್ತು. ಆ ಮೃತದೇಹಗಳು ಕೊಳೆತು ನಾರುತ್ತಿದ್ದವು. ಅವುಗಳ ಮೇಲೆ ಇಲಿಗಳು ಮತ್ತು ಹುಳುಗಳು ಹರಿದಾಡುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂಪತಿ ಕೈಚಳಕ

ಈ ಸಂಸ್ಥೆಯನ್ನು ಜೊಹಾನ್ನಾ ಮಾರ್ಗನ್ ಮತ್ತು ಆಕೆಯ ಪತಿ ಕ್ಲಾರ್ಕ್ ಮಾರ್ಗನ್ ಎಂಬ ದಂಪತಿ ನಡೆಸುತ್ತಿದ್ದಾರೆ. ಈ ದಂಪತಿಗೆ ಇಂತಹ ಕೆಲಸ ಹೊಸದೇನಲ್ಲ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಕಳೆದ ವರ್ಷವಷ್ಟೇ ಇವರ ಒಡೆತನದ ಮತ್ತೊಂದು ಸಂಸ್ಥೆಯ ಪರವಾನಗಿಯನ್ನು ಸರ್ಕಾರ ರದ್ದುಗೊಳಿಸಿತ್ತು. ಅಲ್ಲಿಯೂ ಸಹ ಮೃತದೇಹಗಳನ್ನು ಅಸಮರ್ಪಕವಾಗಿ ಸಂಗ್ರಹಿಸಿಡಲಾಗಿತ್ತು ಮತ್ತು ನೂರಾರು ಕುಟುಂಬಗಳಿಗೆ ಚಿತಾಭಸ್ಮವನ್ನೇ ನೀಡಿರಲಿಲ್ಲ. ಈಗಿನ ಪ್ರಕರಣ ಬೆಳಕಿಗೆ ಬರುವ ಒಂದು ದಿನ ಮೊದಷ್ಟೇ ಜೊಹಾನ್ನಾ ಅವರ ಪರವಾನಗಿಯನ್ನು ಅಮಾನತುಗೊಳಿಸಲಾಗಿತ್ತು. ಆದರೂ ಈ ದಂಪತಿ ತಮ್ಮ ದಂಧೆಯನ್ನು ಮುಂದುವರಿಸಿದ್ದರು.

ಮೃತ ಕುಟುಂಬಸ್ಥರ ಆಕ್ರೋಶ

ಸುದ್ದಿ ತಿಳಿಯುತ್ತಿದ್ದಂತೆಯೇ ಶವಾಗಾರದ ಮುಂದೆ ಕುಟುಂಬಸ್ಥರು ಜಮಾಯಿಸಿದ್ದಾರೆ. 55 ವರ್ಷದ ಲತಾಶಾ ಜಾನ್ಸನ್ ಎಂಬುವವರು ಕಣ್ಣೀರು ಹಾಕುತ್ತಾ, ನಾನು ನನ್ನ ತಾಯಿಯ ಅಂತ್ಯಕ್ರಿಯೆಯನ್ನು ನಿನ್ನೆಯಷ್ಟೇ ಇಲ್ಲೇ ಮಾಡಿದ್ದೆ. ಈಗ ಅವರ ಮೃತದೇಹವನ್ನು ಮತ್ತೆ ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆ ಮಾಡಬೇಕಿದೆ ಎನ್ನುತ್ತಿದ್ದಾರೆ. ನನ್ನ ಹೃದಯವೇ ಒಡೆದುಹೋದಂತಾಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಇದು ಕೇವಲ ಚಿಕಾಗೋದ ಕಥೆಯಲ್ಲ. ಕಳೆದ ಮೂರು ವರ್ಷಗಳಲ್ಲಿ ಅಮೆರಿಕಾದ ವಿವಿಧ ಭಾಗಗಳಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಕೊಲೊರಾಡೋದಲ್ಲಿ 24 ಕೊಳೆತ ಮೃತದೇಹಗಳು ಪತ್ತೆಯಾಗಿದ್ದವು. 2024ರಲ್ಲಿ ಜಾರ್ಜಿಯಾದಲ್ಲಿ 18 ಮೃತದೇಹಗಳು ಪತ್ತೆಯಾಗಿದ್ದವು. 2023ರಲ್ಲಿ ಇಂಡಿಯಾನಾದಲ್ಲಿ 31 ಮತ್ತು ಕೊಲೊರಾಡೋದಲ್ಲಿ ಬರೊಬ್ಬರಿ 200 ಮೃತದೇಹಗಳು ಇಂತಹದ್ದೇ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಮೃತದೇಹಗಳನ್ನು ಗುರುತಿಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ತಪ್ಪಿತಸ್ಥ ದಂಪತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

PREV
Read more Articles on
click me!

Recommended Stories

Yash Toxic Trailer Launch: ಯಶ್ ಸಿನಿಮಾ 'ಟಾಕ್ಸಿಕ್' ಟ್ರೇಲರ್‌ ಲಾಂಚ್‌- ಬೆಂಗಳೂರಿಗೆ ಬಂದಿಳಿದ ಚೆಲುವೆ ಹುಮಾ ಖುರೇಷಿ!
ತಪ್ಪೇ ಮಾಡಿರಲಿಲ್ಲ ಆದರೂ 14 ವರ್ಷ ಜೈಲಲ್ಲಿ ಕಳೆದರು.. ಯಾರದ್ದೋ FSL ನೋಡಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದ ಕೋರ್ಟ್‌!