Viral Video: ಮದರಸಾದಲ್ಲಿ ಕುರಾನ್ ಓದುತ್ತಿದ್ದ ಮಗುವಿನ ಮೇಲೆ ಬಿದ್ದ ಸೀಲಿಂಗ್ ಫ್ಯಾನ್! ದೃಶ್ಯ ವೈರಲ್

Published : Aug 09, 2026, 09:37 PM IST
Ceiling Fan Falls On Child At Madrasa Shocking Video Sparks Safety Debate

ಸಾರಾಂಶ

ಮದ್ರಸಾವೊಂದರಲ್ಲಿ ಪಾಠ ಕಲಿಯುತ್ತಿದ್ದ ಮಗುವಿನ ಮೇಲೆ ಸೀಲಿಂಗ್ ಫ್ಯಾನ್ ಬಿದ್ದು ಗಾಯಗೊಂಡಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ಮಗುವೊಂದು ಕುರಾನ್ ಪಠಣ ಮಾಡುತ್ತಿದ್ದ ವೇಳೆ ಮೇಲಿನಿಂದ ಸೀಲಿಂಗ್ ಫ್ಯಾನ್ ಬಿದ್ದ ಆಘಾತಕಾರಿ ಘಟನೆಯ ವಿಡೀಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದುರಂತದಿಂದ ಮಗು ಗಂಭೀರ ಗಾಯಗೊಂಡಿದೆ. ವಿಡಿಯೋದಲ್ಲಿ, ಸುಮಾರು ಮಕ್ಕಳು ಒಟ್ಟಿಗೆ ಕುಳಿತು ಅಧ್ಯಯನ ಮಾಡುತ್ತಿರುವುದು ಕಾಣಿಸಿದೆ. ಆಗ ಇದ್ದಕ್ಕಿದ್ದಂತೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಕಳಚಿಬಿದ್ದು, ಅಲ್ಲೇ ಕುಳಿತಿದ್ದ ಬಾಲಕನೊಬ್ಬನ ಮೇಲೆ ಬಿದ್ದಿದೆ.

ಮಗುವಿನ ಸಹಾಯಕ್ಕೆ ಓಡಿಬಂದ ಮೌಲ್ವಿ

ಫ್ಯಾನ್ ಬಿದ್ದ ರಭಸಕ್ಕೆ ಮಗು ನೋವಿನಿಂದ ಚೀರುತ್ತಿದ್ದಂತೆ, ತಕ್ಷಣ ಅಲ್ಲೇ ಇದ್ದ ಮೌಲ್ವಿಯೊಬ್ಬರು ಓಡಿ ಬಂದು, ಗಾಯಗೊಂಡ ಮಗುವನ್ನು ಎತ್ತಿಕೊಂಡು ಸಮಾಧಾನಪಡಿಸಿದ್ದಾರೆ. ನಂತರ ಚಿಕಿತ್ಸೆಗಾಗಿ ಆ ಮಗುವನ್ನು ಅಲ್ಲಿಂದ ಕರೆದೊಯ್ದಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಅಲ್ಲಿದ್ದ ಬೇರೆ ಮಕ್ಕಳು ಬೆಚ್ಚಿಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: Viral Video: ಗ್ಲಾಸ್ ಒಡೆದು ಹೋಗಲಿ , ಆದ್ರೆ ನಿಮ್ಮ ಜೀವ ಮುಖ್ಯ! ಕೆಲಸಗಾರನ ಮೇಲೆ ಸಿಟ್ಟಾಗದ ಮನೆ ಮಾಲೀಕನಿಗೆ ಸಲಾಂ

ಮಗುವಿಗೆ ಆಗಿರುವ ಗಾಯಗಳ ಸ್ವರೂಪ ಮತ್ತು ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಾಗಲಿ, ಈ ಘಟನೆ ನಡೆದ ಮದರಸಾ ಎಲ್ಲಿದೆ, ಈ ಬಗ್ಗೆ ಯಾವುದೇ ಅಧಿಕೃತ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ವಿವರಗಳು ಕೂಡ ವೈರಲ್ ಆಗಿರುವ ವಿಡಿಯೋದಿಂದ ತಿಳಿದುಬಂದಿಲ್ಲ.

ಸುರಕ್ಷತೆ ಬಗ್ಗೆ ಚರ್ಚೆ ಹುಟ್ಟುಹಾಕಿದ ವಿಡಿಯೋ

ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳು ಓದುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ಹೇಗೆ ಬೀಳಲು ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Nagarbhavi schoking: ಬಿರಿಯಾನಿಗೆ ಚಟ್ನಿ ಕೊಡದಿದ್ದಕ್ಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು!

ಮಕ್ಕಳು ಓದುವ ಕಟ್ಟಡಗಳ ನಿರ್ವಹಣೆ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಒಂದು ವೇಳೆ ಇದು ನಿರ್ಲಕ್ಷ್ಯದಿಂದ ಆಗಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಇನ್ನು ಕೆಲವರು ಈ ದೃಶ್ಯ ನೋಡಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಮಗು ಬದುಕುಳಿದಿದ್ದೇ ಅದೃಷ್ಟ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

Toxic: ಯಶ್‌ಗೂ ಮೊದಲು ರಾಧಿಕಾ ಪಂಡಿತ್‌ಗೆ ನಿರ್ಮಾಪಕ ಕೆವಿಎನ್ ವೆಂಕಟ್ 'ಧನ್ಯವಾದ' ಹೇಳಿದ್ದೇಕೆ? ಆ ಸೀಕ್ರೆಟ್ ಇಲ್ಲಿದೆ ನೋಡಿ!
Viral: ಮೆಟ್ರೋದಲ್ಲಿ ವಾಷಿಂಗ್ ಮೆಷಿನ್ ಕಮಾಲ್! ಕೊಚ್‌ನಲ್ಲೇ ಹಸಿ ಬಟ್ಟೆ ಒಣಗಾಕಿದ ಭೂಪ; ಮುಂದೆ ಆಗಿದ್ದೇನು?