ಕಳ್ಳರ ಎದೆ ನಡುಗಿಸಿದ ಈ 'ಲೇಡಿ ಸಿಸಿಟಿವಿ'! ಇವಳ ಗುರಾಯಿಸಿದ್ರೆ ಮುಗೀತು ನಿಮ್​ ಕಥೆ

Published : May 26, 2026, 11:58 AM IST
Lady CCTV

ಸಾರಾಂಶ

ಕಳ್ಳರನ್ನು ಸುಲಭವಾಗಿ ಪತ್ತೆಹಚ್ಚಲು ಮಹಿಳೆಯ ಆಕೃತಿಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸುವ ಹೊಸ ತಂತ್ರವನ್ನು ಪರಿಚಯಿಸಲಾಗಿದೆ. 'ನವೀನ ಸ್ಥಿರೀಕರಣ' ಎಂಬ ಮಾನಸಿಕ ತತ್ವವನ್ನು ಬಳಸಿ, ಈ ಅಸಾಮಾನ್ಯ ವಿನ್ಯಾಸವು ಕಳ್ಳರ ಗಮನವನ್ನು ಸೆಳೆದು, ಅವರ ಮುಖವನ್ನು ಸ್ಪಷ್ಟವಾಗಿ ಸೆರೆಹಿಡಿಯಲು ಸಹಾಯ ಮಾಡುತ್ತದೆ.

ಸಿಸಿಟಿವಿ ಇಲ್ಲದ ಕಡೆಗಳಲ್ಲಿ, ಬೇರೆಯವರ ಮನೆಯ ಮೇಲೆ ಯಾವಾಗಲೂ ಕಣ್ಣು ಇಡುವವರನ್ನು ಅದರಲ್ಲಿಯೂ ಹೆಚ್ಚಾಗಿ ಹೆಂಗಸರನ್ನು ಸಿಸಿಟಿವಿ ಎಂದು ಕರೆಯುವುದು ಉಂಟು. ಈ ಬಗ್ಗೆ ಹಲವಾರು ರೀತಿಯ ಮೀಮ್ಸ್​ಗಳೂ ಬರುತ್ತವೆ. ಕೆಲವರಿಗೆ ತಮ್ಮ ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯದಿದ್ದರೂ ಅಕ್ಕ ಪಕ್ಕದ ಮನೆಗಳಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಕುತೂಹಲ. ಅದಕ್ಕಾಗಿ ಒಂದು ಕಣ್ಣು ಅತ್ತ ಇಟ್ಟಿರುತ್ತಾರೆ. ಅಂಥವರಿಗೆ ಸಿಸಿಟಿವಿ ಎನ್ನುವುದು ಉಂಟು.

ಆದರೆ ಇಲ್ಲಿ ಹೇಳುತ್ತಿರುವ ಸಿಸಿಟಿವಿ ಜೀವಂತ ಹೆಣ್ಣಲ್ಲ, ಬದಲಿಗೆ ಇದು ಬೇರೆ ರೀತಿಯ ಸಿಸಿಟಿವಿ. ಆದ್ರೆ ಲೇಡಿ ಸಿಸಿಟಿವಿ. ಈ ಚಿತ್ರ ನೋಡಿದರೆ ಎಲ್ಲರಿಗೂ ಇದು ಯಾವ ರೀತಿಯದ್ದು ಎಂದು ತಿಳಿಯುತ್ತದೆ. ಕಳ್ಳರನ್ನು ಸುಲಭದಲ್ಲಿ ಗುರುತಿಸುವ ಸಲುವಾಗಿ ಇಂಥದ್ದೊಂದು ಸಿಸಿಟಿವಿಯನ್ನು ರೆಡಿ ಮಾಡಲಾಗಿದ್ದು, ಕಳ್ಳರು ಹಳ್ಳಕ್ಕೆ ಬೀಳುವುದು ಪಕ್ಕಾ ಎನ್ನಲಾಗಿದೆ.

ಕಳ್ಳರ ಪತ್ತೆಗೆ ಕ್ರಮ

ಸಾಮಾನ್ಯವಾಗಿ ಕಳ್ಳತನ, ದರೋಡೆ ನಡೆದಾಗ ಅಲ್ಲಿ ಸಿಸಿಟಿವಿ ಇದ್ದರೂ ಮುಖ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಕಳ್ಳರು ಹೆಚ್ಚಾಗಿ ಮಾಸ್ಕ್​ ಹಾಕಿಕೊಂಡು ಬರುವ ಕಾರಣ, ಅವರನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ. ಹೀಗೆ ಕಳ್ಳರನ್ನು ಗುರುತು ಹಿಡಿಯಬೇಕಾದರೆ ಅವರು ಸ್ವಲ್ಪ ಸೆಕೆಂಡುಗಳ ವರೆಗೆ ಸಿಸಿಟಿವಿಯತ್ತ ನೋಡಬೇಕಾಗುತ್ತದೆ. ಹೀಗೆ ಮಾಡಿದರೆ ಅವರ ಕಣ್ಣಿನ ಆಧಾರದ ಮೇಲಾದರೂ ಅವರನ್ನು ಪತ್ತೆ ಹಚ್ಚುವುದು ಸುಲಭ. ಅದೇ ಕಾರಣಕ್ಕೆ ಇಂಥ ಸಿಸಿಟಿವಿ ಅಳವಡಿಕೆಯ ಬಗ್ಗೆ ಜೋರಾದ ಚರ್ಚೆಗಳು ನಡೆಯುತ್ತಿವೆ.

ಏನಿದು novelty fixation?

ಕಳ್ಳರಾಗಲಿ, ಸಭ್ಯರಾಗಲಿ ಹೆಚ್ಚಿನವರಿಗೆ ಹೆಣ್ಣುಮಕ್ಕಳ ಮೇಲೆ ಅದೇನೋ ಒಂದು ರೀತಿಯ ಭಾವನೆ ಇದ್ದೇ ಇರುತ್ತದೆ. ಅದರಲ್ಲಿಯೂ ಈ ಫೋಟೋದಲ್ಲಿ ತೋರಿಸಿದಂತೆ ಡ್ರೆಸ್​​ ಮಾಡಿಕೊಂಡು ಬಿಟ್ಟರೆ ಗಂಡಸರು ಯಾಕೆ, ಹೆಂಗಸರು ಕೂಡ ಅವರನ್ನು ಮೇಲಿಂದ ಕೆಳಗೆ ಒಮ್ಮೆ ನೋಡುವುದು ಉಂಟು. ಇದಕ್ಕೆ ಸೈಕಾಲಾಜಿಯಲ್ಲಿ novelty fixation ಎನ್ನುತ್ತಾರೆ. ಕನ್ನಡದಲ್ಲಿ ಹೇಳುವುದಾದರೆ ಈ ಕಲ್ಪನೆಯು "ನವೀನ ಸ್ಥಿರೀಕರಣ" ಎಂಬ ಮಾನಸಿಕ ತತ್ವವನ್ನು ಆಧರಿಸಿದೆ. ಮೆದುಳು ಅಸಾಮಾನ್ಯವಾದದ್ದನ್ನು ಗಮನಿಸಿದಾಗ, ಅದು ಸಹಜವಾಗಿಯೇ ಅದನ್ನು ಹೆಚ್ಚು ಸಮಯ ನೋಡುತ್ತಲೇ ಇರುತ್ತದೆ. ಇದನ್ನೇ ಇಲ್ಲಿ ಅಳವಡಿಸಲಾಗಿದೆ. ಆ ಹೆಚ್ಚುವರಿ ಕೆಲವು ಸೆಕೆಂಡುಗಳಿಂದ ಕಳ್ಳರನ್ನು ಹಿಡಿಯುವುದು ಸುಲಭವಾಗಿದೆ ಎನ್ನುವುದು ಇದರ ಹಿಂದಿರುವ ಉದ್ದೇಶ.

PREV
Read more Articles on
click me!

Recommended Stories

Troll: ರಾಮ್ ಚರಣ್ ಎಡವಟ್ಟಿಗೆ 'ಯಶ್' ಎಳೆದುತಂದಿದ್ದು ಯಾಕೆ? 'RRR' ಸ್ಟಾರ್ ನಟನೀಗ ಫುಲ್ ರೋಸ್ಟ್!
Kantara - Ranveer Singh: 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?