
ಐಸ್ ಕ್ರೀಂ ಅನ್ನು ಸಾಮಾನ್ಯವಾಗಿ ಹಸುವಿನ ಅಥವಾ ಲಭ್ಯವಿದ್ದಲ್ಲಿ ಎಮ್ಮೆಯ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ, ಇಲ್ಲಿ ಮಾನವನ ಎದೆ ಹಾಲಿನಿಂದ ಐಸ್ ಕ್ರೀಂ ತಯಾರಿಸಲಾಗಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಹೌದು, ಇದನ್ನು 'ಬ್ರೆಸ್ಟ್ ಮಿಲ್ಕ್' ಐಸ್ ಕ್ರೀಂ ಎಂದು ಕೂಡ ಕರೆಯಲಾಗಿದೆ. ನ್ಯೂಯಾರ್ಕ್ ನಗರದ ಬ್ರೂಕ್ಲಿನ್‌ನಲ್ಲಿರುವ 'ಆಡ್‌ಫೆಲೋಸ್ ಐಸ್ ಕ್ರೀಂ' ಎಂಬ ಕಂಪನಿ ಈ ಐಸ್ ಕ್ರೀಂ ಅನ್ನು ಬಿಡುಗಡೆ ಮಾಡಿ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದೆ. ಈ ವಿಶಿಷ್ಟ ಐಸ್ ಕ್ರೀಂ ಅನ್ನು ಸವಿಯಲು ಜನರು ಸಾಲುಗಟ್ಟಿ ನಿಂತಿದ್ದಾರೆ. ಆದರೆ, ಈ ಐಸ್ ಕ್ರೀಂ ನಿಜವಾಗಿಯೂ ಮಾನವನ ಎದೆ ಹಾಲಿನಿಂದ ತಯಾರಾಗಿಲ್ಲ ಎಂಬುದು ನಂತರ ಎಲ್ಲರಿಗೂ ತಿಳಿದುಬಂದಿದೆ.
ನಮ್ಮ ದೇಶದಲ್ಲಿ ಮಕ್ಕಳಿಗೆ ಎದೆಹಾಲು ಉಣಿಸಲು ಎದೆಹಾಲು ಸಿಗದೇ ಎಷ್ಟೋ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿವೆ. ಆದರೆ, ಇಲ್ಲೊಂದು ಕಂಪನಿ ಮಹಿಳೆಯರ ಎದೆ ಹಾಲಿನಿಂದ ಕೆಜಿಗಟ್ಟಲೆ ಐಸ್‌ಕ್ರೀಂ ಅನ್ನು ತಯಾರಿಸಲಾಗಿದೆ ಎಂದು ಹೇಳಿದೆ. ಈ ಐಸ್‌ಕ್ರೀಂ ತಿನ್ನುವುದಕ್ಕೆ ಲಿಮಿಟೆಡ್ ಆಫರ್ ನೀಡಿದೆ.
ಕಂಪನಿಯು ಈ ಉತ್ಪನ್ನ ಐಸ್‌ಕ್ರೀಂ ಬಗೆಗಿನ ನಿಜಾಂಶವನ್ನು ಸ್ಪಷ್ಟಪಡಿಸಿದೆ. ಈ ಐಸ್ ಕ್ರೀಂನಲ್ಲಿ ಮಾನವ ಎದೆ ಹಾಲಿನ ಬದಲಿಗೆ 'ಲಿಪೊಸೋಮಲ್ ಬೋವೈನ್ ಕೊಲೊಸ್ಟ್ರಮ್' ಎಂಬ ಆಹಾರ ಪದಾರ್ಥವನ್ನು ಬಳಸಲಾಗಿದೆ. ಇದು ಸಾಮಾನ್ಯವಾಗಿ ಎದೆ ಹಾಲಿನಲ್ಲಿ ಕಂಡುಬರುವ ಪೌಷ್ಟಿಕ ಅಂಶಗಳನ್ನು ಹೊಂದಿದ್ದು, ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ವರದಿಯಾಗಿದೆ. ಈ ವಿಶೇಷ ಸುವಾಸನೆಯನ್ನು 'ಫ್ರಿಡಾ' ಎಂಬ ಕಂಪನಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಮಾನವನ ಎದೆಹಾಲಿನ ರುಚಿ ಹಾಗೂ ಪರಿಮಳ ಬರುವಂತೆ ತಯಾರಿಸಲಾದ ಈ ಐಸ್‌ಕ್ರೀಮ್ ಅನ್ನು ಪ್ರತಿದಿನ ಕೇವಲ 50 ಉಚಿತ ಸ್ಕೂಪ್‌ಗಳನ್ನು ನೀಡಲಾಗುತ್ತಿದೆ. ಈ ಆಫರ್ ಕೂಡ ಗ್ರಾಹಕರನ್ನು ಇನ್ನಷ್ಟು ಆಕರ್ಷಿಸಿದೆ. ಈ ಐಸ್ ಕ್ರೀಮ್ ಸವಿದ ಜನರು ತಮ್ಮ ವಿಭಿನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಗ್ರಾಹಕರು, ಈ ಐಸ್ ಕ್ರೀಂ ತಿನ್ನುವಾಗ ಬಾಲ್ಯದಲ್ಲಿ ತಾಯಿಯ ಎದೆಹಾಲು ನೆನಪಿಗೆ ಬಂದಿದ್ದು, 'ಅದ್ಭುತ ಆನಂದ' ಸಿಕ್ಕಿದೆ ಎಂದಿದ್ದಾರೆ.
ಆದರೆ, ಇನ್ನೊಬ್ಬರು 'ಎಲ್ಲಾ ಐಸ್ ಕ್ರೀಂ ಹಸುವಿನ ಹಾಲಿನಿಂದ ಮಾಡಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಗ್ರಾಹಕರು ಇದರ ರುಚಿ 'ವೆನಿಲ್ಲಾ'ದಂತಿದೆ ಎಂದು ಹೇಳಿದ್ದಾರೆ. ಹೀಗೆ ಪ್ರತಿಯೊಬ್ಬರೂ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಚಾರದ ಮೂಲಕ ಕಂಪನಿಯು ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಇದು ಮಾನವ ಎದೆ ಹಾಲಿನ ಐಸ್ ಕ್ರೀಂ ಎಂಬ ಕೇವಲ ಒಂದು ಪ್ರಚಾರ ತಂತ್ರ ಮಾತ್ರ ಎಂಬುದು ಸ್ಪಷ್ಟವಾಗಿದೆ.
ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಅಮೇರಿಕಾದ ಫ್ರಿಡಾ ಕಂಪನಿಯ ಸಹಯೋಗದಲ್ಲಿ ಈ ಐಸ್‌ಕ್ರೀಂ ಸಿದ್ಧಪಡಿಸಲಾಗಿದೆ. ಪ್ರತಿದಿನ ಕೇವಲ 50 ಉಚಿತ ಸ್ಕೂಪ್‌ಗಳನ್ನು ಮಾತ್ರ ಗ್ರಾಹಕರಿಗೆ ನೀಡಲಾಗುತ್ತದೆ. ಇದೀಗ ನ್ಯೂಯಾರ್ಕ್ ಜನರಿಗೆ ಈ ಐಸ್‌ಕ್ರೀಂ ಭಾರೀ ಆಕರ್ಷಕವಾಗಿದೆ. ಕ್ಯಾಲಿಫೋರ್ನಿಯಾದ ಮ್ಯಾಮತ್ ಲೇಕ್‌ನ ಚಾರ್ಲೀನ್ ರಿಮ್ಶಾ, ರಾಕ್‌ಅವೇ ಬೀಚ್ ಎಂಬುವವರು ಈ ಎದೆಹಾಲಿನ ಫ್ಲೇವರ್‌ನ ಐಸ್‌ಕ್ರೀಂ ಅಂಗಡಿಗೆ ಹೋಗಿದ್ದಾರೆ. ಐಸ್ ಕ್ರೀಮ್ ಖರೀದಿ ಮಾಡಿ ತಿಂದ ನಂತರ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. ನನಗೆ ನನ್ನ ತಾಯಿ ಒಂದುವರೆ ವರ್ಷಗಳವರೆಗೆ ಎದೆಹಾಲುಣಿಸಿದ್ದಾರೆ. ಆದರೆ ನನಗೆ ಅದು ಖಂಡಿತವಾಗಿಯೂ ನೆನಪಿಲ್ಲ. ಆದ್ದರಿಂದ ಅಮ್ಮನ ಎದೆಹಾಲಿನ್ನು ಸೇವಿಸಿದ್ದ ಘಟನೆಗನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಮರುಕಲ್ಪನೆ ಮಾಡಿಕೊಳ್ಳಲು ಈ ಐಸ್‌ಕ್ರೀಂ ತಿನ್ನಲು ಬಂದಿದ್ದೇವೆ. ಇದೀಗ ಈ ಐಸ್ ಕ್ರೀಮ್ ಸೇವನೆ ಖುಷಿ ನೀಡಿದೆ ಎಂದಿದ್ದಾರೆ.