ಡಾನ್ಸ್​ ಮಾಡದೇ ಇದ್ರೂ ಕೆಲವೇ ಗಂಟೆಯಲ್ಲಿ ವಿಡಿಯೋಗೆ 2 ಮಿಲಿಯನ್​ ವ್ಯೂವ್ಸ್​! ಅಂಥದ್ದೇನಿದೆ ನೋಡಿ ಇದರಲ್ಲಿ

Published : Feb 02, 2026, 07:13 PM IST
Children Dance

ಸಾರಾಂಶ

ಶಾಲಾ ವಾರ್ಷಿಕೋತ್ಸವದಲ್ಲಿ ಡಾನ್ಸ್ ಮಾಡಲು ವೇದಿಕೆ ಹತ್ತಿದ ಇಬ್ಬರು ಪುಟಾಣಿಗಳು, ಸ್ಟೇಜ್ ಹೊಗೆಯನ್ನು ನೋಡಿ ಹೆದರಿ ಓಡಿಹೋಗುತ್ತಾರೆ. ಒಬ್ಬಳು ಓಡಿಹೋದರೆ, ಇನ್ನೊಬ್ಬಳು ಅಳಲು ಶುರುಮಾಡುತ್ತಾಳೆ, 2 ಮಿಲಿಯನ್ ವ್ಯೂವ್ಸ್​ ಬಂದಿದ್ಯಾಕೆ ನೋಡಿ!

ಮಕ್ಕಳು ಏನು ಮಾಡಿದ್ರೂ ಚೆಂದ. ಅದರಲ್ಲಿಯೂ ಡ್ರೆಸ್​ ಮಾಡಿಕೊಂಡು ವೇದಿಕೆ ಮೇಲೆ ಹೋದ್ರೆ ಸಾಕು, ಅವರನ್ನು ನೋಡುವುದೇ ಅಂದ. ಅವರು ಬರೀ ಕೈಕಾಲು ಅಲ್ಲಾಡಿಸಿದ್ರೂ ಸಾಕು, ಏನೂ ಮಾಡದೇ ಸುಮ್ಮನೆ ನಿಂತರೂ ಸಾಕು. ಅದೇ ಚೆಂದ. ಯಾರಿಗೂ ಅಲ್ಲದಿದ್ದರೂ, ಕೊನೆಯ ಪಕ್ಷ ಅವರ ಕುಟುಂಬಸ್ಥರಿಗೆ ಅದನ್ನು ನೋಡುವುದು ಎಂದರೆ ಸೊಗಸು. ಅದರಲ್ಲಿಯೂ ಅವರು ಮಾಡುವ ತುಂಟಾಟಗಳು ಕೂಡ ಅಷ್ಟೇ ಮುದ್ದಾಗಿ ಕಾಣಿಸುವುದು ಉಂಟು. ಈಗಂತೂ ಎಷ್ಟೋ ಮಕ್ಕಳು ಹುಟ್ಟುತ್ತಲೇ ವಿಭಿನ್ನ ರೀತಿಯ ಟ್ಯಾಲೆಂಟ್​ಗಳನ್ನು ಪಡೆದುಕೊಂಡು ಬಂದಿರುತ್ತಾರೆ. ಹಿಂದಿನ ಜನ್ಮದ ನಂಟೋ ಎನ್ನುವಂತೆ ಅವರ ಈ ಬುದ್ಧಿಮತ್ತೆ, ಅವರ ಜಾಣ್ಮೆ ನೋಡಿದರೆ ನಿಬ್ಬೆರಗಾಗುವುದು ಇದೆ. ಇದೇ ರೀತಿಯ ಹಲವು ಮಕ್ಕಳ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ.

ವಾರ್ಷಿಕೋತ್ಸವದಲ್ಲಿ ಹಂಗಾಮಾ

ಆದರೆ ಇಲ್ಲೊಂದು ವಿಡಿಯೋ ಮಾತ್ರ ಸಕತ್​ ಡಿಫರೆಂಟ್​ ಆಗಿದೆ. ಇಬ್ಬರು ಪುಟಾಣಿಗಳು ಡಾನ್ಸ್​ ಮಾಡಲು ವೇದಿಕೆ ಮೇಲೆ ಹೋಗಿದ್ದಾರೆ. ಅದು ನರ್ಸರಿಯ ವಾರ್ಷಿಕೋತ್ಸವ. ಅದರಲ್ಲಿ ಇಬ್ಬರೂ ಮಕ್ಕಳನ್ನು ಮಹಾರಾಷ್ಟ್ರದ ಶೈಲಿಯಲ್ಲಿ ಡ್ರೆಸ್​ ಮಾಡಲಾಗಿದೆ. ಅವರು 1994ರಲ್ಲಿ ಬಿಡುಗಡೆಯಾದ ನಟಿ ಮಾಧುರಿ ದೀಕ್ಷಿತ್​ ನಟನೆಯ ಅಂಜಾಮ್​ ಚಿತ್ರದ ಮೈ ಕೊಲ್ಲಾಪುರ ಸೇ ಆಯೀ ಹೂಂ ಹಾಡಿಗೆ ಡಾನ್ಸ್​ ಮಾಡಬೇಕಿತ್ತು. ಪಾಪ ಮಕ್ಕಳು ಕೂಡ ಅದಕ್ಕಾಗಿ ರೆಡಿಯಾಗಿಯೇ ಬಂದಿದ್ದರು ಎನ್ನಿ. ಅದೆಷ್ಟು ದಿನಗಳಿಂದ ಮಕ್ಕಳು ಇದಕ್ಕಾಗಿ ಪ್ರಾಕ್ಟೀಸ್​ ಮಾಡಿದ್ರೋ ಗೊತ್ತಿಲ್ಲ.

ವಿಡಿಯೋದಲ್ಲಿ ಏನಿದೆ?

ಆದರೆ, ಅವರು ವೇದಿಕೆಯ ಮೇಲೆ ಹೋಗುತ್ತಿದ್ದಂತೆಯೇ ಅಲ್ಲಿ ಆಗಿದ್ದೇ ಬೇರೆ. ಹೆದರಿ ಒಬ್ಬ ಪುಟಾಣಿ ಓಡಿ ಹೋದರೆ, ಇನ್ನೊಬ್ಬಳು ಜೋರಾಗಿ ಅಳತೊಡಗಿದಳು. ಅಷ್ಟೇ ಆಗಿದ್ದು. ಈ ವಿಡಿಯೋ 2 ಮಿಲಿಯನ್​ ವ್ಯೂವ್ಸ್​ ಕಂಡಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮಕ್ಕಳು ಸ್ಟೇಜ್​ ಮೇಲೆ ಹೋದಾಗ, ಹಾಡು ಪ್ಲೇ ಆಯಿತು. ಅದೇ ಸಮಯದಲ್ಲಿ ವೇದಿಕೆಯ ಮೇಲೆ ಹೊಗೆ ಹಾಯಿಸುವುದು ಇತ್ತೀಚಿನ ದಿನಗಳಲ್ಲಿ ಮಾಮೂಲು. ಅದೇ ರೀತಿ ಈ ಮಕ್ಕಳು ಹೋದಾಗಲೂ ಹಿಂದಿನಿಂದ ಟುಸ್​ ಎಂದು ಹೊಗೆ ಬಂದಿದೆ.

ಹೊಗೆ ಬಂದು ಮಕ್ಕಳು ಕಂಗಾಲು

ಪಾಪ, ಪ್ರಾಕ್ಟೀಸ್​ ಮಾಡುವಾಗ ಇದೆಲ್ಲಾ ಇರೋದಿಲ್ಲವಲ್ಲ, ಆ ಹೊಗೆ ಏನು ಎಂದು ಮಕ್ಕಳಿಗಾದರೂ ಹೇಗೆ ಗೊತ್ತಿರಬೇಕು. ಅದು ಟುಸ್​ ಎಂದು ಬಂದಾಗ ಒಳಗಡೆಯಿಂದ ಹೊಗೆ ಬಂದಿದ್ದನ್ನು ನೋಡಿ ಒಬ್ಬಳು ಹೆದರಿ ಸ್ಟೇಜ್​ ಬಿಟ್ಟು ಓಡಿ ಹೋದರೆ, ಅವಳು ಓಡಿ ಹೋಗಿದ್ದನ್ನು ನೋಡಿದ ಇನ್ನೊಬ್ಬ ಬಾಲಕಿ ಏನಾಯಿತು ಎಂದು ತಿಳಿಯದೇ ಜೋರಾಗಿ ಅಳತೊಡಗಿದಳು. ಪಾಪ ತಮ್ಮ ಮಕ್ಕಳ ಡಾನ್ಸ್​ ವಿಡಿಯೋ ಮಾಡಬೇಕು ಎಂದು ಮೊಬೈಲ್​ ರೆಡಿ ಮಾಡಿ ಕುಳಿತುಕೊಂಡಿದ್ದ ಅಪ್ಪ-ಅಮ್ಮ ವೇದಿಕೆ ಮೇಲೆ ಬಂದು ಮಗಳನ್ನು ಸಮಾಧಾನ ಮಾಡಿದರು.

ಮಕ್ಕಳು ಫೇಮಸ್​

ಅದಕ್ಕೇ ಹೇಳೋದು. ಮಕ್ಕಳಿಗೆ ವೇದಿಕೆ ಮೇಲೆ ಕಳುಹಿಸುವಾಗ ಎಲ್ಲವನ್ನೂ ಮೊದಲೇ ಹೇಳಿಕೊಡಬೇಕು. ಇಲ್ಲದಿದ್ದರೆ ಹೀಗೆಯೇ ಆಗುತ್ತದೆ ಎಂದು ಹಲವರು ಕಮೆಂಟ್​ ಮಾಡಿದ್ರೆ, ಇನ್ನು ಕೆಲವರು, ಈ ಮಕ್ಕಳು ಡಾನ್ಸ್ ಮಾಡಿದ್ರೆ ಅಲ್ಲಿದ್ದವರಿಗೆ ಮಾತ್ರ ಗೊತ್ತಾಗುತ್ತಿತ್ತು. ಕೆಲವೇ ದಿನಗಳಲ್ಲಿ ಮರೆತು ಹೋಗುತ್ತಿತ್ತು. ಆದರೆ ಈಗ ವಿಡಿಯೋ 2 ಮಿಲಿಯನ್​ ವ್ಯೂವ್ಸ್​ ತಂದುಕೊಟ್ಟಿದೆ. ಈ ಘಟನೆ ಮಕ್ಕಳಿಗೆ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ.

 

 

 

PREV
Read more Articles on
click me!

Recommended Stories

11 ವರ್ಷಗಳ ನಂತರದ ಚಮತ್ಕಾರ, ಫೆಬ್ರವರಿ 2026 ಅನ್ನು 'ಪರ್ಫೆಕ್ಟ್ ಮಂತ್' ಅಂತಾ ಹೇಳ್ತಿರೋದೇಕೆ?
BMTC ಬಸ್​ನಲ್ಲಿ ಬುರ್ಖಾಧಾರಿ ಮಹಿಳೆ ಲಕ್ಷ್ಮಮ್ಮ! ಹಿಜಾಬ್​ ಮೇಲೆ ಅರೆಬಿಕ್​ ಭಾಷೆ- ಏನಿದು ಲಿಂಕ್​?