10:15 ಆದ್ರೂ ಬೆಂಗಳೂರು ಆಫೀಸಲ್ಲಿ ಒಬ್ರೂ ಇಲ್ವಲ್ಲಪ್ಪಾ! ಫೋಟೋ ಹಂಚಿಕೊಂಡು ಸಿಇಒ ಹೇಳಿದ್ದೇನು ಗೊತ್ತಾ?

Published : Aug 19, 2026, 02:38 PM IST
Half-Empty Office at 10.15 AM: Bengaluru Founder Blames City’s Traffic

ಸಾರಾಂಶ

ಬೆಂಗಳೂರಿನ ಟ್ರಾಫಿಕ್‌ನಿಂದ ಉದ್ಯೋಗಿಗಳು ಕಚೇರಿಗೆ ತಡವಾಗಿ ಬರುತ್ತಿದ್ದಾರೆ ಎಂದು ಉದ್ಯಮಿ ಬಾಲಾ ಪನ್ನೀರ್‌ಸೆಲ್ವಂ ಹೇಳಿದ್ದಾರೆ. ಬೆಳಗ್ಗೆ 10.15ಕ್ಕೂ ತಮ್ಮ ಆಫೀಸ್ ಅರ್ಧ ಖಾಲಿಯಾಗಿದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ. HSRನಲ್ಲಿ 4 ಕಿ.ಮೀಗೆ 20-30 ನಿಮಿಷ ಹಾಗೂ ವೈಟ್‌ಫೀಲ್ಡ್‌ನಿಂದ HSRಗೆ 17 ಕಿ.ಮೀ ಪ್ರಯಾಣಕ್ಕೆ 2 ಗಂಟೆ ಬೇಕಾದ ಅನುಭವವನ್ನೂ ವಿವರಿಸಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ನಗರದ ಉದ್ಯಮಿಯೊಬ್ಬರು ಬೆಳಗ್ಗೆ 10.15ಕ್ಕೆ ತಮ್ಮ ಆಫೀಸ್‌ನಲ್ಲಿದ್ದ ಖಾಲಿ ಡೆಸ್ಕ್‌ಗಳ ಫೋಟೋ ಹಂಚಿಕೊಂಡು, ಉದ್ಯೋಗಿಗಳು ಕೆಲಸಕ್ಕೆ ತಡವಾಗಿ ಬರುತ್ತಿರುವುದಕ್ಕೆ ನಗರದ ಟ್ರಾಫಿಕ್ ಕಾರಣ ಎಂದು ಹೇಳಿದ್ದಾರೆ.

10.15 ಆದರೂ ಅರ್ಧ ಆಫೀಸ್ ಖಾಲಿ ಖಾಲಿ!

Applied AI Studio ಮತ್ತು Applied AI Club ಸಂಸ್ಥೆಗಳ ಸಂಸ್ಥಾಪಕ ಬಾಲಾ ಪನ್ನೀರ್‌ಸೆಲ್ವಂ ಅವರು LinkedInನಲ್ಲಿ ಆಫೀಸ್‌ನ ಫೋಟೋ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಬೆಳಗ್ಗೆ 10ರ ವೇಳೆಗೆ ಕಚೇರಿಗಳು ಚಟುವಟಿಕೆಯಿಂದ ಕೂಡಿರಬೇಕಾದರೂ, ತಮ್ಮ ಆಫೀಸ್‌ನಲ್ಲಿ ಹಲವು ಡೆಸ್ಕ್‌ಗಳು ಖಾಲಿಯಾಗಿದ್ದವು ಎಂದು ತೋರಿಸಿದ್ದಾರೆ.

ಸಮಸ್ಯೆ ಉದ್ಯೋಗಿಗಳದಲ್ಲ, ಬೆಂಗಳೂರು ಟ್ರಾಫಿಕ್ ನದ್ದು!

ಉದ್ಯೋಗಿಗಳು ಕೆಲಸಕ್ಕೆ ಬರಲು ತೋರುವ ಪ್ರಯತ್ನವೇ ದೊಡ್ಡ ಸಮಸ್ಯೆಯಾಗಿದೆ ಎಂಬುದು ಅವರ ಅಭಿಪ್ರಾಯ. HSR ಪ್ರದೇಶದಲ್ಲಿ ಕೇವಲ 4 ಕಿ.ಮೀ ಪ್ರಯಾಣಕ್ಕೆ ಸ್ಕೂಟರ್‌ನಲ್ಲಿ ಸುಮಾರು 20 ನಿಮಿಷ, ಕಾರಿನಲ್ಲಿ 30 ನಿಮಿಷ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ. ಪೀಕ್ ಅವರ್‌ನಲ್ಲಿ ಸಮಯ ಇನ್ನಷ್ಟು ಹೆಚ್ಚಾಗುತ್ತದೆ.

17 ಕಿ.ಮೀಗೆ 2 ಗಂಟೆ ಪ್ರಯಾಣ!

ತಮ್ಮ ಸ್ವಂತ ಅನುಭವವನ್ನೂ ಹಂಚಿಕೊಂಡಿರುವ ಬಾಲಾ, ಮಳೆ ಅಥವಾ ಯಾವುದೇ ವಿಶೇಷ ಅಡಚಣೆ ಇಲ್ಲದ ದಿನ ಮಧ್ಯಾಹ್ನ 4 ಗಂಟೆಗೆ ವೈಟ್‌ಫೀಲ್ಡ್‌ನಿಂದ HSRಗೆ 17 ಕಿ.ಮೀ ದೂರವನ್ನು ಕ್ರಮಿಸಲು ಎರಡು ಗಂಟೆ ಬೇಕಾಯಿತು ಎಂದು ಹೇಳಿದ್ದಾರೆ.

ಕೆಲಸ ಮುಗಿದರೂ ಟ್ರಾಫಿಕ್ ಕಾಟ ತಪ್ಪಲ್ಲ!

ಸಂಜೆ 6ರ ನಂತರ ಕಚೇರಿಯಿಂದ ಹೊರಟರೆ ಮನೆ ತಲುಪಲು ಇನ್ನಷ್ಟು ಸಮಯ ಬೇಕಾಗುತ್ತದೆ. 5 ಗಂಟೆಗೇ ಹೊರಟರೂ ಮನೆ ತಲುಪುವಷ್ಟರಲ್ಲಿ ಉದ್ಯೋಗಿಗಳು ದಣಿದು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ. ಇದರ ಪರಿಣಾಮ ಮರುದಿನ ಬೆಳಗ್ಗೆ ಮತ್ತೆ ತಡವಾಗಿ ಕಚೇರಿಗೆ ಬರುವ ಪರಿಸ್ಥಿತಿ ಉಂಟಾಗುತ್ತದೆ.

‘ಉತ್ತಮವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನೇ ಹಾಳು ಮಾಡುತ್ತಿದ್ದೇವೆ’

ನಿರಂತರ ಟ್ರಾಫಿಕ್‌ನಿಂದ ಜನರು ಕೆಲಸದ ಮೊದಲು ಮತ್ತು ನಂತರ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ದಣಿಯುತ್ತಿದ್ದಾರೆ ಎಂಬುದು ಅವರ ವಾದ. ಈ ಪೋಸ್ಟ್‌ಗೆ ಹಲವು ಬೆಂಗಳೂರಿಗರು ಪ್ರತಿಕ್ರಿಯಿಸಿ ತಮ್ಮದೇ ಟ್ರಾಫಿಕ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ?

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ, ಉತ್ತಮ ಸಾರ್ವಜನಿಕ ಸಾರಿಗೆ, ಮೆಟ್ರೋ ಸಂಪರ್ಕ ಮತ್ತು ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಉದ್ಯೋಗಿಗಳ ಸಮಯ ಮತ್ತು ಉತ್ಪಾದಕತೆ ಉಳಿಸಲು ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.

PREV
Read more Articles on
click me!

Recommended Stories

'ಬ್ರೇಕಪ್‌ ಸತ್ಯ' ಎಂದ ಅನುಪಮಾ ಆರೋಪಕ್ಕೆ ಎಕ್ಸ್‌-ಬಾಯ್‌ಫ್ರೆಂಡ್‌ ನಟ ಧ್ರುವ ವಿಕ್ರಮ್ ಹೇಳಿರೋ 'LOVE' ಸೀಕ್ರೆಟ್ ಇದು..!
ನಕ್ಸಲರ ಮಗುವಿಗೆ ಎದೆಹಾಲುಣಿಸಿ ಅಮ್ಮನಾದ ಮಕ್ಕಳ ಕಲ್ಯಾಣ ಸಚಿವೆ: ಭಾವುಕ ವಿಡಿಯೋ ವೈರಲ್​