Bengaluru Life: ಬೆಂಗಳೂರಲ್ಲಿ 1.4 ಲಕ್ಷ ಸಂಬಳಕ್ಕಿಂತ, ಊರಲ್ಲಿ 40 ಸಾವಿರವೇ ಲೇಸು! ಯುವಕನ ಪೋಸ್ಟ್ ವೈರಲ್

Published : Jun 04, 2026, 02:15 PM IST
Bengaluru Salary vs Hometown Savings Viral Reddit Post

ಸಾರಾಂಶ

ಬೆಂಗಳೂರಿನಲ್ಲಿ 1.4 ಲಕ್ಷ ರೂ. ಸಂಬಳಕ್ಕಿಂತ, ತನ್ನೂರಿನಲ್ಲಿ ಸಿಗುವ 40 ಸಾವಿರ ರೂ. ಸಂಬಳದಲ್ಲೇ ಹೆಚ್ಚು ನೆಮ್ಮದಿ, ಹಣಕಾಸಿನ ಭದ್ರತೆ ಇದೆ ಅಂತ ಯುವಕನೊಬ್ಬ ಹೇಳಿಕೊಂಡಿದ್ದಾನೆ. ಅವನ ಪೋಸ್ಟ್ ವೈರಲ್ ಆಗಿದೆ.

ಮಹಾನಗರ ಬೆಂಗಳೂರು ಒಬ್ಬೊಬ್ಬರಗೂ ಒಂದು ರೀತಿ ಕಾಣುತ್ತೆ. ಹಣ ಮಾಡೋರಿಗೆ ಬ್ಯುಸಿನೆಸ್ ಸಿಟಿ, ಮಜಾ ಮಾಡೋಕೆ ಬರೋರಿಗೆ ಕ್ರೇಜಿ ಸಿಟಿ, ಮುದುಕರಿಗೆ ಪೆನ್ಷನ್ ಸಿಟಿ, ರಾತ್ರಿ ಎದ್ದು ಹೊರಡೋರಿಗೆ ಪಬ್ ಸಿಟಿ. ಬೆಂಗಳೂರಿಗೆ ಬರುವವರದ್ದ ಒಂದೇ ಉದ್ದೇಶ ಇಲ್ಲಿ ಬಂದು ಹಣ ಮಾಡಬೇಕು ಅನ್ನೋದು. ಹೀಗೆ ಕನಸುಗಳ ಮೂಟೆ ಹೊತ್ತುಕೊಂಡೆ ಬೆಂಗಳೂರಿಗೆ ಬರ್ತಾರೆ. ಆದರೆ ಬಂದವರಲ್ಲಿ ಹಣ ಮಾಡಿದರೆ ಎಷ್ಟು ಜನ? ಖುಷಿಯಾಗಿದ್ದವರು ಎಷ್ಟು? ಉತ್ತರ ಹುಡುಕುವುದು ಕಷ್ಟ. ಪ್ರತಿಯೊಬ್ಬರು ಕೊನೆಗೆ ಹೇಳೋದು, 'ಅಯ್ಯೋ ಕಡಿಮೆ ಸಂಬಳ ಆದ್ರೂ ಹುಟ್ಟಿದ ಊರೇ ವಾಸಿ' ಅಂತ.

ಟೆಕ್ಕಿಯೊಬ್ಬ ಬರೆದುಕೊಂಡಿರುವ ಇಂಥದ್ದೇ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೆಡ್ಡಿಸ್ಟ್ ಪೋಸ್ಟ್‌ನಲ್ಲಿ ಏನಿದೆ?

ಬೆಂಗಳೂರಿನಲ್ಲಿ ತಿಂಗಳಿಗೆ 1.4 ಲಕ್ಷ ರೂಪಾಯಿ ದುಡಿಯುತ್ತಿದ್ದೆ. ಆದ್ರೆ, ಅದಕ್ಕಿಂತ ಹೆಚ್ಚು ಖುಷಿ, ನೆಮ್ಮದಿ, ಹಣಕಾಸಿನ ಭದ್ರತೆ ಈಗ ನನ್ನ ಊರಲ್ಲಿ 40 ಸಾವಿರ ರೂಪಾಯಿ ಸಂಬಳದಲ್ಲಿ ಸಿಗ್ತಿದೆ ಅಂತಾ ತನ್ನ ಅನುಭವವನ್ನು ಯುವಕನೊಬ್ಬ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.

ದೊಡ್ಡ ಸಿಟಿಯಲ್ಲಿ ಹೆಚ್ಚು ಸಂಬಳ ಅನ್ನೋದು ಬರೀ ಪೇಪರ್ ಮೇಲೆ ಲೆಕ್ಕ. ನೋಡೋಕೆ ಲಕ್ಷ ಲಕ್ಷ ಸಂಬಳ ಆದ್ರೆ ಬೆಂಗಳೂರಿನ ಕಾಸ್ಟ್‌ಲಿ ಜೀವನ ಶೈಲಿಗೆ ಕೈಯಲ್ಲಿದ್ದ ದುಡ್ಡನ್ನೆಲ್ಲಾ ಬೇಗನೆ ಖಾಲಿ ಮಾಡಿಬಿಡುತ್ತೆ. ಆದ್ರೆ, ನಮ್ಮೂರಲ್ಲಿ ಹಾಗಲ್ಲ ಅಂತ ಈ ಯುವಕ ಹೇಳಿದ್ದಾನೆ. ಬೆಂಗಳೂರು ಮತ್ತು ತನ್ನ ತವರು ಊರಾದ ಉದಯಪುರದ ಜೀವನದ ಕರ್ಚುಗಳನ್ನ ಹೋಲಿಕೆ ಮಾಡಿ ತನ್ನ ವಾದ ಮುಂದಿಟ್ಟಿದ್ದಾನೆ.

ಬೆಂಗಳೂರಿನಲ್ಲಿದ್ದಾಗ ತಿಂಗಳ ಖರ್ಚು ಎಷ್ಟು?

2BHK ಫ್ಲ್ಯಾಟ್ ಬಾಡಿಗೆ 30,000 ರೂ., ದಿನಸಿ 6,000 ರೂ., ಮನೆಗೆಲಸದವರು ಮತ್ತು ವೈಫೈಗೆ ತಲಾ 3,000 ರೂ., ಆನ್‌ಲೈನ್‌ ಫುಡ್‌ ಡೆಲಿವರಿ ಆ್ಯಪ್‌ಗಳಿಗೆ 7,000 ರೂ. ಇದಲ್ಲದೆ, ಕ್ಯಾಬ್ ಪ್ರಯಾಣಕ್ಕೆ 5,000 ರೂ., ವೀಕೆಂಡ್ ಪಾರ್ಟಿ, ಸುತ್ತಾಟಕ್ಕೆ 8,000 ರೂ. ಖರ್ಚಾಗುತ್ತಿತ್ತು. ಇಷ್ಟೇ ಅಲ್ಲದೆ, ಅಮೆಜಾನ್ ಆರ್ಡರ್‌ಗಳು, ಕ್ವಿಕ್ ಕಾಮರ್ಸ್ ಆ್ಯಪ್‌ಗಳು, ಕಾಫಿ, ಸಣ್ಣಪುಟ್ಟ ಶಾಪಿಂಗ್ ಅಂತ ಬೇರೆ ಖರ್ಚುಗಳೂ ಇದ್ದವು. 1.4 ಲಕ್ಷ ರೂಪಾಯಿ ಸಂಬಳ ಬಂದ್ರೂ, ನಗರದಲ್ಲಿ ಬದುಕೋದಕ್ಕಾಗಿಯೇ ದೊಡ್ಡ ಮೊತ್ತ ಖರ್ಚಾಗುತ್ತಿತ್ತು. ದುಡ್ಡು ಸಂಪಾದಿಸಿದ್ರೂ ಜೀವನ ಒಂದು ರೀತಿ ಓಟದಲ್ಲೇ ಸಾಗುತ್ತಿತ್ತು, ಜೊತೆಗೆ ಸಿಕ್ಕಾಪಟ್ಟೆ ಖರ್ಚು ಅಂತ ಯುವಕ ಹೇಳಿಕೊಂಡಿದ್ದಾನೆ.

 

ಲಕ್ಷ ಲಕ್ಷ ದುಡಿತಿದ್ರೂ ಇಲ್ಲಿನ ಜೀವನಶೈಲಿ, ಖರ್ಚುಗಳಿಗೆ ಮಾನಸಿಕವಾಗಿ ಕುಗ್ಗಿ ಹೋಗ್ತಿದ್ದೀನಿ ಅಂತ ಗೊತ್ತಾದಾಗ, ಉದಯಪುರಕ್ಕೆ ವಾಪಸ್ ಬಂದೆ. ಮೊದಮೊದಲು ಸಂಬಳ ತುಂಬಾನೇ ಕಡಿಮೆ ಇತ್ತು, ಸುಮಾರು 40,000 ರೂಪಾಯಿ ಅಷ್ಟೇ. ಆದರೆ, ಆಶ್ಚರ್ಯ ಅಂದ್ರೆ, ಇಲ್ಲೇ ನನಗೆ ಹೆಚ್ಚು ಶ್ರೀಮಂತನಾದ ಹಾಗೆ ಅನಿಸುತ್ತಿದೆ ಎಂದು ಯುವಕ ಬರೆದುಕೊಂಡಿದ್ದಾನೆ.

ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದು, ಯುವಕನ ನಿರ್ಧಾರವನ್ನು ಹೊಗಳಿದ್ದಾರೆ. ಕುಟುಂಬದ ಜೊತೆ ಇರಬಹುದು, ಹಣಾನೂ ಉಳಿಸಬಹುದು. ಇದಕ್ಕಿಂತ ಒಳ್ಳೆ ನಿರ್ಧಾರ ಬೇಕಾ? ಅಂತ ಹಲವರು ಅಭಿಪ್ರಾಯಪಟ್ಟಿದ್ದಾರೆ.

PREV
Read more Articles on
click me!

Recommended Stories

ಮತ್ತೆ ಕನ್ನಡಕ್ಕೆ ಬರಲಿರುವ ರಶ್ಮಿಕಾ ಮಂದಣ್ಣ; ಹೀರೋ ಯಾರು, ನಿರ್ದೇಶಕರು ಯಾರು? ರಹಸ್ಯ ರಿವೀಲ್ ಆಯ್ತು!
ಪೈಲಟ್ ಟ್ರೇನಿಂಗ್ ಮುಗಿಯುತ್ತಿದ್ದಂತೆ ಮೊಣಕಾಲೂರಿ ಪ್ರಪೋಸ್ ಮಾಡಿದ ಯುವ ಸೈನಿಕ; ಫಿಲ್ಮಿ ಸ್ಟೈಲ್ ಪ್ರೇಮಕಥೆ ವೈರಲ್!