Apoorva Mukhija: ಹಗಲಿರುಳೂ ಓದಿ ಸಾಧಿಸಿದಾಗ ಸಿಕ್ಕಿದ್ದು ಶೂನ್ಯ: ರೀಲ್ಸ್​ನಿಂದ ಕೋಟಿ ಸಾಮ್ರಾಜ್ಯ ಕಟ್ಟಿದ ಒಡತಿ!

Published : Jul 07, 2025, 07:41 PM ISTUpdated : Jul 08, 2025, 11:14 AM IST
Apoorva Mukhija

ಸಾರಾಂಶ

ಹಗಲಿರುಳೂ ಓದಿ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಕಣ್ಣೆತ್ತಿ ನೋಡದ ಅದೇ ಜನ ಇಂದು ಅರೆಬರೆ ಡ್ರೆಸ್​ನ ರೀಲ್ಸ್​ಗೆ ಫಿದಾ ಆಗಿ ಫಾಲೋವರ್ಸ್​ ಆಗಿದ್ದಾರೆ. ಯುವತಿಯ ಇಂಟರೆಸ್ಟಿಂಗ್​ ಕಥೆ ಕೇಳಿ! 

'ನಿಮಗೆ ಹಾಕಲು ಒಳ್ಳೆಯ ವಿಷಯಗಳೇ ಸಿಗಲ್ವಾ...?' ಇದನ್ನು ಬಹುತೇಕ ನೆಟ್ಟಿಗರು ಕಮೆಂಟ್​ ಬಾಕ್ಸ್​ನಲ್ಲಿ ಒಂದಲ್ಲೊಂದು ದಿನ ಬರೆದೇ ಇರುತ್ತಾರೆ. ​ಅದರಲ್ಲಿಯೂ ನಟಿಯರ ಅಥವಾ ಇನ್ನಾವುದೇ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​​ಗಳ ವಿಡಿಯೋ ಹಾಕಿದಾಗ ಬಹುತೇಕ ನೆಟ್ಟಿಗರಿಗೆ ಇನ್ನಿಲ್ಲದ ಸಿಟ್ಟು ಬರುತ್ತದೆ, ಅದೇ ಸಿಟ್ಟಿನಲ್ಲಿ ಈ ಅರೆಬರೆ ಡ್ರೆಸ್​ನ ವಿಡಿಯೋ ನೋಡಿ ಮಜ ತೆಗೆದುಕೊಳ್ಳುತ್ತಲೇ ಕಮೆಂಟ್​ ಹಾಕುವುದೂ ಇದೆ. ಆದರೆ ಅದೇ ಒಂದು ಒಳ್ಳೆಯ ವಿಷಯ ಹಾಕಿದರೆ? ಹೂಂ... ಹೂಂ... ಮೊಬೈಲ್​ನಲ್ಲಿಲ ಸ್ಕ್ರೋಲ್​ ಮಾಡುವಾಗ ಅಲ್ಲಿ ಕೈ ನಿಲ್ಲುವುದೇ ಇಲ್ಲ, ಮೊಬೈಲ್​ ಪರದೆ ಮುಂದಕ್ಕೆ ಹೋಗಿ ಬಿಡುತ್ತದೆ. ಅಲ್ಲಿ ಇನ್ನೊಂದು ಅರೆಬರೆ ಡ್ರೆಸ್​ ರೀಲ್ಸ್​ ನೋಡಿದಾಗ ಕೈನಿಂತು ಮತ್ತದೇ ಕಮೆಂಟ್​, ನಿಮಗೆ ಒಳ್ಳೆಯ ಕಂಟೆಟೇ ಸಿಗಲ್ವಾ ಎಂದು!

ಇದು ಇಂದಿನ ಜನರ ಮನಸ್ಥಿತಿಯಾಗಿದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದ್ದಾಳೆ ಈ ಯುವತಿ! ರೀಲ್ಸ್​ ಮೂಲಕ 41 ಕೋಟಿ ರೂಪಾಯಿ ಸಾಮ್ರಾಜ್ಯ ಸ್ಥಾಪಿಸಿದ್ದಾಳೆಂದು ಹೇಳಲಾಗುತ್ತಿದೆ. ಇಷ್ಟೊಂದು ಹಣ ಗಳಿಸಬೇಕು ಎಂದರೆ ಆಕೆ ಅದ್ಯಾವ ಪರಿಯ ರೀಲ್ಸ್​ ಮಾಡಿರಬಹುದು ಎಂದು ಸಾಮಾನ್ಯ ಮಂದಿ ಊಹಿಸಿಕೊಳ್ಳಬಹುದು. ನಿಜ. ಆಕೆಯ ಬಹುತೇಕ ರೀಲ್ಸ್​ಗಳು ಅರೆಬರೆ ಡ್ರೆಸ್​ಗಳದ್ದೇ. ಅಂದಹಾಗೆ ಈಕೆಯ ಹೆಸರು ಅಪೂರ್ವ ಮುಖಿಜಾ. ಹಾಗೆಂದು ಇವಳೇನೂ ಸಾಮಾನ್ಯದವಳಲ್ಲ. ಇಂಥ ರೀಲ್ಸ್​ಗೆ ಬರುವ ಮೊದಲು ಈಕೆಯದ್ದು ಅಸಾಧಾರಣ ಪ್ರತಿಭೆ. ಓದಿನಲ್ಲಿ ಜಾಣೆಯಾಗಿರುವ ಅಪೂರ್ವ, ರೀಲ್ಸ್​ಗೆ ಕಾಲಿಡುವ ಮೊದಲು ಭಾರತದ ಅತ್ಯಂತ ಕಠಿಣ ಎಂಜಿನಿಯರಿಂಗ್ ಪರೀಕ್ಷೆಯನ್ನು ಪಾಸ್ ಮಾಡಿದ್ದಾಳೆ. ಇದಕ್ಕಾಗಿ ಆಕೆ ದಿನಕ್ಕೆ 14 ಗಂಟೆಗಳ ಕಾಲ ಅಧ್ಯಯನ ಮಾಡಿದ್ದಾಳೆ. ಮನೆ, ಸ್ನೇಹಿತರು, ಸೋದರಸಂಬಂಧಿಗಳು, ನಿದ್ರೆ ಮತ್ತು ಈ ವಯಸ್ಸಿನಲ್ಲಿ ಬರುವ ಎಲ್ಲಾ ಕನಸುಗಳನ್ನೂ ತ್ಯಜಿಸಿದ್ದಾಳೆ.

ಐಐಟಿಗೆ ಸೇರಿದ ಆರು ವರ್ಷಗಳವರೆಗೆ ಕೆಲಸವನ್ನೂ ಮಾಡಿದ್ದಾಳೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ಈಕೆಯನ್ನು ಗುರುತಿಸಿದವರು ಕನಿಷ್ಠ ನೂರು ಮಂದಿಯೂ ಇಲ್ಲ ಎಂದು ಖುದ್ದು ಅಪೂರ್ವಳೇ ಹೇಳುತ್ತಾಳೆ. ಇಂಥದ್ದೊಂದು ಮಹತ್​ ಸಾಧನೆ ಮಾಡಿದಾಗ ಯಾರೂ ಕೇಳಲಿಲ್ಲ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದರೂ ಬೆರಳೆಣಿಕೆ ಮಂದಿಯಷ್ಟೇ ಲೈಕ್​ ಮಾಡಿದರು. ನನ್ನ ಸಾಧನೆ ಬಗ್ಗೆ ಯಾರ ಬಾಯಲ್ಲಿಯೂ ಏನೂ ಬರಲಿಲ್ಲ, ಎಲ್ಲವೂ ಶೂನ್ಯವಾಗಿತ್ತು ಎಂದಿರೋ ಅಪೂರ್ವ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಇದೇ ಸೋಷಿಯಲ್​ ಮೀಡಿಯಾ ಪ್ರಪಂಚವನ್ನು!

ಅರೆ-ಬರೆ ಡ್ರೆಸ್​ ಹಾಕಿಕೊಂಡು, ದೇಹ ಪ್ರದರ್ಶನ ಮಾಡುತ್ತಾ ರೀಲ್ಸ್​ ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾಳೆ ಈಕೆ. ಇವಳು ಸಾಧನೆ ಮಾಡಿದಾಗ ಇದೇ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದಾಗಲೂ ಒಂದೇ ಒಂದು ಲೈಕ್​ ಒತ್ತದವರು ಇದೀಗ ಈಕೆಯ ಫಾಲೋವರ್ಸ್​. ಇವಳು ವಿಡಿಯೋ ಹಾಕಿದಾಗಲೆಲ್ಲಾ ಲೈಕ್​, ಕಮೆಂಟ್​ಗಳ ಸುರಿಮಳೆ. ಟ್ರೋಲ್​ ಮಾಡುತ್ತಲೇ ಇವಳ ವಿಡಿಯೋ ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ. ಫಾಲೋವರ್ಸ್​ ಸಂಖ್ಯೆ ಹೆಚ್ಚಾದಂತೆ ಸಹಜವಾಗಿ ಇವಳಿಗೆ ಬ್ರ್ಯಾಂಡ್ ಡೀಲ್‌ಗಳು, ಜಾಹೀರಾತುಗಳು ಬಂದಿವೆ. ಹಗಲು-ಇರುಳು ಓದಿ ಪರೀಕ್ಷೆ ಮಾಡಿದಾಗ ಸಿಗದ ಶ್ರೇಯಸ್ಸು, ಈಗ ಟ್ರೋಲ್​ನಿಂದಾಗಿ ಸಿಕ್ಕಿದೆ. ಇದೇ ಕಾರಣಕ್ಕೆ ಇಂಥವರನ್ನೇ ಹುಡುಕುವ ರಿಯಾಲಿಟಿ ಶೋಗಳಿಗೂ ಇವಳೇ ಬೇಕು. ಏನಿಲ್ಲವೆಂದರೂ ದಿನಕ್ಕೆ ಸುಮಾರು 2.5 ಲಕ್ಷ ರೂ. ಗಳಿಸುತ್ತಿದ್ದಾಳೆ ಈಕೆ!

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್