Reverse Culture Shock: ಭಾರತದ ನೆನಪಲ್ಲಿ ಕಂಗಾಲಾದ ಅಮೆರಿಕನ್ ಯುವತಿ; ಇಂಡಿಯನ್ ಸ್ನ್ಯಾಕ್ಸ್‌ ಮೊರೆ, ವಿಡಿಯೋ ವೈರಲ್

Published : Jun 11, 2026, 12:51 PM IST
American Woman s Viral Video On Missing India And Finding Comfort In Snacks

ಸಾರಾಂಶ

ಅಮೆರಿಕದ ಕಂಟೆಂಟ್ ಕ್ರಿಯೇಟರ್ ಒಬ್ಬರು ತಾಯ್ನಾಡಿಗೆ ಮರಳಿದ ನಂತರ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಭಾರತ, ಇಲ್ಲಿನ ಸಂಸ್ಕೃತಿ ಹಾಗೂ ಜನರ ಮೇಲಿನ ಅವರ ಪ್ರೀತಿಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.

ಭಾರತಕ್ಕೆ ಪ್ರವಾಸ ಬಂದಿದ್ದ ಅಮೆರಿಕದ ಕಂಟೆಂಟ್ ಕ್ರಿಯೆಟರ್ ಒಬ್ಬರು ಅಮೆರಿಕಕ್ಕೆ ವಾಪಸ್ ಆದ ನಂತರ ಭಾರತದಲ್ಲಿ ಅನುಭವ ತುಂಬಾ ಕಾಡುತ್ತಿದೆ. ಪ್ರತಿದಿನ ಭಾರತವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಭಾರತದ ಸಂಸ್ಕೃತಿ, ಆಹಾರ ಪದ್ಧತಿ ಮೆಚ್ಚಿದ ಅಮೆರಿಕನ್ ಯುವತಿ

ಭಾರತವೆಂದರೆ ಹಾಗೆ ಇಲ್ಲಿನ ಸಂಸ್ಕೃತಿ, ಜನಜೀವನ, ಆಹಾರ ವಿಶಿಷ್ಟ ಆಹಾರ ಪದ್ಧತಿಗೆ ಮನಸೋಲದ ವಿದೇಶಿಗರೇ ಇಲ್ಲವೆನ್ನಬಹುದು. ಇದೀಗ ಅಮೆರಿಕ ಯುವತಿಯೊಬ್ಬಳ ಅನುಭವದ ಮಾತು ಕೇಳುವಾಗ ಅಚ್ಚರಿ ಏನೂ ಇಲ್ಲ. ಭಾರತಕ್ಕೆ ಭೇಟಿ ನೀಡುವ ಬಹುತೇಕ ಕಾಂಟೆಂಟ್ ಕ್ರಿಯೆಟರ್‌ಗಳು ವಿದೇಶಿ ಪ್ರವಾಸಿಗರು ಹಾಡಿ ಹೊಗಳಿದ್ದಾರೆ. ಅದೇ ರೀತಿ ಅಮೆರಿಕನ್ ಯುವತಿ ಹೇಳುವಂತೆ, ಪ್ರವಾಸಕ್ಕೆ ಭಾರತಕ್ಕೆ ಬಂದಿಳಿದಾಗಿನಿಂದಲೂ ಇಲ್ಲಿನ ಜನರೊಂದಿಗಿನ ಸುಮಧುರ ಬಾಂಧವ್ಯ, ಹೋದಲೆಲ್ಲ ಜನರು ತೋರಿಸಿದ ಪ್ರೀತಿ ಮೆಲುಕು ಹಾಕಿದ್ದಾರೆ..

ವಿಡಿಯೋದಲ್ಲಿ ಏನಿದೆ?

ಅಮೆರಿಕದ ಟ್ರಾವೆಲರ್ ಮತ್ತು ಸೋಷಿಯಲ್ ಮೀಡಿಯಾ ಕ್ರಿಯೇಟರ್ ಆಗಿರುವ ಟ್ಯಾಬಿ ಫಿಲಿಪ್ಸ್, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಭಾರತದಿಂದ ವಾಪಸಾದ ನಂತರ 'ರಿವರ್ಸ್ ಕಲ್ಚರ್ ಶಾಕ್' ಎದುರಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಭಾವನಾತ್ಮಕ ಬೇಸರವನ್ನು ಮರೆಯಲು, ಅವರು ತಮ್ಮ ನೆಚ್ಚಿನ ಇಂಡಿಯನ್ ಸ್ನ್ಯಾಕ್ಸ್, ಆಹಾರ ಪದಾರ್ಥಗಳನ್ನ ಖರೀದಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದೇನೆ' ಎಂದು ಭಾವುಕಳಾಗಿ ಹೇಳಿದ್ದಾರೆ.. 'ನನಗೆ ಭಾರತೀಯ ಸ್ನ್ಯಾಕ್ಸ್ ತುಂಬಿದ ಬಾಕ್ಸ್ ಹಿಡಿದುಕೊಂಡು, ಬೇರೊಂದು ಸಂಸ್ಕೃತಿಯ ನೆಲದಲ್ಲಿ ಹೆಚ್ಚು ಕಾಲ ಇದ್ದು ವಾಪಸ್ ಬಂದಾಗ ಆಗುವ ವಿಚಿತ್ರ ಅನುಭವದ ಬಗ್ಗೆ ಫಿಲಿಪ್ಸ್ ಮಾತನಾಡಿದ್ದಾರೆ.

'ರಿವರ್ಸ್ ಕಲ್ಚರ್ ಶಾಕ್ ಅಂದ್ರೆ ಏನು ಗೊತ್ತಾ?' ಎಂದು ಪ್ರಶ್ನಿಸಿರುವ ಅವಳು, ಅದಕ್ಕೆ ಉತ್ತರವೂ ಹೇಳಿದ್ದಾಳೆ. 'ನೀವು ನಿಮ್ಮ ಸಂಸ್ಕೃತಿಗಿಂತ ಭಿನ್ನವಾದ ಸ್ಥಳದಲ್ಲಿ ಹೆಚ್ಚು ಕಾಲ ಇದ್ದು, ಮನೆಗೆ ವಾಪಸ್ ಬಂದಾಗ, ನಿಮ್ಮ ಸ್ವಂತ ಮನೆನೇ ನಿಮ್ಮದು ಅನಿಸುವುದಿಲ್ಲ' ಆ ರೀತಿಯ ಭಾವನೆ ಎಂದು ವಿವರಿಸಿದ್ದಾರೆ.

ಭಾರತದಲ್ಲಿ ಮೊದಲ ಬಾರಿಗೆ ಆರು ತಿಂಗಳು ತಂಗಿದ್ದು, ಅಲ್ಲಿ ಕಲ್ಚರ್ ತಮ್ಮ ಮೇಲೆ ಆಳವಾದ ಪರಿಣಾಮ ಬೀರಿತ್ತು ಎಂದು ಈ ಕ್ರಿಯೇಟರ್ ಹೇಳಿದ್ದಾರೆ. ಅಮೆರಿಕಕ್ಕೆ ಹಿಂತಿರುಗಿದಾಗ ಭಾವನಾತ್ಮಕವಾಗಿ ತುಂಬಾ ಕಷ್ಟವಾಗಿತ್ತು ಎಂದಿದ್ದಾರೆ.

'ನಾನು ಅಕ್ಷರಶಃ ಒಂದೇ ವಾರದಲ್ಲಿ ಡಿಪ್ರೆಶನ್‌ಗೆ ಜಾರಿದ್ದೆ. ಎಲ್ಲವೂ ವಿಪರೀತ ಎನಿಸುತ್ತಿತ್ತು' ಎಂದು ಅವರು ಹೇಳಿದ್ದಾರೆ.

ಈ ಬಾರಿಯ ಅನುಭವ ಅಷ್ಟು ತೀವ್ರವಾಗಿಲ್ಲದಿದ್ದರೂ, ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿರುವ ಭಾವನೆ ಮತ್ತೆ ಮರುಕಳಿಸಿದೆ ಎಂದು ಫಿಲಿಪ್ಸ್ ಒಪ್ಪಿಕೊಂಡಿದ್ದಾರೆ. 'ಭಾರತ, ನನ್ನ ಸ್ನೇಹಿತರು, ಅಲ್ಲಿನ ಪರಿಸರದ ವಿಶೇಷ ಪರಿಮಳ, ಆಹಾರ, ಎಲ್ಲವನ್ನೂ' ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದೇ ಕಾರಣಕ್ಕೆ, ತಮ್ಮ ಊರಿನಲ್ಲಿರುವ 'ಜನತಾ' ಎಂಬ ಭಾರತೀಯ ದಿನಸಿ ಅಂಗಡಿಗೆ ಭೇಟಿ ನೀಡಿ, ತಾವು ಬಿಟ್ಟು ಬಂದ ದೇಶದ ಒಂದು ಸಣ್ಣ ಭಾಗವನ್ನು ಮರುಸೃಷ್ಟಿಸಲು ಯತ್ನಿಸಿದ್ದಾರೆ.

ಫಿಲಿಪ್ಸ್ ಅವರು ಮ್ಯಾಗಿ ನೂಡಲ್ಸ್, ಕುರ್ಕುರೆ ಮಸಾಲ ಮಂಚ್, ಲಿಚಿ ಜ್ಯೂಸ್, ಕೇರಳ ಬಾಳೆಹಣ್ಣಿನ ಚಿಪ್ಸ್, ಮಿಲ್ಕ್ ಬಿಸ್ಕೆಟ್, ಫ್ರೋಜನ್ ದೋಸೆ, ಅಮುಲ್ ಚೀಸ್ ಮತ್ತು ರೆಡಿ-ಮೇಡ್ ಪರಾಠಾಗಳ ಪ್ಯಾಕೆಟ್‌ಗಳನ್ನು ಹೆಮ್ಮೆಯಿಂದ ತೋರಿಸಿದ್ದಾರೆ.

ಸ್ನ್ಯಾಕ್ಸ್ ಪ್ಯಾಕೆಟ್‌ಗಳನ್ನು ತೆರೆಯುವ 'ಸರಿಯಾದ' ಭಾರತೀಯ ವಿಧಾನವನ್ನು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ - ಅಂದರೆ, ಪ್ಯಾಕೆಟ್ ಅನ್ನು ಬದಿಯಿಂದ ಹರಿದು ನೇರವಾಗಿ ತಿನ್ನುವುದು. ಕುರ್ಕುರೆ ನಾಟಿ ಟೊಮ್ಯಾಟೊವನ್ನು ಸವಿದ ಅವರು, 'ಇದು ಕೆಚಪ್ ಹಾಕಿದ ಚೀಟೋ ತರ ಇದೆ' ಎಂದು ನಕ್ಕಿದ್ದಾರೆ.

ವಿಡಿಯೋದುದ್ದಕ್ಕೂ, ಫಿಲಿಪ್ಸ್ ಅವರು ಭಾರತ ಪ್ರವಾಸದ ವೇಳೆ ತಾವು ಇಷ್ಟಪಟ್ಟ ಆಹಾರಗಳು, ಹಣ್ಣುಗಳು ಮತ್ತು ಸ್ಥಳೀಯ ಜನಪ್ರಿಯ ಖಾದ್ಯಗಳ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಇವುಗಳಲ್ಲಿ ಹೆಚ್ಚಿನವು ವಿಶೇಷ ಭಾರತೀಯ ಅಂಗಡಿಗಳನ್ನು ಹೊರತುಪಡಿಸಿ ಬೇರೆಡೆ ಸಿಗುವುದು ಕಷ್ಟ. ಹಾಗಾಗಿ ಇಂತಹ ಅಂಗಡಿಗಳಿಗೆ ಭೇಟಿ ನೀಡುವುದು ಅವರಿಗೆ ಇನ್ನಷ್ಟು ವಿಶೇಷ ಎನಿಸಿದೆ.

ನನ್ನ ಹೃದಯವೇ ಕಿತ್ತು ಬಂದಂತಾಗಿದೆ. ಅದರ ಅರ್ಧ ಭಾಗ ಭಾರತದಲ್ಲಿದ್ದರೆ, ಇನ್ನರ್ಧ ಭಾಗ ಇಲ್ಲಿದೆ' ಎಂದು ಅವರು ಭಾವುಕರಾಗಿ ಹೇಳಿದ್ದಾರೆ. 'ನಾನು ಇಲ್ಲಿದ್ದಾಗ ಭಾರತವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಭಾರತದಲ್ಲಿದ್ದಾಗ ಇಲ್ಲಿರುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ'

ಈ ದಿನಸಿ ಶಾಪಿಂಗ್, ರಿವರ್ಸ್ ಕಲ್ಚರ್ ಶಾಕ್‌ನ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಫಿಲಿಪ್ಸ್ ವಿಡಿಯೋ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ. 'ಭಾರತ ಮತ್ತು ನನ್ನೆಲ್ಲಾ ಸ್ನೇಹಿತರು, ನನ್ನ ಪ್ರಯಾಣ, ಸಂಸ್ಕೃತಿ, ಎಲ್ಲವನ್ನೂ' ಈಗಾಗಲೇ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.

ಈ ವಿಡಿಯೋ ಕ್ಷಣಾರ್ಧದಲ್ಲಿ ವೀಕ್ಷಕರ ಮನಗೆದ್ದಿದ್ದು, ಭಾರತದ ಮೇಲಿನ ಅವರ ಪ್ರಾಮಾಣಿಕ ಪ್ರೀತಿಗೆ ಅನೇಕರು ಮನಸೋತಿದ್ದಾರೆ.

PREV
Read more Articles on
click me!

Recommended Stories

66ರ ವಯಸ್ಸಿನಲ್ಲೂ ತಲೆತುಂಬ ಕೂದಲು.. ಸ್ಟೈಲ್ ರಾಜ ನಾಗಾರ್ಜುನರ ಈ ದಟ್ಟ ಕೂದಲಿನ ರಹಸ್ಯ ಇದು!
1978ರ ಸ್ಕೂಲ್ ಮಾರ್ಕ್ಸ್ ಕಾರ್ಡ್ ವೈರಲ್; ವಿಭಿನ್ನ, ವಿಶೇಷತೆಯ ಕೊಪ್ಪಳ ಶಾಲೆಯ ಅಂಕಪಟ್ಟಿ