ʻಇಲ್ಲʼ ಅಂದಿದ್ದೇ ತಡ, ಮನೆಗೆ ಬಂತು ವರ್ಷಕ್ಕಾಗುವಷ್ಟು ಡ್ರೆಸ್,ಇಷ್ಟಾದ್ರೂ ಗರ್ಲ್‌ ಫ್ರೆಂಡ್‌ ಅತೃಪ್ತ!

Published : Jun 11, 2026, 11:45 AM IST
Viral Story

ಸಾರಾಂಶ

ವಾರ್ಡ್ರೋಬ್ ತುಂಬಾ ಬಟ್ಟೆ ಇದ್ರೂ ಹೆಣ್ಮಕ್ಕಳ ಬಾಯಲ್ಲಿ ಬಟ್ಟೆ ಇಲ್ಲ ಎನ್ನುವ ಮಾತೇ ಬರುತ್ತೆ. ಇದನ್ನು ಕೇಳಿ ಗಂಡ ಕೋಪಗೊಂಡ್ರೆ ಬಾಯ್ ಫ್ರೆಂಡ್ ನಕ್ಕು ಸುಮ್ನಾಗ್ತಾನೆ. ಆದ್ರೆ ಇಲ್ಲೊಬ್ಬ ಪ್ರೇಮಿ, ತನ್ನ ಪ್ರೀತಿಯನ್ನು ಭಿನ್ನವಾಗಿ ತೋರಿಸಿದ್ದಾನೆ. 

ಹುಡುಗಿಯರು ಹಾಗೂ ಅವರ ಔಟ್ ಫಿಟ್ ಅರ್ಥ ಮಾಡ್ಕೊಳ್ಳೋಕೆ ಸಾಧ್ಯವಿಲ್ಲ. ಎಲ್ಲರಿಗಿಂತ ಡಿಫರೆಂಟ್ ಆಗಿ ಕಾಣೋಕೆ ಹುಡುಗಿಯರು ಏನೇನೋ ಕಸರತ್ತು ಮಾಡ್ತಾರೆ. ಒಂದು ಬಟ್ಟೆ ಒಂದೇ ಬಾರಿ. ಅದ್ರಲ್ಲಿ ಫೋಟೋ, ರೀಲ್ಸ್ ಎಲ್ಲ ಆಗಿರುತ್ತೆ. ಮತ್ತೆ ಆ ಡ್ರೆಸ್ ಧರಿಸಿದ್ರೆ ನಾಚಿಕೆ ಅನ್ನೋರೇ ಹೆಚ್ಚು. ಇದೇ ಕಾರಣಕ್ಕೆ ಹುಡುಗಿಯರ ವಾರ್ಡ್ರೋಬ್ ನಲ್ಲಿ ಎಷ್ಟು ಡ್ರೆಸ್ ಇದ್ರೂ ಸಾಲೋದಿಲ್ಲ. ಗರ್ಲ್ ಫ್ರೆಂಡ್ ಡ್ರೆಸ್ ಇಲ್ಲ ಅಂತಿದ್ದಂತೆ ಇಲ್ಲೊಬ್ಬ ಪ್ರೇಮಿ ಮನಸ್ಸು ಕರಗಿದೆ. ಜೇಬು ಖಾಲಿ ಮಾಡಿ, ವರ್ಷಕ್ಕಾಗುವಷ್ಟು ಸಾಂಪ್ರದಾಯಿಕ ಡ್ರೆಸ್ ಪಾರ್ಸಲ್ ಮಾಡಿದ್ದಾನೆ. ಇಷ್ಟಾದ್ರೂ ಆಕೆಗೆ ತೃಪ್ತಿ ಇಲ್ಲ.

ವರ್ಷಕ್ಕಾಗುವಷ್ಟು ಡ್ರೆಸ್ ಗಿಫ್ಟ್

ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ಸುದ್ದಿ ಪ್ರಕಾರ ಘಟನೆ ನಡೆದಿರೋದು ದೆಹಲಿಯ ಪ್ರೀತ್ ವಿಹಾರ್ನಲ್ಲಿ. ಇಲ್ಲಿನ 28 ವರ್ಷದ ವ್ಯಕ್ತಿ, ತನ್ನ ಉದಾರ ಮನಸ್ಸಿನಿಂದ ಗರ್ಲ್ ಫ್ರೆಂಡ್ ಗೆ ಬಟ್ಟೆ ಖರೀದಿ ಮಾಡಿದ್ದಾನೆ. ಒಂದಲ್ಲ ಎರಡಲ್ಲ 365 ದಿನಕ್ಕೆ ಆಗುವಷ್ಟು ಬಟ್ಟೆ ಖರೀದಿಸಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಬಾಯ್ ಫ್ರೆಂಡ್ ತನ್ನೆಲ್ಲ ಡ್ರೆಸ್ ನೋಡಿದ್ದಾನೆ, ಯಾವುದೂ ಹೊಸ ಡ್ರೆಸ್ ಇಲ್ಲ ಅಂತ ಗರ್ಲ್ ಫ್ರೆಂಡ್ ಹೇಳಿದ್ದಾಳೆ. ಇನ್ಮುಂದೆ ಗರ್ಲ್ ಫ್ರೆಂಡ್ ಇಂಥ ಮಾತನಾಡ್ಬಾರದು ಅಂತ ಬಾಯ್ ಫ್ರೆಂಡ್ ಬಟ್ಟೆ ಪಾರ್ಸಲ್ ಕಳುಹಿಸಿದ್ದಾನೆ.

ಗರ್ಲ್‌ಫ್ರೆಂಡ್‌ಗೆ 3 ಲಕ್ಷದ ಗಿಫ್ಟ್ ಕೊಟ್ಟ ಮರುದಿನವೇ ಯುವಕನಿಗೆ ಬಿಗ್ ಶಾಕ್! ಚಾಟ್ ಸ್ಕ್ರೀನ್‌ಶಾಟ್ ನೋಡಿ ಕಣ್ಣೀರಿಟ್ಟ ಪ್ರೇಮಿ

ಇಷ್ಟಾದ್ರೂ ತೃಪ್ತಿ ಇಲ್ಲ

ವಿಶೇಷ ಅಂದ್ರೆ ಗರ್ಲ್ ಫ್ರೆಂಡ್ ಗೆ ಈಗ ಧರಿಸೋಕೆ ಬಟ್ಟೆ ಇದೆ. ಆದ್ರೆ ಫಂಕ್ಷನ್ ಇಲ್ಲ. ಅಂದ್ರೆ ಬಾಯ್ ಫ್ರೆಂಡ್ ಕಳುಹಿಸಿರುವ ಎಲ್ಲ ಕುರ್ತಾಗಳು ತುಂಬಾ ಸುಂದರವಾಗಿವೆ. ಮದುವೆ, ಬರ್ತ್ ಡೇ ಅಥವಾ ಫ್ಯಾಮಿಲಿ ಫಂಕ್ಷನ್ ನಲ್ಲಿ ಇದನ್ನು ಧರಿಸಬೇಕು. ಆದ್ರೆ ಯಾವುದೇ ಫಂಕ್ಷನ್ ಇಲ್ಲ. ಹಾಗಾಗಿ ಗರ್ಲ್ ಫ್ರೆಂಡ್ ಸ್ವಲ್ಪ ಬೇಸರದಲ್ಲಿದ್ದಾಳೆ. 

ನೆಟ್ಟಿಗರು ಹೇಳೋದೇನು?

ಇದೆಲ್ಲ ನೋಡಿದ ನೆಟ್ಟಿಗರು, ನೀನು ಅದೃಷ್ಟ ಮಾಡಿದ್ದೀಯಾ, ಲಕ್ಕಿ ಗರ್ಲ್‌ ಅಂತಿದ್ದಾರೆ. ಆದ್ರೆ ಹುಡುಗರಿಗೆ ಭಯ ಶುರುವಾಗಿದೆ. ಹುಡುಗಿಯರು ಸಾಮೂಹಿಕವಾಗಿ ಪ್ರತಿಭಟನೆ ಮಾಡ್ದೆ ಹೋದ್ರೆ ಸಾಕಪ್ಪ ಅಂತಿದ್ದಾರೆ.

PREV
Read more Articles on
click me!

Recommended Stories

36ರ ಮಹಿಳೆ - 19ರ ಯುವಕ, ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ 5 ಮಕ್ಕಳ ತಾಯಿ !
Reverse Culture Shock: ಭಾರತದ ನೆನಪಲ್ಲಿ ಕಂಗಾಲಾದ ಅಮೆರಿಕನ್ ಯುವತಿ; ಇಂಡಿಯನ್ ಸ್ನ್ಯಾಕ್ಸ್‌ ಮೊರೆ, ವಿಡಿಯೋ ವೈರಲ್