ಪೋಷಕರ ಜೊತೆ ತನ್ನದೇ ಭಾಷೆಯಲ್ಲಿ ವಾಗ್ವಾದ, ಪುಟಾಣಿ ವಿಡಿಯೋಗೆ ಭಾರಿ ಮೆಚ್ಚುಗೆ

Published : Feb 28, 2026, 07:35 PM IST
Cute Baby Girl

ಸಾರಾಂಶ

ಪೋಷಕರ ಜೊತೆ ತನ್ನದೇ ಭಾಷೆಯಲ್ಲಿ ವಾಗ್ವಾದ, ಪುಟಾಣಿ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮುದ್ದು ಕಂದ ತನ್ನ ಭಾಷೆಯಲ್ಲಿ ಪೋಷಕರ ಜೊತೆ ಭಾರಿ ವಾಗ್ವಾದ ನಡೆಸಿದ್ದಾಳೆ. ಕೊನೆಗೆ ಪೋಷಕರೆ ಈಕೆಯ ಮುಂದೆ ಮಂಡಿಯೂರಿದ ವಿಡಿಯೋ ಇದು. 

ಮುದ್ದು ಮಕ್ಕಳ ಮಾತು, ಆಟ, ಅವರ ನೋಟ ಎಲ್ಲವವೂ ಮನಸ್ಸಿಗೆ ಮುದ ನೀಡುತ್ತೆ. ಈ ರೀತಿ ಮಕ್ಕಳ ಹಲವು ವಿಡಿಯೋಗಳು ಭಾರಿ ವೈರಲ್ ಆಗಿದೆ. ಇದೀಗ ಪುಟಾಣಿ ಮಗುವೊಂದು ತನ್ನ ಪೋಷಕರ ಜೊತೆ ಭಾರಿ ವಾಗ್ವಾದ ನಡೆಸುತ್ತಿರುವ ದೃಶ್ಯವೊಂದು ಎಲ್ಲೆಡೆ ವೈರಲ್ ಆಗಿದೆ. ಯಾವುದೋ ವಿಚಾರದಲ್ಲಿ ಮಗುವಿಗೆ ಕೋಪ ಬಂದಿದೆ. ತನ್ನ ಭಾಷೆಯಲ್ಲಿ ಪೋಷಕರ ಜೊತೆ ಅಷ್ಟೇ ಧೈರ್ಯವಾಗಿ, ಆತ್ಮವಿಶ್ವಾಸದಿಂದ ಮಗು ವಾಗ್ವಾದ ಮಾಡುತ್ತಿರುವ ದೃಶ್ಯ ಇದಾಗಿದೆ. ಪುಟ್ಟ ಮಗುವಿನ ಭಾಷೆಯ ಈ ವಿಡಿಯೋ ದಾಖಲೆಯ ಲೈಕ್ಸ್ ಪಡೆದಿದೆ.

ವಿಡಿಯೋದಲ್ಲಿ ಮಗು ಸೋಫಾ ಮೇಲೆ ನಿಂತು ತಂದೆ ಜೊತೆ ಮಾತನಾಡುತ್ತಿದೆ. ಇತ್ತ ತಾಯಿ ಮೊಬೈಲ್ ಮೂಲಕ ದೃಶ್ಯ ಸೆರೆ ಹಿಡಿದಿದೆ. ಕೆಲ ವಿಚಾರದಲ್ಲಿ ಮಗು ಸ್ಪಷ್ಟವಾಗಿ ಪೋಷಕರಿಗೆ ಹೇಳುತ್ತಿದೆ. ಆದರೆ ಅದೇನು ಹೇಳುತ್ತಿದೆ ಅನ್ನೋದಕ್ಕಿಂತ ಮಗುವಿನ ಭಾಷೆ, ಹೇಳುವ ರೀತಿ, ಏನೇ ಹೇಳಿದರೂ ಬಿಟ್ಟುಕೊಡವೆ ವಾದ ಮಾಡುವ ರೀತಿ ಎಲ್ಲರಿಗೂ ಇಷ್ಟವಾಗಿದೆ. ಇದೇ ಕಾರಣದಿಂದ ಈ ವಿಡಿಯೋ ಹೊಸ ಸಂಚಲನ ಸೃಷ್ಟಿಸಿದೆ.

ಮಗುವಿನ ಭಾಷೆ ಅರ್ಥವಾಗದಿದ್ದರೂ ಆಕೆ ಭಾವನೆ ಸ್ಪಷ್ಟ

ಮಗು ಏನು ಹೇಳುತ್ತಿದೆ ಅನ್ನೋದು ಅರ್ಥವಾಗಲ್ಲ. ಆದರೆ ಮಗು ಏನು ಹೇಳಲು ಹೊರಟಿದೆ, ಆಕೆ ಭಾವನೆಗಳು ಸ್ಪಷ್ಟವಾಗಿ ವ್ಯಕ್ತವಾಗಿದೆ. ಇನ್ನು ತಂದೆ ಅದೇ ರೀತಿ ವಾಗ್ವಾದ ಮಾಡಿದರೂ ಸ್ವಲ್ಪವೂ ಜಗ್ಗಿಲ್ಲ, ಒಂದು ಹೆಜ್ಜೆ ಹಿಂದೆ ಇಟ್ಟಿಲ್ಲ. ಸರಿಸಮಾನಾಗಿ ವಾಗ್ವಾದ ಮಾಡಿದ್ದಾಳೆ. ಈ ಪುಟಾಣಿ ಕಂದಮ್ಮನ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಈ ಕಂದಮ್ಮ ಮಾತಿನ ನಡುವೆ ತನ್ನ ಧ್ವನಿಯನ್ನು ಏರಿಸಿದ್ದಾಳೆ. ವಯಸ್ಕರು ತಮ್ಮ ಆಕ್ರೋಶದ ಮಾತುಗಳನ್ನಾಡುವಾಗ ಇರುವ ದಾಟಿ ಎಲ್ಲವೂ ಮಿಳಿತಗೊಂಡಿದೆ.ಹಾವ ಭಾವ, ಕೈಗಳ ಚಲನೆ, ಸನ್ನೆ ಎಲ್ಲವನ್ನು ಜನರು ಇಷ್ಟಪಟ್ಟಿದ್ದಾರೆ. ಕ್ಯೂಟ್ ವಿಡಿಯೋಗೆ ಭರ್ಜರಿ ಕಮೆಂಟ್ಸ್ ವ್ಯಕ್ತವಾಗಿದೆ. ಹಲವರು ಈ ಕಂದಮ್ಮನ ನನ್ನ ಲಾಯರ್ ಆಗಿ ನೇಮಕ ಮಾಡುತ್ತೇನೆ ಎಂದಿದ್ದಾರೆ. ನನ್ನ ಯಾವುದೇ ಕೇಸ್ ವಾದಿಸಲು ಇದ್ದರೆ ಕಂದನಿಗೆ ಹೇಳುತ್ತೇನೆ. ನಾನು ಸೋಲುವ ಚಾನ್ಸೇ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಬಹುತೇಕರು ಈ ಕಂದನ ಮಾತನ್ನು ನಾನು ಒಪ್ಪುತ್ತೇನೆ. ಆಕೆ ಹೇಳಿದ್ದು ಸರಿಯಾಗಿದೆ ಎಂದಿದ್ದಾರೆ.

 

 

PREV
Read more Articles on
click me!

Recommended Stories

Tukaram Mundhe: ಮಗುವಿನ ವಡಾ ಪಾವ್ ಆಸೆಗೆ ಐಎಎಸ್ ಅಧಿಕಾರಿ ತುಕಾರಾಂ ಮುಂಢೆ ಕೊಟ್ಟ ಕ್ಯೂಟ್ ರಿಪ್ಲೈ ವೈರಲ್!
Birthday ದಿನ ಕೇಕ್ ಕತ್ತರಿಸಬೇಕಿದ್ದ ಮುಂಬೈನ ಈ ಸಿಇಒ 90 ಗಂಟೆ ಊಟವನ್ನೇ ಮಾಡಲಿಲ್ಲ! ಅಸಲಿ ಕಾರಣವೇನು?