ಕೊರೆಸಿದಾಗ ನೀರೇ ಬಾರದ ಬೋರ್ ವೆಲ್ ನಲ್ಲಿ ನೀರು ಚಿಮ್ಮಿ ವಿಸ್ಮಯವಾಗಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ [ಅ.20] : ಅನೇಕ ದಿನಗಳ ಹಿಂದೆ ಕೊರೆಸಿದ್ದು, ಆಗ ನೀರು ಬಾರದ ಬೋರವೆಲ್ ನಲ್ಲಿ ನಿಂದ ಇದ್ದಕ್ಕಿದ್ದಂತೆ ನೀರು ಚಿಮ್ಮುತ್ತಿದೆ.
ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಗಂಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬೋರವೆಲ್‌ನಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿದ್ದು, ಎಲ್ಲರನ್ನೂ ವಿಸ್ಮಯಗೊಳಿಸುತ್ತಿದೆ.
ಗ್ರಾಮದ ಮಾಳಿಂಗರಾಯ ದೊಡಮನಿ ಎಂಬುವವರ ಜಮೀನಿನಲ್ಲಿರುವ ಬೋರವೆಲ್‌ನಿಂದ ನೀರು ಚಿಮ್ಮುತ್ತಿದೆ. ಹಲವು ತಿಂಗಳುಗಳ ಹಿಂದೆ ಕೊರೆಸಿದ್ದ ಬೋರವೆಲ್ ನಲ್ಲಿ ಇದ್ದಕ್ಕಿದ್ದಂತೆ ನೀರು ಉಕ್ಕುತ್ತಿದೆ. ಇದರಿಂದ ರೈತ ದೊಡಮನಿ ಅವರ ಶ್ರಮಕ್ಕೆ ಕೊನೆಗೂ ಬೆಲೆ ಸಿಕ್ಕಂತಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಯಾವುದೇ ಯಂತ್ರದ ಶಕ್ತಿ ಇಲ್ಲದೆ ಚಿಮ್ಮುವ ನೀರು ಕಂಡು ಸ್ಥಳೀಯರು ಚಕಿತರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿ ಅಚ್ಚರಿಯನ್ನು ಕಣ್ ತುಂಬಿಕೊಳ್ಳುತ್ತಿದ್ದಾರೆ.