ಪಾಕಿಸ್ತಾನಕ್ಕೆ ಜೈಕಾರ ಹಾಕಿದ ವಿಜಯಪುರ ಯುವಕನಿಗೆ ಗೂಸಾ

Published : Feb 27, 2019, 10:32 PM ISTUpdated : Feb 27, 2019, 10:33 PM IST
ಪಾಕಿಸ್ತಾನಕ್ಕೆ ಜೈಕಾರ ಹಾಕಿದ ವಿಜಯಪುರ ಯುವಕನಿಗೆ ಗೂಸಾ

ಸಾರಾಂಶ

ಒಂದು ಕಡೆ ವೈರಿ ಪಾಕಿಸ್ತಾನವನ್ನು ಮಟ್ಟಹಾಕುವ ಚಿಂತನೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಕೆಲವರು ದೇಶ  ವಿರೋಧಿ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡುತ್ತಿದ್ದಾರೆ.

ವಿಜಯಪುರ[ಫೆ. 27]  ಬಾಲಕನೊಬ್ಬ ಫೇಸ್ ಬುಕ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಪೊಸ್ಟ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಹಿಂದು ಯುವಕರು ಆತನ ಮನೆ ಮೇಲೆ ದಾಳಿ ನಡೆಸಿ ಬಾಲಕನನ್ನು ಥಳಿಸಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಲತವಾಡ ಪಟ್ಟಣದ ಮಹಿಬೂಬನಗರದಲ್ಲಿ  ನಡೆದಿದೆ.

ಬಾಲಕನನ್ನು ಥಳಿಸುತ್ತಿರುವುದನ್ನು ಅರಿತ ಊರಿನ ಹಿಂದು ಸಮುದಾಯದ ಹಿರಿಯರು ಮಧ್ಯಪ್ರವೇಶಿಸಿ ಬಾಲಕನ ಥಳಿತಕ್ಕೆ ತಡೆ ಒಡ್ಡಿದ್ದಾರೆ. ಹಿರಿಯರ ಮಾತಿಗೆ ಗೌರವ ಕೊಟ್ಟ ಯುವಕರ ತಂಡ ಬಾಲಕನನ್ನು ಅಲ್ಲಿನ ಪೊಲೀಸ್ ಹೊರಠಾಣೆಗೆ ಕರೆತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.

‘ನಮ್ಮ ಪೈಲಟ್ ಬಂಧನವಾಗಿದ್ದು ನಿಮಗೆ ಗೊತ್ತಿದ್ದರೂ ನಿದ್ರಿಸುತ್ತಿದ್ದೀರಾ!’

ವಿಷಯ ತಿಳಿದು ಮುದ್ದೇಬಿಹಾಳದ ಪಿಎಸ್ ಐ ಸಂಜಯ್ ತಿಪರಡ್ಡಿ ಅವರು ಹೆಚ್ಚಿನ ಸಿಬ್ಬಂದಿ ಜೊತೆ ನಾಲತವಾಡಕ್ಕೆ ಧಾವಿಸಿದ್ದಾರೆ. ಸದ್ಯ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕ ಮೊಬೈಲ್ ಆಪರೇಟ್ ಮಾಡುವಾಗ ಈ ಪೋಸ್ಟ್  ಅಪಲೋಡ್ ಆಗಿರಬಹುದು ಎಂದು ಮೂಲಗಳು ತಿಳಿಸಿವೆ. ಸದ್ಯ ನಾಲತವಾಡದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡಿದೆ.

 

PREV
click me!

Recommended Stories

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ