ಪಾಕ್ ಮೇಲೆ ಬೆರಳು ಮಾಡಿ ತೋರಿಸ್ಬೇಡಿ ಎಂದಿದ್ದ KPCC ವಕ್ತಾರ ಪೊಲೀಸ್ ವಶಕ್ಕೆ

By Web DeskFirst Published Feb 18, 2019, 5:48 PM IST
Highlights

ಕೆಪಿಸಿಸಿ ವಕ್ತಾರ ಎಸ್ ಎಮ್ ಪಾಟೀಲ್ ಗಣಿಹಾರ ಪೊಲೀಸ್ ವಶಕ್ಕೆ!ಪುಲ್ವಾಮಾದಲ್ಲಿ ಉಗ್ರರ ದಾಳಿ ಕೃತ್ಯ ಖಂಡಿಸಿ ಪತ್ರಿಕಾಗೋಷ್ಠಿ ಕರೆದಿದ್ದ ಗಣಿಹಾರ!ಗೋಷ್ಠಿಯಲ್ಲಿ ಪಾಕಿಸ್ತಾನದ ಮೇಲೆ ಬೆರಳು ಮಾಡಿ ತೊರಿಸಬೇಡಿ ಎಂದಿದ್ದ  ಎಸ್.ಎಂ.ಪಾಟೀಲ ಗಣಿಹಾರ.

ವಿಜಯಪುರ, [ಫೆ.18]: ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಮೇಲೆ ಬೆರಳು ಮಾಡಿ ತೋರಿಸಬೇಡಿ ಎಂದಿದ್ದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರನ್ನ ವಿಜಯಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುಲ್ವಾಮಾ ಕೃತ್ಯ ಖಂಡಿಸಿ ಪತ್ರಿಕಾಗೋಷ್ಠಿ ಕರೆದಿದ್ದ ಪಾಟೀಲ ಗಣಿಹಾರ ಅವರು ಪಾಕಿಸ್ತಾನದ ಮೇಲೆ ಬೆರಳು ಮಾಡಿ ತೊರಿಸಬೇಡಿ ಎಂದಿದ್ದರು. ಇದಕ್ಕೆ ಜಿಲ್ಲೆಯಲ್ಲಿ ತೀವ್ರ ಖಂಡನೆಗಳು ವ್ಯಕ್ತವಾಗಿದ್ದವು..ಅಷ್ಟೇ ಅಲ್ಲದೇ  ಅವರದೇ ಪಕ್ಷದ ವಕ್ತಾರನ ಹೇಳಿಕೆಗೆ ಗೃಹ ಸಚಿವರು ಯಾವ ಶಿಕ್ಷೆ ಕೊಡ್ತೀರಾ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಬಹಿರಂಗವಾಗಿ ಪ್ರಶ್ನಿಸಿದ್ದರು.

ಪುಲ್ವಾಮ ದಾಳಿಗೆ ಪಿಕ್ಚರ್ ಅಭಿ ಬಾಕಿ ಹೈ ಎಂದ ಬೆಂಗಳೂರಿನ ಯುವಕ

ಇದ್ರಿಂದ ಮುಜಗರಕ್ಕೀಡಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, ಪಾಟೀಲ ಗಣಿಹಾರ ಅವರ ಮೇಲೆ ಕ್ರಮಕೈಗೊಳ್ಳಿ ಎಂದು ಪೊಲೀಸ್ ಇಲಾಖೆಗೆ ‌ಸೂಚಿಸಿದ್ದರು.

ಹಿನ್ನಲೆಯಲ್ಲಿ ಇಂದು [ಸೋಮವಾರ] ಡಿವೈಎಸ್ಪಿ ಅಶೋಕ್ ಅವರು ಗಣಿಹಾರನನ್ನು ವಶಕ್ಕೆ ಪಡೆದಿದ್ದು, ವಿಜಯಪುರದ ಜಲನಗರ‌ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

click me!