ವಿಜಯಪುರ ಜಿಲ್ಲೆಯ 5 ಕಡೆ ಉಗ್ರಾಣ ನಿರ್ಮಾಣಕ್ಕೆ ಚಿಂತ​ನೆ: ಯತ್ನಾ​ಳ

Published : Oct 29, 2019, 02:08 PM IST
ವಿಜಯಪುರ ಜಿಲ್ಲೆಯ 5 ಕಡೆ ಉಗ್ರಾಣ ನಿರ್ಮಾಣಕ್ಕೆ ಚಿಂತ​ನೆ: ಯತ್ನಾ​ಳ

ಸಾರಾಂಶ

ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೆ ಚಾಲನೆ ನೀಡಿದ ಶಾಸಕ ಯತ್ನಾಳ| ಈಗಾಗಲೇ ಜೀವರ್ಗಿಯಲ್ಲಿ ರೈತರ ಉಗ್ರಾಣ ಪ್ರಾರಂಭಿಸಲಾಗಿದೆ| ವಿಜಯಪುರ ಜಿಲ್ಲೆಗೂ 5 ಕಡೆಗಳಲ್ಲಿ ನಿರ್ಮಿಸುವ ಉದ್ದೇಶ​ವಿದೆ| ರೈತರಿಗೆ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಬಂದಾಗ ಮಾರಲು ಅನಕೂಲಕರವಾಗಲಿವೆ|

ವಿಜಯಪುರ(ಅ.29): ನಗರದ ಹೊರವಲಯದಲ್ಲಿರುವ ತೊರವಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು.

ಹೊಸ ತೊರವಿಯ ಹನುಮಾನ ಗುಡಿ ಸಮುದಾಯ ಭವನ ಕಟ್ಟಡ, ಹೊಸ ಒಎಚ್‌ಟಿ (ನೀರಿನ ಟ್ಯಾಂಕ್‌) ನಿರ್ಮಾಣ, ಗ್ರಾಮಕ್ಕೆ ಪೈಪ್‌ ಲೈನ್‌ ಮೂಲಕ ನೀರಿನ ಸರಬರಾಜು ಕಾಮಗಾರಿಗೆ ಭೂಮಿ ಪೂಜೆ ಹಾಗೂ ಆಲ್‌ ಅಮೀನ ಹತ್ತಿರ ಶಾಸಕರ ಜನಸಂಪರ್ಕ ಕಾರ್ಯಾಲಯಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಸಿದ್ಧಸಿರಿ ಶೀತಲಿಕರಣ ಘಟಕ ನಗರದಲ್ಲಿ ಪ್ರಾರಂಭದ ಹಂತದಲ್ಲಿದ್ದು, ರೈತರಿಗೆ ಅನಕೂಲವಾಗುವ ದೃಷ್ಟಿಯಿಂದ ನಿರ್ಮಾಣವಾಗುತ್ತಿದೆ. ಈಗಾಗಲೇ ಜೀವರ್ಗಿಯಲ್ಲಿ ರೈತರ ಉಗ್ರಾಣ ಪ್ರಾರಂಭಿಸಲಾಗಿದೆ, ವಿಜಯಪುರ ಜಿಲ್ಲೆಗೂ 5 ಕಡೆಗಳಲ್ಲಿ ನಿರ್ಮಿಸುವ ಉದ್ದೇಶ​ವಿದೆ. ರೈತರಿಗೆ ತಾವು ಬೆಳೆದ ಬೆಳೆಗೆ ತಕ್ಕ ಬೆಲೆ ಬಂದಾಗ ಮಾರಲು ಅನಕೂಲಕರವಾಗಲಿವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೇರೆ ಬ್ಯಾಂಕುಗಳಂತೆ ಸಾಲಕ್ಕಾಗಿ ಬರುವವರನ್ನು ಕಾಗದ ಪತ್ರಗಳಿಗಾಗಿ ಸುತ್ತಾಡಿಸದೆ ಕೇವಲ 3 ಜಾಮೀನುದಾರರ ಸಹಿ ಹಾಗೂ ರಾಷ್ಟ್ರೀಕೃತ ಬ್ಯಾಂಕಿನ 2 ಚೆಕ್‌ ಸಲ್ಲಿಸಿದ್ದಾದಲ್ಲಿ ಅವರ ಖಾತೆಗೆ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಹಣ ಜಮೆ ಮಾಡುವ ವ್ಯವಸ್ಥೆ ಸಿದ್ಧಸಿರಿ ಸೌಹಾರ್ದ ಸಹಕಾರಿ ಮಾಡಿದೆ. ಎಲ್ಲ ಬಡವರಿಗೆ, ವ್ಯಾಪಾರಸ್ಥರಿಗೆ, ರೈತರಿಗೆ ನೆರವಾಗಲಿದೆ ಮತ್ತು ಸಿದ್ಧಸಿರಿ ಮೂಬೈಲ್‌ ಆ್ಯಪ್‌ ಸಹ ಬಿಡುಗಡೆಗೊಳಿಸಿದ್ದು ಆನ್‌ಲೈನ್‌ ಮೂಲಕ ಬ್ಯಾಕಿಂಗ್‌ ವ್ಯವಹಾರ ಮಾಡಬಹುದಾಗಿದೆ ಎಂದರು.

ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಸಿದ್ಧಸಿರಿ ಸೌಹಾರ್ದ ಸಹಕಾರಿ 13 ವರ್ಷಗಳಲ್ಲಿ 114ನೇ ಶಾಖೆಯನ್ನು ಉದ್ಘಾಟಿಸುತ್ತಿರುವ ಜಿಲ್ಲೆಯ ಹೆಮ್ಮೆಯ ಬ್ಯಾಂಕ್‌ ಆಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನಂಬರ್‌ ಒನ್‌ ಸ್ಥಾನಕ್ಕೇರುವ ಬ್ಯಾಂಕ್‌ ಆಗಲಿದೆ ಎಂದು ಹಾರೈಸಿದರು. ಅಭಿನವ ಮುರಗೇಂದ್ರ ದೇವರ ಸಾನ್ನಿಧ್ಯ ವಹಿಸಿದ್ದರು.

ತೊರವಿ ಗ್ರಾಪಂ ಅಧ್ಯಕ್ಷ ಅನೀಲ ಜಗತಾಪ, ಉಪಾಧ್ಯಕ್ಷ ಪಾರ್ವತಿ ಬಬಲಾದಿ, ಕಾಸಪ್ಪ ದರಿಗೊಂಡ, ಗೋಪಾಲ ನಂದುಲಾಲ ಪೂಜಾರಿ, ಅಡಿವೆಪ್ಪ ಸಾಲಗಲ್ಲ, ದಾದಾಸಾಹೇಬ ಬಾಗಾಯತ್‌, ಸಹಕಾರಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಗವ ಅಣ್ಣಗೇರಿ, ನಿರ್ದೇಶಕ ಬಸಯ್ಯ ಹಿರೇಮಠ, ರಾಮನಗೌಡ ಪಾಟೀಲ ಯತ್ನಾಳ, ಶಿವಾನಂದ ಅಣ್ಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಗಣಪತಿ ಜಾಧವ ಅನೇ​ಕ​ರಿ​ದ್ದರು.
 

PREV
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
ಬ್ರೇಕ್‌ಫಾಸ್ಟ್ ರಾಜಕೀಯ.. ಸಿಎಂ, ಡಿಸಿಎಂಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ: ಸಚಿವ ಶಿವಾನಂದ ಪಾಟೀಲ