ಸಿಂದಗಿ: ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು

Published : Oct 20, 2019, 10:39 AM ISTUpdated : Oct 20, 2019, 10:41 AM IST
ಸಿಂದಗಿ: ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು

ಸಾರಾಂಶ

ಮನೆಯಲ್ಲಿ ಮಲಗಿದ್ದ ವೇಳೆ ಹೆಗ್ಗಣ ಕಚ್ಚಿ ಆರು ತಿಂಗಳ ಗಂಡು ಮಗು ಸಾವು|  ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮಗುವಿಗೆ ಹೆಗ್ಗಣ ಕಚ್ಚಿದೆ| ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ| ಮಗುವಿನ ಪೋಷಕರು ನಿದ್ದೆಯಲ್ಲಿದ್ದ ಕಾರಣ ಮಗುವಿನ ಮೇಲೆ ಹೆಗ್ಗಣ ಕಚ್ಚಿರುವುದು ಗೊತ್ತೆ ಆಗಿಲ್ಲ| ಮಗುವಿನ ಬಲಗಾಲಿಗೆ ಬಲವಾಗಿ ಹೆಗ್ಗಣ ಕಚ್ಚಿದೆ| ಹೆಗ್ಗಣ ಕಚ್ಚಿದ್ದರಿಂದ ಮಗು ಬೋರಲು ಬಿದ್ದಿದೆ| ಉಸಿರು ಕಟ್ಟಿ ಸಾವನ್ನಪ್ಪಿರುವ ಶಂಕೆ| 

ವಿಜಯಪುರ(ಅ.20): ಮನೆಯಲ್ಲಿ ಮಲಗಿದ್ದ ವೇಳೆ ಹೆಗ್ಗಣ ಕಚ್ಚಿ ಆರು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹೊಸೂರು‌ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಹಾಗೂ ಗೋಲಪ್ಪ ದಂಪತಿಯ ಆರು ತಿಂಗಳ ಗಂಡು ಮಗು ಮೃತಪಟ್ಟಿದೆ. 

ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮಗುವಿಗೆ ಹೆಗ್ಗಣ ಕಚ್ಚಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮಗುವಿನ ಪೋಷಕರು ನಿದ್ದೆಯಲ್ಲಿದ್ದ ಕಾರಣ ಮಗುವಿನ ಮೇಲೆ ಹೆಗ್ಗಣ ದಾಳಿ ಮಾಡಿರುವುದು ಗೊತ್ತೆ ಆಗಿಲ್ಲ. ಮಗುವಿನ ಬಲಗಾಲಿಗೆ ಬಲವಾಗಿ ಹೆಗ್ಗಣ ಕಚ್ಚಿದೆ. ಹೆಗ್ಗಣ ಕಚ್ಚಿದ್ದರಿಂದ ಮಗು ಬೋರಲು ಬಿದ್ದಿದೆ. ಇದರಿಂದ ಮಗು ಉಸಿರು ಕಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತಪಟ್ಟ ಮಗುವಿನ ತಾಯಿ ಗೀತಾ ಅವರು ತವರು ಮನೆಗೆ ಬಂದ ವೇಳೆ ಈ ಘಟನೆ ನಡೆದಿದೆ. ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
 

PREV
click me!

Recommended Stories

ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!