‘BSY ಮೂರು ವರ್ಷ ಸಿಎಂ ಆಗಿ ಮುಂದುವರೆಯಲಿ ಎಂಬುದು ಸಿದ್ದು ಅಭಿಮತ’

By Web DeskFirst Published Oct 15, 2019, 2:54 PM IST
Highlights

ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾವನೆಯಾಗಿದೆ ಎಂದ  ಶಾಸಕ ಬಸನಗೌಡ ಪಾಟೀಲ ಯತ್ನಾಳ| ಯಡಿಯೂರಪ್ಪ ಕುರಿತು ನಾನು ನೀಡಿದ ಹೇಳಿಕೆಯನ್ನು ಸಿದ್ಧರಾಮಯ್ಯ ಬೆಂಬಲಿಸಿದ್ದಾರೆ| ಮೊನ್ನೆಯ ಅಧಿವೇಶನದಲ್ಲಿ ಬಜೆಟ್ ಅಂಗೀಕಾರಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಸಹಕಾರ ನೀಡಿದ್ದಾರೆ|  ಇದರಲ್ಲಿ ರಾಜಕೀಯವಿಲ್ಲ, ಹೀಗಾಗಿ ಬಿ ಎಸ್ ವೈ ಮೂರು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ|

ವಿಜಯಪುರ[ಅ.15]:  ಬಿ.ಎಸ್. ಯಡಿಯೂರಪ್ಪ ಅವರು ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾವನೆಯಾಗಿದೆ ಎಂದು ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ. 

ಇಂದು ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕುರಿತು ನಾನು ನೀಡಿದ ಹೇಳಿಕೆಯನ್ನು ಸಿದ್ಧರಾಮಯ್ಯ ಬೆಂಬಲಿಸಿದ್ದಾರೆ. ಮೊನ್ನೆಯ ಅಧಿವೇಶನದಲ್ಲಿ ಬಜೆಟ್ ಅಂಗೀಕಾರಕ್ಕೆ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಸಹಕಾರ ನೀಡಿದ್ದಾರೆ.  ಇದರಲ್ಲಿ ರಾಜಕೀಯವಿಲ್ಲ, ಹೀಗಾಗಿ ಬಿ ಎಸ್ ವೈ ಮೂರು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ಶಿಸ್ತು ಸಮಿತಿಯಿಂದ ನೋಟೀಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,  ಈ ಕುರಿತು ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದೇನೆ, ಯಡಿಯೂರಪ್ಪನವರು ಕೆಲವು ಸಲಹೆ ನೀಡಿದ್ದಾರೆ. ಎರಡು ದಿನಗಳಲ್ಲಿ ನೋಟೀಸಿಗೆ ಉತ್ತರ ನೀಡುವ ಕುರಿತು ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷರು ಸುಸಂಸ್ಕೃತ ವ್ಯಕ್ತಿ

ಬಿಜೆಪಿ ಕಚೇರಿಯಿಂದ ಯಡಿಯೂರಪ್ಪ ಬೆಂಬಲಿಗರು, ಲಿಂಗಾಯಿತರನ್ನು ಹೊರ ಹಾಕಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ತಪ್ಪು ಕಲ್ಪನೆಯಿಂದ ಏನೋ ನಡೆದಿರಬಹುದು ಅಷ್ಟೇ,  ನಮ್ಮ ಪಕ್ಷದಲ್ಲಿ ಜಾತಿ ನಡೆಯುವುದಿಲ್ಲ, ರಾಜ್ಯಾಧ್ಯಕ್ಷರ ಜೊತೆ ಈ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು. 

ಹುಣ್ಣಿಮೆ ಹಿನ್ನೆಲೆ ಹಿಂದುಗಳ ಪದ್ಧತಿಯಂತೆ ಕೋಡಿ ಮಠಕ್ಕೆ ಭೇಟಿ ನೀಡಿದ್ದೇನೆ. ಉತ್ತಮ ಭವಿಷ್ಯವಿದೆ ಎಂದು ಸ್ವಾಮೀಜಿ ಅವರು ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ ಎಂದು ಹೇಳಿದರು. 
 

click me!