ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮಾಜಿ ಸಚಿವ

By Web Desk  |  First Published Oct 15, 2019, 11:39 AM IST

ಸಂತ್ರಸ್ಥರ ಬಗ್ಗೆ ಮಾತುನಾಡುವವರು ತಮ್ಮ ಕ್ಷೇತ್ರದ ಬಗ್ಗೆ ಗಮನ ಹರಿಸಿಲ್ಲ| ನಗರದಾದ್ಯಂತ ಗುಂಡಿ, ಧೂಳು ತುಂಬಿಕೊಂಡಿದೆ, ಪ್ರವಾಹ ಪೀಡಿತವಾದಾಗ ಸಿದ್ಧೆಶ್ವರ ಸಂಸ್ಥಾನದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಏನು ಮಾಡಲಿಲ್ಲ ಎಂದ ಮಾಜಿ ಸಚಿವ ಅಪ್ಪಾ ಸಾಹೇಬ ಪಟ್ಟಣಶೆಟ್ಟಿ| ಪ್ರವಾಹ ಬಂದಾಗ ಸಂತ್ರಸ್ತರನ್ನ ಭೇಟಿ ಮಾಡಿಲ್ಲ| ಅವರ ನೆರವಿಗೆ ಹೋಗಲಿಲ್ಲ| ಈಗ ಒಮ್ಮಿಂದೊಂಮೆಲೆ ನೆರೆ ಸಂತ್ರಸ್ಥರ ಬಗ್ಗೆ ಅನುಕಂಪ ಏಕೆ ಅನ್ನೋದೆ ತಿಳಿಯುತ್ತಿಲ್ಲ| 


ವಿಜಯಪುರ[ಅ.15]: ಸಂತ್ರಸ್ಥರ ಬಗ್ಗೆ ಮಾತುನಾಡುವವರು ತಮ್ಮ ಕ್ಷೇತ್ರದ ಬಗ್ಗೆ ಗಮನ ಹರಿಸಿಲ್ಲ, ನಗರದಾದ್ಯಂತ ಗುಂಡಿ, ಧೂಳು ತುಂಬಿಕೊಂಡಿದೆ, ಪ್ರವಾಹ ಪೀಡಿತವಾದಾಗ ಸಿದ್ಧೆಶ್ವರ ಸಂಸ್ಥಾನದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಏನು ಮಾಡಲಿಲ್ಲ ಎಂದು ಮಾಜಿ ಸಚಿವ ಅಪ್ಪಾ ಸಾಹೇಬ ಪಟ್ಟಣಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಪ್ರವಾಹ ಬಂದಾಗ ಸಂತ್ರಸ್ತರನ್ನ ಭೇಟಿ ಮಾಡಿಲ್ಲ, ಅವರ ನೆರವಿಗೆ ಹೋಗಲಿಲ್ಲ, ಈಗ ಒಮ್ಮಿಂದೊಂಮೆಲೆ ನೆರೆ ಸಂತ್ರಸ್ಥರ ಬಗ್ಗೆ ಅನುಕಂಪ ಏಕೆ ಅನ್ನೋದೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಸನಗೌಡ ಪಾಟೀಲ ಯತ್ನಾಳ್ ಅವರು ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಯಡ್ಡಿಯೂರಪ್ಪ ಹಠಾವೋ ಬಿಜೆಪಿ ಬಚಾವೋ ಅಂತಾ ಆಂದೋಲನ ಮಾಡಿದವರು ಇವರೆ, ಯಡ್ಡಿಯೂರಪ್ಪನವರು ಕೆಜೆಪಿ ಗೆ ಹೋದಾಗ ಅವರ ವಿರುದ್ಧ ಏನು ಬೇಕು ಅದನ್ನ ಮಾತನಾಡಿದವರು ಇವರೆ, ಇವರದು 6 ತಿಂಗಳಿಗೊಂದು ಮಾತು ಇರುತ್ತೆ, ಇವರು ಎಂಪಿ ಇದ್ದಾಗ ಪ್ರವೀಣ ಭಾಯಿ ತಗೋಡಿಯಾ ಬಗ್ಗೆ, ನನ್ನ ಬಗ್ಗೆ ಮಾತನಾಡಿದ್ದಾರೆ, ಸುಮ್ನೆ ಬಿಲ್ಡಪ್ ಕೊಡುತ್ತಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ. 

ಬಸನಗೌಡ ಪಾಟೀಲ ಯತ್ನಾಳ್ ರ ಸುಳ್ಳು ಹೇಳಿಕೆಗಳದ್ದೆ ಒಂದು ಬುಕ್ ಮಾಡಿ ಬಿಡುಗಡೆ ಮಾಡುತ್ತೇನೆ, ಅಧಿಕಾರ ಇದ್ದರೆ ಕೆಲಸ ಮಾಡಬೇಕು ಅಂತಾ ಇಲ್ಲ, ಪಕ್ಷದ ಒಂದೂ ಕಾರ್ಯಕ್ರಮಕ್ಕೆ ಬಂದಿಲ್ಲ, ನೀವೆನು ಕಟ್ತಿರಿ, ಕಾರ್ಯಕರ್ತರು ಪಕ್ಷ ಕಟ್ಟಿದ್ದಾರೆ, ಯಡ್ಡಿಯೂರಪ್ಪ ಅವರನ್ನ ಖುಷಿ ಪಡಿಸಲು ಈ ರೀತಿ ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ. ಎರಡನೇ ದರ್ಜೆ ನಾಯಕ ಆಗಬೇಕು ಅಂತಾ ಜಾಕೇಟ್ ಹಾಕಿಕೊಂಡು ಹೋಗುತ್ತಿದ್ದಾರೆ. ಯಡ್ಡಿಯೂರಪ್ಪ ನಂತರ ನಾನೇ ಎಂಬ ಭ್ರಮೆಯಲ್ಲಿರುವವರಲ್ಲಿ ಇವರು ಒಬ್ಬರು ನೆರೆ ಸಂತ್ರಸ್ಥರ ಪರಿಸ್ಥಿತಿಯನ್ನ ರಾಜಕೀಯಕ್ಕೆ ಬಳಕೆ ಆಗಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ. 

click me!