ವಿಜಯಪುರ: ಸಿಡಿಲು ಬಡಿದು ಜನರೇಟರ್‌ಗೆ ಬೆಂಕಿ

Published : Oct 08, 2019, 03:48 PM IST
ವಿಜಯಪುರ: ಸಿಡಿಲು ಬಡಿದು ಜನರೇಟರ್‌ಗೆ ಬೆಂಕಿ

ಸಾರಾಂಶ

ವಿಜಯಪುರದ ಎಂಜಿನಿಯರಿಂಗ್ ಕಚೇರಿಯಲ್ಲಿ ಸಿಡಿಲು ಬಡಿದು ಜನರೇಟರ್ ಬೆಂಕಿಗಾಹುತಿಯಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತು ಬಿರುಸಿನ ಮಳೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ವಿಜಯಪುರ(ಅ.08): ಆಲಮಟ್ಟಿಯಲ್ಲಿರುವ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಸಿಡಿಲು ಬಡಿದು ಜನರೇಟರ್ ಬೆಂಕಿಗಾಹುತಿಯಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತು ಬಿರುಸಿನ ಮಳೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ಮಧ್ಯಾಹ್ನ ಭಾರೀ ಮಳೆಯಾಗಿದ್ದು, ವಿದ್ಯುತ್ ಕೈ ಕೊಟ್ಟಿತ್ತು. ಈ ಸಂದರ್ಭ ಜನರೇಟರ್ ಬಳಸಲು ಮುಂದಾಗಿದ್ದು, ಆಲಮಟ್ಟಿ ಎಡದಂಡೆ ಕಾಲುವೆಯ ಕಚೇರಿಯ ಜನರೇಟರ್ ಸುಟ್ಟು ಭಸ್ಮವಾಗಿದೆ. ಜನರೇಟರ್‌ ಸುಮಾರು ಐದು ಲಕ್ಷ ರೂಪಾಯಿ ಬೆಲೆಬಾಳುತ್ತಿದ್ದು, ಜನರೇಟರ್ ಸೇರಿದಂತೆ ಕಚೇರಿಯ ಕಂಪ್ಯೂಟರ್ ಹಾಗೂ ಸಲಕರಣೆಗಳೂ ಹಾನಿಗೊಳಗಾಗಿವೆ.

ಬೆಳಗಾವಿ: ಪಾಳು ಬಿದ್ದ ಬೋರ್‌ವೆಲ್‌ನಲ್ಲಿ ಏಕಾಏಕಿ ಚಿಮ್ಮಿದ ನೀರು

ಆಲಮಟ್ಟಿಯಲ್ಲಿರುವ ಮುಖ್ಯ ಇಂಜಿನಿಯರ್ ಕಚೇರಿಯ ಜನರೇಟರ್ ಹಾಗೂ ಕಂಪ್ಯೂಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಮಳೆ ಬರುತ್ತಿದ್ದ ಸಂದರ್ಭ ಮಿಂಚಿನಿಂದಾಗಿ ಘಟನೆ ಸಂಭವಿಸಿದೆ.

ಸಿನಿಮೀಯ ಸ್ಟೈಲ್‌ನಲ್ಲಿ ಹಾಡ ಹಗಲೇ ನಡೀತು ದರೋಡೆ..!

PREV
click me!

Recommended Stories

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ