ಕ್ರೈಸ್ತ ಧರ್ಮಕ್ಕೆ ಬಂಜಾರ ಸಮುದಾಯ ಬಲವಂತದ ಮತಾಂತರ

By Kannadaprabha News  |  First Published Nov 3, 2019, 10:41 AM IST

ಬಂಜಾರಾ ಸಮುದಾಯದ ಜನರನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವ ಕ್ರೈಸ್ತ ಮಷನರಿ ಕ್ರಮವನ್ನು ಖಂಡಿಸಿ ಬಂಜಾರ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳು ಶನಿ​ವಾರ ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿವೆ.


ವಿಜಯಪುರ(ನ.03): ಬಂಜಾರಾ ಸಮುದಾಯದ ಜನರನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವ ಕ್ರೈಸ್ತ ಮಷನರಿ ಕ್ರಮವನ್ನು ಖಂಡಿಸಿ ಬಂಜಾರ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳು ಶನಿ​ವಾರ ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿವೆ.

ಕಾನೂನು ಬಾಹಿರವಾಗಿ ಬಂಜಾರಾ ಸಮಾಜದ ಹೆಸರು ದುರ್ಬಳಕೆ ಮಾಡಿಕೊಂಡು ಬಂಜಾರಾ ಕ್ರಿಸ್‌ಮಸ್‌ ಎಂಬ ಚಚ್‌ರ್‍ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿರುವುದು ಖಂಡನೀಯ ಎಂದು ಬಂಜಾರ ಸಮಾಜದವರು ತಿಳಿಸಿದ್ದಾರೆ.

Latest Videos

undefined

NEET, CET ನಂತರ ಪಿಯು ಫಲಿತಾಂಶ ಪ್ರಕಟ..?

ಕೆಸರಟ್ಟಿಯ ಸೋಮಲಿಂಗ ಮಹಾರಾಜರು ಮಾತನಾಡಿ, ಬಂಜಾರಾ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ, ಪರಿಶಿಷ್ಟಜಾತಿಗೆ ಸೇರಿದ ಸಮಾಜವಾಗಿದೆ. ಈ ಸಮಾಜದ ಜನರ ಏಳಿಗೆ, ಸಂಘಟನೆಗಾಗಿ ಸಮಾಜದ ಮುಖಂಡರು ಕೆಲಸ ಮಾಡುತ್ತಿದ್ದು, ಜನರನ್ನು ದಾರಿ ತಪ್ಪಿಸುವ ಕೆಲಸ ನಡೆದಿದೆ. ಬಂಜಾರಾ ಕ್ರಿಸ್‌ಮಸ್‌ ನೆಪದಲ್ಲಿ ಬಂಜಾರ ಜನಾಂಗವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರೇರೇಪಿಸಲಾಗುತ್ತದೆ. ಇದು ಸರಿಯಲ್ಲ ಎಂದಿದ್ದಾರೆ.

ಬಂಜಾರ ಚಚ್‌ರ್‍ ಆಫ್‌ ಗಾಡ್‌ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ಅಕ್ರಮವಾಗಿ ಬಂಜಾರ ಜನಾಂಗದಿಂದ ಹಣ ವಸೂಲು ಮಾಡಲಾಗುತ್ತಿದೆ. ಈ ಹಣ ಸಂಗ್ರಹದ ಜತೆ​ಯಲ್ಲಿ ಬಂಜಾರ ಜನಾಂಗವನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಅತಿವೃಷ್ಟಿಯಿಂದ ಹಿಂಗಾರು ಕೃಷಿಗೆ ಭಾರೀ ಹೊಡೆತ

ವಿಜಯಪುರ ನಗರ ಸಮಾಜ ಪ್ರಮುಖ ಬಾಬು ರಾಜೇಂದ್ರ ಪ್ರಸಾದ ಮಾತನಾಡಿ, ಬಂಜಾರಾ ಸಮುದಾಯದವರು ಮುಗ್ಧರು, ಅಶಿಕ್ಷಿತರು, ಆರ್ಥಿಕ ಹಿಂದುಳಿದವರು, ಪರಿಶಿಷ್ಟಜಾತಿಯವರು ಎಂದು ತಿಳಿದು ಉದ್ದೇಶ ಪೂರ್ವಕವಾಗಿ ಆಮಿಷಯೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂದೂ ಆರೋ​ಪಿ​ಸಿ​ದ್ದಾರೆ.

ಇದರಿಂದ ಬಂಜಾರಾ ಸಮುದಾಯದ ಅಭಿವೃದ್ಧಿ, ಏ​ಳಿ​ಗೆ​ಯಾ​ಗದೆ ಸಮಾಜ ಮುಖ್ಯವಾಹಿನಿಗೆ ಬರುವುದು ಕಷ್ಟಸಾಧ್ಯ. ಆದ್ದರಿಂದ ಮತಾಂತರ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ವಿಶ್ವ ಹಿಂದು ಪರಿಷತ್‌ನ ಸುನೀಲ ಭೈರವಾಡಗಿ ಮಾತನಾಡಿ, ವಿಜಯಪುರ ಜಿಲ್ಲೆಯಾದ್ಯಂತ ಕಾನೂನು ಬಾಹಿರವಾಗಿ ಮತಾಂತರಗೊಳಿಸುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಗೋಪಾಲ ಮಹಾರಾಜರು, ಅಶೋಕ ರಾಠೋಡ, ಪ್ರೇಮ ಚವ್ಹಾಣ, ಡಿ.ಎಲ್‌. ಚವ್ಹಾಣ, ಬಿ.ಬಿ. ರಾಠೋಡ, ಸುರೇಶ ಚವ್ಹಾಣ, ಸಂತೋಷ ನಾಯಕ, ರಾಕೇಶ ರಜಪೂತ, ಅರ್ಜುನ ನಾಯಕ ಅನೇ​ಕ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.

click me!