Vijayapura: ವೃದ್ಧನನ್ನು ಬಲಿ ಪಡೆದ ಮ್ಯಾಂಡೌಸ್‌ ಚಂಡಮಾರುತದ ಚಳಿ

By Sathish Kumar KHFirst Published Dec 10, 2022, 6:39 PM IST
Highlights

ಮ್ಯಾಂಡೌಸ್‌ ಚಂಡಮಾರುತದ ಶೀತ ಗಾಳಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಬೀಸುತ್ತಿದೆ. ಇದರ ಪರಿಣಾಮವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಇಂದು ಬೆಳಗ್ಗೆ ಚಳಿಯ ತೀವ್ರತೆಗೆ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. 

ವಿಜಯಪುರ (ಡಿ.10): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಸಂಭವಿಸಿರುವ ಮ್ಯಾಂಡೌಸ್‌ ಚಂಡಮಾರುತದ ಶೀತ ಗಾಳಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಬೀಸುತ್ತಿದೆ. ಇದರ ಪರಿಣಾಮವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಇಂದು ಬೆಳಗ್ಗೆ ಚಳಿಯ ತೀವ್ರತೆಗೆ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. 

ಮುದ್ದೇಬಿಹಾಳ ಪಟ್ಟಣದ  ಬಸವೇಶ್ವರ ವೃತ್ತದ ಬಳಿಯ ನವರತ್ನ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮುಂಭಾಗದಲ್ಲಿ ನೇತಾಜಿ ನಗರದ ನಿವಾಸಿ ಭೀಮಪ್ಪ ಹಾದಿಮನಿ(75) ಸಾವನ್ನಪ್ಪಿದ ವ್ಯಕ್ತಿ. ತೀವ್ರ ಚಳಿಯಿಂದ ಕೈಯಲ್ಲಾ ಮುಷ್ಟಿ ಹಿಡಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ತೀವ್ರ ಕೊರೆಯುವ ಚಳಿಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೆಳಗ್ಗೆ ನಮಾಜ್‌ ಮಾದರಿಯಲ್ಲಿ ಭೀಮಪ್ಪ ಮಲಗಿದ್ದರು. ಇನ್ನು ಬೆಳಗ್ಗೆ ಸಂಚಾರ ಮಾಡುವ ಜನರು ಕುಡಿತಕ್ಕಾಗಿ ಬೆಳಗ್ಗೆಯೇ ಬಾರ್‌ ಮುಂದೆ ಬಂದು ಮಲಗಿದ್ದಾನೆ ಎಂಉ ಭಾವಿಸಿದ್ದರು. ಆದರೆ, ಬಹಳ ಸಮಯವಾದರೂ ಒಂದೇ ಭಂಗಿಯಲ್ಲಿ ಮಲಗಿದ್ದನ್ನು ಕಂಡು ಸ್ಥಳೀಯರು ಮಾತನಾಡಿಸಲು ಹೋಗಾದ ಕೈ ಮುಷ್ಠಿ ಹಿಡಿದು ಪ್ರಾಣ ಬಿಟ್ಟಿರುವ ಅನುಮಾನ ಬಂದಿದೆ. 

ಕರ್ನಾಟಕಕ್ಕೂ ತಟ್ಟಿದ ಮ್ಯಾಂಡೌಸ್ ಎಫೆಕ್ಟ್: ಮೈಕೊರೆಯುವ ಚಳಿ ಮಧ್ಯೆ ಭಾರೀ ಮಳೆ..!

ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲಿಸರು ವೃದ್ಧನನ್ನು ಪರಿಶೀಲನೆ ಮಾಡಿದ್ದಾರೆ. ಎರಡೂ ಕೈಗಳು ಬಿಗಿಯಾಗಿ ಮುಷ್ಠಿ ಹಿಡಿದು ಕಾಲುಗಳನ್ನು ಮುದುಡಿಕೊಮಡು ಮಲಗಿ ಸಾವನ್ನಪ್ಪಿದ್ದರಿಂದ ತೀವ್ರ ಚಳಿಯಿಂದಾಗಿ ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಂತರ ಕುಟುಂಬಸ್ಥರಿಗೆ ಮಾಹಿತಿ ನೀಡಿ ವೃದ್ಧನ ಶವವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ನಂತರ ಅಂತ್ಯ ಕ್ರಿಯೆ ನೆರವೇರಿಸಲು ದೇಹವನ್ನು ಕೊಟ್ಟಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

click me!