ಚುನಾವಣೆ ಹೊಸ್ತಿಲಲ್ಲೇ ಗುಮ್ಮಟನಗರಿಯಲ್ಲಿ Country made pistol ಹಾವಳಿ..!

By Ravi Janekal  |  First Published Oct 9, 2022, 2:53 PM IST
  • ಚುನಾವಣೆ ಹೊಸ್ತಿಲಲ್ಲಿ ಗುಮ್ಮಟನಗರಿಯಲ್ಲಿ ಗನ್ ಹಾವಳಿ..!
  •  ಕಂಟ್ರಿಮೆಡ್ ಪಿಸ್ತೂಲ್ ದಂಧೆ ಭೇದಿಸಲು ಡಿವೈಎಸ್ಪಿ ಸಿದ್ದೇಶ್ವರ ಎಂಟ್ರಿ..!
  • ಒಂದೇ ವಾರದಲ್ಲಿ ಮೂರು ಗ್ಯಾಂಗ್, 5 ಕಂಟ್ರಿ ಪಿಸ್ತೂಲ್ ವಶಕ್ಕೆ..!

- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಅ.9) : ಭೀಮಾತೀರಕ್ಕೂ ಕಂಟ್ರಿಮೆಡ್ ಪಿಸ್ತೂಲ್ ದಂಧೆಗು ಅದೇನೋ‌ ಒಂದು ರೀತಿಯ ಸಂಬಂಧ. ಇಲ್ಲಿಯವರೆಗೆ ಕಲಬುರ್ಗಿ, ವಿಜಯಪುರ ಜಿಲ್ಲೆಗಳ ಭೀಮಾತೀರದಲ್ಲಿ ಹಬ್ಬಿಕೊಂಡಿದ್ದ ಕಂಟ್ರಿ ಪಿಸ್ತೂಲ್ ದಂಧೆ ಈಗ ವಿಜಯಪುರ ನಗರ, ಗ್ರಾಮೀಣ ಪ್ರದೇಶಗಳಿಗೆ ವಾಲಿಕೊಂಡಂತೆ ಕಾಣ್ತಿದೆ. ಒಂದೇ ವಾರದಲ್ಲಿ ನಡೆದ ಎರಡು ಕಾರ್ಯಾಚರಣೆಯಲ್ಲಿ ಮೂರು ಗ್ಯಾಂಗ್, 5 ಕಂಟ್ರಿಮೆಡ್ ಪಿಸ್ತೂಲ್ ರಿಕವರಿಯಾಗಿವೆ.!

Tap to resize

Latest Videos

ವಿಜಯಪುರ ಉಪ ವಿಭಾಗದ ಪೊಲೀಸರ ಕಾರ್ಯಾಚರಣೆ:

ಜಿಲ್ಲೆಯಲ್ಲಿ ಅನಧಿಕೃತ ರಿವಾಲ್ವರ್(Revolver), ಗುಂಡುಗಳ(Bullets) ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಂಟ್ರಿ ಪಿಸ್ತೂಲ್(countrymade pistol) ಗಳ ಮಾರಾಟ ಹಾಗೂ ಅವುಗಳಿಂದ ನಡೆದ ರಕ್ತಸಿಕ್ತ ಅಧ್ಯಯನಕ್ಕೆ ನಾಂದಿ ಹಾಡಿದ್ದ ಭೀಮಾತೀರ ಸದ್ಯ ಶಾಂತವಾಗಿದ್ದರೂ ಸಹ ಕಂಟ್ರಿ ಪಿಸ್ತೂಲ್ ಮಾರಾಟ ದಂಧೆ ಈಗ ವಿಜಯಪುರ(Vijayapur) ಗ್ರಾಮೀಣ ಭಾಗವಾದ ಕುಮಟಗಿ ತಾಂಡಾಕ್ಕೂ ಹರಡಿದೆ. ಈ ಬಗ್ಗೆ ರೆಬಲ್ ಆಗಿರುವ ಖಾಕಿಪಡೆ ಒಂದೇ ವಾರದಲ್ಲಿ ಎರಡು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಮೂರು ಗ್ಯಾಂಗ್ ಹಾಗೂ 5 ಕಂಟ್ರಿಮೆಡ್ ಪಿಸ್ತೂಲ್ ವಶಕ್ಕೆ ಪಡೆದುಕೊಂಡಿದ್ದಾರೆ..

ಗನ್ ದಂಧೆ ಭೇದಿಸಲು ಡಿವೈಎಸ್ಪಿ ಸಿದ್ದೇಶ್ವರ ಎಂಟ್ರಿ:

ಈ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಯೋದರ ಹಿಂದೆ, ಇಷ್ಟೊಂದು ಗನ್ ಆಂಡ್ ಗ್ಯಾಂಗ್ ತಗಲಾಕಿಕೊಂಡಿರೋದರ ಹಿಂದೆ ವಿಜಯಪುರ ಉಪ ವಿಭಾಗಕ್ಕೆ ಬಂದಿರುವ ಡಿವೈಎಸ್ಪಿ ಸಿದ್ದೇಶ್ವರ್(Dysp Siddeshwar) ಕಾರಣ ಎನ್ನಲಾಗ್ತಿದೆ. ಕಂಟ್ರಿ ಪಿಸ್ತೂಲ್ ದಂಧೆಕೋರರ ಪಕ್ಕಾ ಮಾಹಿತಿ, ನಿಖರ ಜಾಡು ಜೊತೆಗೆ ಹಳೆಯ ಎಕ್ಸಪಿರಿಯನ್ಸ್‌ ಡಿವೈಎಸ್ಪಿ ಸಿದ್ದೇಶ್ವರ ಬಳಸಿಕೊಳ್ತಿದ್ದಾರೆ. ಈ ಹಿಂದೆ ಅಪರಾಧ ಪತ್ತೆ ದಳದಲ್ಲಿದ್ದ ಇದೆ ಸೂಪರ್ ಕಾಫ್, ಕಂಟ್ರಿಮೆಡ್ ಪಿಸ್ತೂಲ್ ದಂಧೆಯನ್ನ ಬಯಲಿಗೆಳೆದು ಗನ್ ಮಾರಾಟಗಾರರು, ಸಾಗಾಟಗಾರರು, ಏಜೆಂಟರ ಹೆಡೆಮುರಿ ಕಟ್ಟಿದ್ದರು. ಈಗ ಮತ್ತೆ ಸಿದ್ದೇಶ್ವರ ಎಂಟ್ರಿ ಕೊಟ್ಟಿದ್ದು ಗನ್ ದಂಧೆಕೋರರಲ್ಲಿ ನಡುಕ ಹುಟ್ಟಿದೆ‌. ಹಾಗೆ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ಪಾಲಭಾವಿ, ಪಿಎಸ್‌ಐ ಉಪ್ಪಾರ್, ಗಾಂಧಿ ಚೌಕ್ ಸಿಪಿಐ ಸಿದ್ದೇಶ್ ಸೇರಿ ಹಲವರ ಪರಿಶ್ರಮವು ಇದ್ರಲ್ಲಿದೆ.

ಕಂಟ್ರಿಮೇಡ್ ಪಿಸ್ತೂಲ್ ತಂದ ಯುವಕರ ಬಂಧನ..!

ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಗುಂಡು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಈಗ ಗ್ರಾಮೀಣ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇವರು ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಭಾರತದ ಗಡಿಭಾಗಗಳಿಂದ ಕಂಟ್ರಿ ಪಿಸ್ತೂಲ್ ಹಾಗೂ ಗುಂಡುಗಳನ್ನು ತಂದು ವಿಜಯಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಬಯಲುಗೊಂಡಿದೆ. 

ತಾಂಡಾ ಹುಡುಗರ ಬಳಿ ಕಂಟ್ರಿಮೆಡ್ ಪಿಸ್ತೂಲ್..!

ಸದ್ಯ ಪೊಲೀಸ್ ಬಂಧನದ ಲ್ಲಿರುವ ನರಸಿಂಗ್ ಪವಾರ, ಸತೀಶ ರಾಠೋಡ, ರಾಜು ರಾಠೋಡ ಹಾಗೂ ಪ್ರಕಾಶ ರಾಠೋಡ ಈ ನಾಲ್ವರು ಜಿಲ್ಲೆಯ ಕನ್ನೂರ, ಅರಕೇರಿ, ಕುಮಟಗಿ ತಾಂಡಾದವರು ಆಗಿರುವುದು ಆಘಾತ ತಂದಿದೆ. ಹೇಗೂ  ಈ ಆರೋಪಿಗಳಿಗೆ ಬೇರೆ ಅಪರಾಧಿಗಳ ಸಂಪರ್ಕ ದೊರೆತು. ಅವರ ಮೂಲಕ ಇವರು ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್, ಗುಂಡು  ತಂದು ಮಾರಾಟಕ್ಕೆ ಯತ್ನಿಸುತ್ತಿರುವದು ತನಿಖೆ ವೇಳೆ ಮಾಹಿತಿ ದೊರೆತಿದೆ. ಆದರೆ ಆರೋಪಿಗಳು ಮಾತ್ರ ಈ ಪಿಸ್ತೂಲ್ ಗಳು ಸ್ವಂತ ಬಳಕೆಗೆ ತಂದಿರುವುದಾಗಿ ಪೊಲೀಸರ ಎದುರು ಹೇಳಿ ಕೊಂಡಿದ್ದಾರೆ.  

50 ಸಾವಿರಕ್ಕೆ ಕಂಟ್ರಿ ಬಂದೂಕು ಸೇಲ್!

ಸದ್ಯ ಬಂಧಿತ ಆರೋಪಿಗಳಿಂದ 50 ಸಾವಿರ ಮೌಲ್ಯದ  ಒಂದು ಕಂಟ್ರಿ ಪಿಸ್ತೂಲ್ ಹಾಗೂ 500 ರೂ. ಮೌಲ್ಯದ ಒಂದು ಜೀವಂತ ಗುಂಡು ವಶಪಡಿಸಿಕೊಂಡಿದ್ದು, ಇದರ ಜತೆ 3.5 ಲಕ್ಷ ರೂ. ಮೌಲ್ಯದ ಎರಡು ಕಾರು ವಶ ಪಡಿಸಿಕೊಂಡಿದ್ದಾರೆ. ಸದ್ಯ ಈ ಅನಧಿಕೃತ ಕಂಟ್ರಿ ಪಿಸ್ತೂಲ್ ಜಾಲ ಭೇದಿಸಲು ತಂಡ ರಚನೆ ಮಾಡಿದ್ದು ತನಿಖೆ ಮುಂದುವರೆದಿದೆ. 

ಇನ್ನಷ್ಟು ಸುಳಿವು, ಮತ್ತಷ್ಟು ಕಾರ್ಯಾಚರಣೆ ನಡೆಯುವ ಸಾಧ್ಯತೆ..!

ಇನ್ನು ಗನ್ ದಂಧೆಯ ಬಗ್ಗೆ ಸಾಕಷ್ಟು ಮಾಹಿತಿಗಳನ್ನ ವಿಜಯಪುರ ಉಪ ವಿಭಾಗದ ಪೊಲೀಸರು ಸಂಗ್ರಹಿಸಿಕೊಂಡಿದ್ದಾರೆ. ಸದ್ಯ ನಡೆದಿರುವ ಕಾರ್ಯಾಚರಣೆಯಲ್ಲೂ ಸಾಕಷ್ಟು ಮಾಹಿತಿ ಲಭ್ಯವಾಗಿವೆ ಎನ್ನಲಾಗಿದೆ. ಜೊತೆಗೆ ಮಧ್ಯಪ್ರದೇಶಕ್ಕೆ ಹೋಗಿ ಗನ್ ತಂದಿದ್ದೇವೆ ಎಂದಿರುವ ಖದೀಮರು ಮತ್ತಷ್ಟು ಮಾಹಿತಿಗಳನ್ನ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಇದೆಲ್ಲ ಮಾಹಿತಿ ಇಟ್ಟುಕೊಂಡು ಮತ್ತಷ್ಟು ಕಾರ್ಯಾಚರಣೆ ನಡೆಸುವ ಉತ್ಸಾಹದಲ್ಲಿ ವಿಜಯಪುರದ ಗ್ರಾಮೀಣ, ಗಾಂಧಿ ಚೌಕ, ಗೋಳಗುಮ್ಮಟ, ಸಿಇಎನ್ ಪೊಲೀಸರಿದ್ದಾರೆ‌. ಉಪ ವಿಭಾಗದ ಡಿವೈಎಸ್ಪಿ ಸಿದ್ದೇಶ್ವರ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ.

ಆದರ್ಶನಗರ ಪೊಲೀಸರಿಂದ ಬೈಕ್ ಕಳ್ಳರ ಬಂಧನ..!

ಇದೇ ವೇಳೆ ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಸಹ ಗೋಲಗುಮ್ಮಟ ಪೊಲೀಸರು ಭೇದಿಸಿದ್ದಾರೆ.  ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಓರ್ವ ಅಪ್ರಾಪ್ತ ಹಾಗೂ ಓರ್ವ ಅವಿನಾಶ ರಜಪೂತ ಇದ್ದಾರೆ. ಇವರಿಂದ 4.5ಲಕ್ಷ ರೂ. ಮೌಲ್ಯದ 6 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. 
ಆರೋಪಿಗಳು ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಾಗಿ ಇಂಥ ಪ್ರಕರಣಗಳಲ್ಲಿ ಅಪ್ರಾಪ್ತರು ತೊಡಗಿಕೊಂಡಿದ್ದು, ಕಾಲೇಜ್ ಡ್ರಾಪ್ ಔಟ್ ಆದವರು ಈ ದಂಧೆ ನಡೆಸುತ್ತಿರುವದು ತನಿಖೆಯಿಂದ ಖಚಿತಗೊಂಡಿದೆ.

click me!