‘ಬಿಜೆಪಿ ಕೋಮುವಾದಿ ಅಷ್ಟೆ ಅಲ್ಲ, ಅದು ಸರ್ವಾಧಿಕಾರಿ ಪಕ್ಷ’

By Web DeskFirst Published Nov 12, 2019, 12:54 PM IST
Highlights

ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಹೊಂದಾಣಿಕೆ ವಿಚಾರ|ಇದರ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದ ದಿನೇಶ ಗುಂಡೂರಾವ್|ಕೆಲವು ಕ್ಷೇತ್ರಗಳಲ್ಲಿ ಸುಪ್ರೀಂಕೋರ್ಟ್ ನಿರ್ಣಯ ನೋಡಿ ತೀರ್ಮಾನ ಮಾಡಲಾಗುವುದು| ನಾಳೆ ತೀರ್ಪು ಬಂದ ಬಳಿಕ ನಾಳೆ ರಾತ್ರಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಡಲಾಗುವುದು|

ವಿಜಯಪುರ[ನ.12]: ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಏನೂ ಹೇಳೋದಿಲ್ಲ, ಅದು ಎಐಸಿಸಿ ಮಟ್ಟದಲ್ಲಿ ಚರ್ಚೆ ಆಗಲಿದೆ. ಇದರ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರು ಹೇಳಿದ್ದಾರೆ. 

ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ವಾಧಿಕಾರಿ ಧೋರಣೆ ಇರುವ ಪಕ್ಷವಾಗಿದೆ. ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ ಬಿಜೆಪಿ ಈಗ ಮೈತ್ರಿ ಮುರಿದುಕೊಂಡಿದೆ. ಬಿಜೆಪಿ ಕೋಮುವಾದಿ ಅಷ್ಟೆ ಅಲ್ಲ, ಅದು ಸರ್ವಾಧಿಕಾರಿ ಪಕ್ಷವಾಗಿದೆ ಎಂದು ಬಿಜೆಪಿ ವಿರುದ್ಧ ತೀವ್ರವಾಗಿ ಖಂಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಳಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಕ್ಷೇತ್ರಗಳಲ್ಲಿ ಸುಪ್ರೀಂಕೋರ್ಟ್ ನಿರ್ಣಯ ನೋಡಿ ತೀರ್ಮಾನ ಮಾಡಲಾಗುವುದು. ನಾಳೆ ತೀರ್ಪು ಬಂದ ಬಳಿಕ ನಾಳೆ ರಾತ್ರಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಡಲಾಗುವುದು.

ಸೋಮವಾರ ನಡೆದ ಸಭೆಯಲ್ಲಿ ಯಾವ ಮಾತಿನ ಚಕಮಕಿ ಆಗಿಯೇ ಇಲ್ಲ. ಊಹಾಪೂಹ,‌ ಕಪೋಕಲ್ಪಿತ ವಿಚಾರಗಳನ್ನು ಹಾಕಲಾಗುತ್ತಿದೆ. ಮೀಡಿಯಾಗಳು ಹೆಡಲೈನ್ ಗೋಸ್ಕರ ಹಾಕಿದ್ರೆ, ನಾವು ಉತ್ತರ ಕೊಡೋದು ಕಷ್ಟ ಆಗುತ್ತದೆ ಎಂದು ಹೇಳಿದ್ದಾರೆ. 

ಬಿಜೆಪಿಗೆ ಇನ್ನಷ್ಟು ಕಾಂಗ್ರೆಸ್ ಶಾಸಕರು ಬರೋದಾಗಿ ಸಚಿವ ಸಿಟಿ ರವಿ ಅವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ,ಸಿಟಿ ರವಿಗೆ ಹೇಳೋದಿಷ್ಟೆ. ನೀತಿ,‌ ನಿಯಮ, ನೈತಿಕತೆ ನಿಮ್ಮ ಪಕ್ಷಕ್ಕೆ ಇಲ್ಲ. ಬರೀ ಪಕ್ಷಾಂತರ ಮಾಡಿಸೋದೆ ನಿಮ್ಮ ಕೆಲಸ‌ ಆಗಿದೆ. ನಿಮ್ಮ ಉಡಾಫೆ ಮಾತಿಗೆ ಜನ ನಿಮ್ಮ‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹದಿನೈದು ಶಾಸಕರನ್ನು‌ ಮೂರು ದಿನದಲ್ಲಿ‌ ಮಂತ್ರಿ‌ ಮಾಡ್ತಿವಿ ಅಂತ ನಂಬಿಸಿದ್ರಿ, ಈಗ ಅವರ ಸ್ಥಿತಿ ಏನಾಗಿದೆ, ಹೀಗೆ ಮಾಡೋದೆ ಬಿಜೆಪಿ ಕೆಲಸವಾಗಿದೆ. ಕೇಂದ್ರದಿಂದ ಹಣ ತರೋ ತಾಕತ್ತಿಲ್ಲ, ಬರಿ ಮಾತಾಡ್ತಾರೆ. ಇವತ್ತಿನ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಕಾರಣವಾಗಿದೆ ಎಂದು ಹೇಳಿದ್ದಾರೆ. 

click me!