ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯ್ತು. ಇಲ್ಲಿನ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್.
ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯ್ತು. ಇಲ್ಲಿನ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ಭರತ್ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ಈ ಕಾರ್ಣೀಕ ವಾಣಿಯಿಂದ ಆ ವರ್ಷದ ಮಳೆ, ಬೆಳೆ ಹಾಗೂ ರಾಜಕೀಯವನ್ನ ನಿರ್ಧರಿಸ್ತಾರೆ. ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣೀಕ ಬಹಳ ಇಂಟರೆಸ್ಟಿಂಗ್ ಆಗಿದೆ.
ನೂರಾರು ವರ್ಷಗಳ ಇತಿಹಾಸವನ್ನ ಮೈಲಾರಲಿಂಗೇಶ್ವರ (Mylaralingeshwar) ಹೊಂದಿದೆ. ಪ್ರತಿವರ್ಷ ಭರತ ಹುಣ್ಣುಮೆಯಾದ ಮೂರು ದಿನಕ್ಕೆ ವರ್ಷದ ದೈವವಾಣಿಯನ್ನ ನುಡಿಯಲಾಗುತ್ತದೆ. ಮೈಲಾರದ (Mylar)ಬಳಿಯ ಡೆಂಕನಮರಡಿ ಎಂಬಲ್ಲಿ ಲಕ್ಷಾಂತರ ಭಕ್ತರ ಮಧ್ಯ ಆಗಮಿಸಿದ ಗೊರವಯ್ಯ ಸ್ವಾಮಿ, 14 ಅಡಿ ಎತ್ತರದ ಬಿಲ್ಲನ್ನೇರಿ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾನೆ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ರಾಮಪ್ಪ ಗೊರವಯ್ಯ ಸ್ವಾಮಿ ವರ್ಷದ ಭವಿಷ್ಯವಾಣಿ (Horoscop) ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ.
undefined
ಗೊರವಯ್ಯ ಭವಿಷ್ಯವಾಣಿ ಪ್ರಕಾರ ನಾನು 5 ವರ್ಷ ಸಿಎಂ ಆಗೋದು ಖಚಿತ; ಎಚ್‌ಡಿಕೆ ವಿಶ್ವಾಸ
ಪ್ರಸಕ್ತ ವರ್ಷ ಬಿಲ್ಲನ್ನೇರಿದ ಗೊರವಯ್ಯ, 'ಅಂಬಲಿ ಹಳಸಿತಲೇ ಕಂಬಳಿ ಬೀಸಿತಲೇ ಪರಾಕ್' ಅನ್ನೋ ದೈವವಾಣಿ ನುಡಿದ್ದಾನೆ. ಈ ಗೊರವಯ್ಯ ನುಡಿಯನ್ನು ಮೈಲಾರಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಶ್ರೀ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದಾರೆ. ಅಂಬಲಿ ಹಳಸಿತು ಎಂದರೆ ರೈತರಿಗೆ ಹಾಗೂ ದೇಶಕ್ಕೆ ಅತಿವೃಷ್ಟಿ ಆಗದ ಹಾಗೇ ಮಳೆ ಬರುತ್ತದೆ. ಒಳ್ಳೆಯ ಬೆಳೆ ಈ ಬಾರಿ ಬರಲಿದೆ. ಮುಂದಿನ ದಿನಗಳಲ್ಲಿ ಪ್ರಮಾಣಿಕ, ನಿಷ್ಠಾವಂತ ರಾಜಕಾರಣಿ (Politician) ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
ವರ್ಷದ ಭವಿಷ್ಯವಾಣಿ ಅಂತಲೆ ನಂಬಿಕೊಂಡು ಬಂದಿರೋ ಕಾರ್ಣಿಕವಾಣಿ ಕೇಳಲು ಕೇವಲ ಬೇರೆ ಬೇರೆ ರಾಜ್ಯಗಳ ಸಾವಿರಾರು ಜನರು ಇಲ್ಲಿಗೆ ಆಗಮಿಸ್ತಾರೆ. ಸಂಜೆಯಾಗುತ್ತಿದ್ದಂತೆ ಕಾರ್ಣಿಕ ನುಡಿಯುವ ಡೆಂಕನಮರಡಿ ಸ್ಥಳ ಜನರಿಂದ ತುಂಬಿ ಬಿಡುತ್ತದೆ. ಸುಮಾರು ವರ್ಷಗಳಿಂದ ರೈತರು ಮೈಲಾರಲಿಂಗೇಶ್ವರ ದೇವರ ಕಾರ್ಣಿಕವನ್ನು ಕೇಳಿ ಮಳೆ ಬೆಳೆ ನಿರ್ಧರಿಸುತ್ತಾರೆ.
ರಾಜಕೀಯವಾಗಿಯೂ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಕಾರ್ಣಿಕ ವಾಣಿ ಆಲಿಸಿದ ಕಿಕ್ಕಿರಿದು ಸೇರಿದ್ದ ರೈತಾಪಿ ವರ್ಗದ ಜನರ ಮೊಗದಲ್ಲಿ ಸಂತಸ ಮೂಡಿದೆ.
ಗಡ್ಡಧಾರಿ ಸಿಎಂ ಸುಳ್ಳು, ಅದು ರಾಜಕೀಯ ಪ್ರೇರಿತ ಹೇಳಿಕೆ: ಗೊರವಯ್ಯ
ಸಾಕ್ಷಾತ್ ಮೈಲಾರಲಿಂಗೇಶ್ವರ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ಒಟ್ನಲ್ಲಿ ಈ ವರ್ಷದ ಕಾರ್ಣಿಕವಾಣಿ ಆಲಿಸಿದ ಜನರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವ ಪ್ರಾಮಾಣಿಕ, ನಿಷ್ಠಾವಂತ ರಾಜಕಾರಣಿ ಯಾರು ಅಂತಾ ದೈವವಾಣಿಯನ್ನು ಅವರವರೇ ವಿಶ್ಲೇಷಣೆ ಮಾಡುತ್ತಾ ತಮ್ಮ ತಮ್ಮ ಊರುಗಳತ್ತ ಹೆಜ್ಜೆ ಹಾಕಿದ್ದಾರೆ. ರಾಜಕೀಯವಾಗಿ ಈ ಗೊರವಯ್ಯ ನುಡಿಯನ್ನು ವಿಶ್ಲೇಷಿಸಲಾಗಿದ್ದು, ಪರೋಕ್ಷವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ದೈವವಾಣಿ ವಿಶ್ಲೇಷಣೆ ಮಾಡಲಾಗಿದೆ.