International Yoga Day ಹಂಪಿ ಸ್ಮಾರಕಗಳ ಮುಂದೆ ನಡೆಸಲು ಚಿಂತನೆ

By Suvarna News  |  First Published Apr 27, 2022, 2:07 PM IST
  • ವಿಶ್ವವಿಖ್ಯಾತ ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
  • ವಚನಾನಂದ ಸ್ವಾಮೀಜಿ ಸಚಿವ ಆನಂದ ಸಿಂಗ್ ರಿಂದ ಸ್ಥಳ ಪರಿಶೀಲನೆ
  • ಹಂಪಿಯ ಎಲ್ಲ ಸ್ಮಾರಕದ ಮುಂದೆ ಯೋಗಾಭ್ಯಾಸ ಮಾಡೋ ಚಿಂತನೆ

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯನಗರ (ಎ.27): ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ಈ ಬಾರಿಯ ರಾಜ್ಯ ಮಟ್ಟದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ( International Yoga Day )
ಮಾಡಲು ಭರ್ಜರಿ ಪ್ಲಾನ್ ನಡೆದಿದೆ. ಕಲ್ಲಿನ ತೇರು, ಸಾಲು ಮಂಟಪ, ಆನೆ ಸಾಲು ಒಂಟೆ ಸಾಲು, ಮಹಾನವಮಿ ದಿಬ್ಬ ಸೇರಿದಂತೆ ಬಹುತೇಕ ಹಂಪಿಯ ಎಲ್ಲಾ ಸ್ಮಾರಕದ ಮುಂದೆ ಏಕಕಾಲಕ್ಕೆ ಯೋಗ ಮಾಡೋ ಮೂಲಕ ದಾಖಲೆ ಬರೆಯಲು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸ ಕೇಂದ್ರದ ಸಂಸ್ಥಾಪಕ ವಚನಾನಂದ ಸ್ವಾಮೀಜಿ (vachanananda swamiji) ಪ್ಲಾನ್ ಮಾಡ್ತಿದ್ದಾರೆ. ಇದಕ್ಕೆ ಸಚಿವ ಆನಂದ ಸಿಂಗ್ ಕೈ ಜೊಡಿಸಿರೋ ಹಿನ್ನೆಲೆ ಅದ್ದೂರಿ ಕಾರ್ಯಕ್ರಮಕ್ಕೆ ಸದ್ದಿಲ್ಲದೇ ವೇದಿಕೆ ಸಿದ್ಧಗೊಳ್ಳುತ್ತಿದೆ. 

Tap to resize

Latest Videos

undefined

ಸಚಿವ ಆನಂದ ಸಿಂಗ್ ಜೊತೆಗೆ ಸ್ಥಳ ವೀಕ್ಷಣೆ ಮಾಡಿದ ಸ್ವಾಮೀಜಿ
ಯೋಗ ದಿನಾಚರಣೆ ಮಾಡೋ ಕುರಿತು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ( Minister of Tourism, Ecology and Environment Anand Singh) ಜೊತೆಗೆ ಸುದೀರ್ಘ ಚರ್ಚೆ ನಡೆಸಿರೋ ವಚನನಾಂದ ಸ್ವಾಮೀಜಿ ಸಚಿವರ ಜೊತೆಗೆ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ರು. ಈಗಾಗಲೇ ಕೊಪ್ಪಳದ ಹನುಮನ ಜನ್ಮಸ್ಥಳ ಅಂಜನಾದ್ರಿಯಲ್ಲಿ, ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಯೋಗ ಉತ್ಸವಗಳನ್ನ ಯಶಸ್ವಿಯಾಗಿ ಮಾಡಿರೋ ತಂಡ  ಮುಂಬರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯವಂತೆ ಹಂಪಿಯಲ್ಲಿ ಆಯೋಜಿಸುತ್ತಿರೋದು ವಿಶೇಷವಾಗಿದೆ. 

KPSC RECRUITMENT SCAM ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹುದ್ದೆ ಕೋಟಿ ಕೋಟಿಗೆ ಸೇಲ್!  

 

ವಿಶ್ವವಿಖ್ಯಾತ ಹಂಪಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸುವ ಚಿಂತನೆ ಹಿನ್ನೆಲೆಯಲ್ಲಿ ಇಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಅವರೊಂದಿಗೆ ಹಂಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. pic.twitter.com/NCoEKinnYo

— Anand Singh (@AnandSinghBS)

ಎಲ್ಲೇಲ್ಲಿ ಮಾಡೋದು?: ಯೋಗಾ ದಿನಾಚರಣೆ ಹಿನ್ನೆಲೆ ಹಂಪಿಯ ಐಕಾನ್ ಆಗಿರೋ ವಿಠ್ಠಲ ದೇವಾಲಯದ (vittala temple hampi) ಆವರಣದಲ್ಲಿರುವ ಕಲ್ಲಿನ ರಥ (Stone Chariot), ಲೋಟಸ್‌ ಮಹಲ್‌, ವಿರುಪಾಕ್ಷೇಶ್ವರ ದೇವಾಲಯ (Sree Virupaksha Templ), ಆನೆ ಮತ್ತು ಕುದುರೆ ಲಾಯಗಳು, ಸಾಸುವೇ ಕಾಳು ಗಣೇಶ, ಬಡವಿ ಲಿಂಗ ಸೇರಿದಂತೆ ಬಹುತೇಕ ಎಲ್ಲ ಸ್ಮಾರಕಗಳ ಮುಂದೆ ಯೋಗ ಉತ್ಸವ ಆಯೋಜಿಸುವ ನಿಟ್ಟಿನಲ್ಲಿ ಸಚಿವರೊಂದಿಗೆ ಪರಿಶೀಲನೆ ನಡೆಸಲಾಯಿತು ಎಂದು ಈ ವೇಳೆ ವಚನಾನಂದ ಸ್ವಾಮೀಜಿ ಹೇಳಿದ್ರು. ಇನ್ನೂ ಮುಂದಿನ ದಿನಗಳಲ್ಲಿ ಪ್ರತಿಯೊಂದು ಸ್ಮಾರಕದ ಮುಂದೆಯೂ ಕೌಂಟ್‌ ಡೌನ್‌ ಕಾರ್ಯಕ್ರಮಗಳನ್ನು ಆಯೋಜನೆ ಮಾಡೋ ಮೂಲಕ‌  ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಾತ್ರವಲ್ಲದೇ ಹಂಪಿಯ ಸ್ಮಾರಕವೊಂದರ ಮುಂದೆ ನಿತ್ಯ ಯೋಗಾಭ್ಯಾಸ ಮಾಡೋ ಬಗ್ಗೆ ಚಿಂತನೆ ನಡೆಸಲಾಗ್ತದೆ ಎನ್ನುವುದಾಗಿದೆ.

HPCL Recruitment 2022: ಒಟ್ಟು 186 ವಿವಿಧ ಹುದ್ದೆಗಳಿಗೆ ನೇಮಕಾತಿ

ಇನ್ನೂ ಕಾರ್ಯಕ್ರಮ ಕುರಿತಂತೆ ಸಾಕಷ್ಟು ಉತ್ಸುಕರಾಗಿರೋ  ಸಚಿವ ಆನಂದ್‌ ಸಿಂಗ್‌ ವಿಶ್ವವಿಖ್ಯಾತ ಹಂಪಿಯಲ್ಲಿ ಯೋಗ ಉತ್ಸವಗಳನ್ನು ನಡೆಸುವ ಅತ್ಯಂತ ಖಷಿಯ ವಿಚಾರವಾಗಿದೆ ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಯೋಗ ಪ್ರಚಾರಕರು ಹಾಗೂ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿಗಳ ಜೊತೆಯಲ್ಲಿ ವಿಸ್ತ್ರುತ ಚರ್ಚೆಗಳನ್ನು ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ದಿನಾಂಕವನ್ನು ತಿಳಿಸಲಾಗುವುದು ಎಂದು ಆನಂದ ಸಿಂಗ್ ಹೇಳಿದರು.    

click me!