Dec 30, 2024, 4:00 PM IST
ಸ್ಯಾಂಡಲ್ವುಡ್ನಲ್ಲಿ ಮುಂಗಾರುಮಳೆ ಸುರಿಸಿದ ನಿರ್ಮಾಪಕ ಮತ್ತು ನಿರ್ದೇಶಕರು ಮತ್ತೆ ಒಂದಾಗಿದ್ದಾರೆ. ಈ.ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮನದ ಕಡಲು ಅನ್ನೋ ಸಿನಿಮಾ ಸಿದ್ದವಾಗಿದ್ದು, ಸದ್ಯ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಮುಂಗಾರು ಮಳೆ ಬಿಡುಗಡೆಯಾದ ದಿನವೇ ರಿಲೀಸ್ ಆಗಿರೋ ಆ ಹಾಡು ಮೋಡಿ ಮಾಡ್ತಾ ಇದೆ. ಮುಂಗಾರುಮಳೆ.. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸಿನಿಮಾ. 2006ರ ಡಿಸೆಂಬರ್ 29ರಂದು ರಿಲೀಸ್ ಆದ ಸಿನಿಮಾ ಬಾಕ್ಸ್ಆಫೀಸ್ ನಲ್ಲಿ ಹಣದ ಹೊಳೆಯನ್ನೇ ಹರಿಸಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸತನವನ್ನ ತಂದ ಚಿತ್ರ ಅನ್ನೋ ಹೆಗ್ಗಳಿಕೆ ಭಟ್ಟರ ಮುಂಗಾರುಮಳೆಯದ್ದು.
ಸದ್ಯ ಮುಂಗಾರುಮಳೆ ನಿರ್ಮಾಪಕ ಈ.ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಒಂದಾಗಿ ಮನದ ಕಡಲು ಅನ್ನೋ ಮತ್ತೊಂದು ಹೊಸತನದ ಸಿನಿಮಾದೊಂದಿಗೆ ಬಂದಿದ್ದಾರೆ. ಮುಂಗಾರುಮಳೆ ಬಿಡುಗೆಯಾದ ದಿನವೇ ಮನದ ಕಡಲು ಮೂವಿಯ ಮೊದಲ ಹಾಡನ್ನ ರಿಲೀಸ್ ಮಾಡಿದ್ದಾರೆ. ಹರಿಕೃಷ್ಣ ಮ್ಯೂಸಿಕ್, ಯೋಗರಾಜ್ ಭಟ್ಟರ ಲಿರಿಕ್ಸ್ , ಸಂಜಿತ್ ಹೆಗಡೆ ವಾಯ್ಸ್ನಲ್ಲಿ ಮೂಡಿಬಂದಿರೋ ಈ ಸಾಂಗ್ ಮೋಡಿ ಮಾಡ್ತಾ ಇದೆ. ಯುವಜೋಡಿ ಸುಮುಖ್ & ರಾಶಿಕಾ ಈ ಹಾಡಲ್ಲಿ ಹೆಜ್ಜೆ ಹಾಕಿದ್ದು ಇಬ್ಬರ ಕೆಮೆಸ್ಟ್ರಿ ಸಖತ್ ಆಗಿ ಮೂಡಿಬಂದಿದೆ. ಮನದ ಕಡಲಿನ ಹಾಡಿನ ಮೋಡಿ ನೋಡ್ತಾ ಇದ್ರೆ ಮತ್ತೊಂದು ಮುಂಗಾರುಮಳೆ ಆಗೋ ಎಲ್ಲಾ ಲಕ್ಷಣಗಳೂ ಕಾಣ್ತಾ ಇವೆ.