ಸಾಹಸಸಿಂಹ-ಅಭಿನಯ ಭಾರ್ಗವ ವಿಷ್ಣುವರ್ಧನ್ರ ಪುಣ್ಯ ಭೂಮಿ ಜಾಗವನ್ನ ಧ್ವಂಸಗೊಳಿಸಿರೋದು ಇಡೀ ಸ್ಯಾಂಡಲ್ವುಡ್ನ ಆಕ್ರೋಶದಲ್ಲಿ ಮುಳುಗವಂತೆ ಮಾಡಿದೆ. ಕನ್ನಡದ ಅನೇಕ ತಾರೆಯರು ಇದನ್ನ ಇಲ್ಲಿಗೆ ಬಿಡೋದಿಲ್ಲ, ನಮ್ಮ ಹೋರಾಟ ಮುಂದುವರೆಯುತ್ತೆ ಅಂದಿದ್ದಾರೆ.
ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ, ಸಾಹಸಿಂಹ ವಿಷ್ಣುವರ್ಧನ್ ಪುಣ್ಯಭೂಮಿಯನ್ನ ರಾತ್ರೋರಾತ್ರಿ ಧ್ವಂಸ ಮಾಡಿರೋದು ಎಲ್ಲರ ಆಕ್ರೋಶಕ್ಕೆ ಕಾರಣ ಆಗಿದೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತಿಮ ಸಂಸ್ಕಾರ ನಡೆದಿದ್ದ ಜಾಗದಲ್ಲಿದ್ದ ಸ್ಮಾರಕದಲ್ಲಿ ಪ್ರತಿವರ್ಷ ಅಭಿಮಾನಿಗಳು ಪೂಜೆ ಸಲ್ಲಿಸ್ತಾ ಇದ್ರು. ವಿಷ್ಣುವರ್ಧನ್ ಹುಟ್ಟುಹಬ್ಬದ ದಿನ ರಾಜ್ಯದ ನಾನಾ ಕಡೆಯಿಂದ ಸಾವಿರಾರು ಅಭಿಮಾನಿಗಳು ಸೇರ್ತಾ ಇದ್ರು. ಆದ್ರೆ ಈಗ ರಾಜಧಾನಿಯಲ್ಲಿ ಮೇರುನಟನಿಗೆ ಅಂಗೈಯಗಲ ಜಾಗವೂ ಇಲ್ಲದಂತೆ ಆಗಿಬಿಟ್ಟಿದೆ.