ಲವ್-ದೋಖಾ, ಸಾಲ-ಸೋಲ, 48 ವರ್ಷದ ನಟ ವಿಶಾಲ್ ದುಸ್ಥಿತಿಗೆ ಕಾರಣ ಏನು?

Jan 10, 2025, 5:33 PM IST

ಇತ್ತೀಚಿಗೆ ಕಾಲಿವುಡ್  ಸ್ಟಾರ್ ನಟ ವಿಶಾಲ್ ಆರೋಗ್ಯ ಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ಸದ್ದು ಸುದ್ದಿಯಾಗ್ತಾ ಇದೆ. ಮದಗಜರಾಜ ಸಿನಿಮಾ ಇವೆಂಟ್​​ಗೆ ಬಂದಾಗ ವಿಶಾಲ್ ಇದ್ದ ಸ್ಥಿತಿಯನ್ನು ನೋಡಿ ಎಲ್ಲರೂ ಶಾಕ್ ಆಗಿದ್ರು. ಸದ್ಯ ವಿಶಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೂ ವಿಶಾಲ್​ರ ಈ ಸ್ಥಿತಿಗೆ ಏನು ಕಾರಣ ಅಂತ ನೋಡ ಹೋದ್ರೆ ಒಂದು ದೊಡ್ಡ ಕಥೆಯೇ ತೆರೆದುಕೊಂಡಿದೆ. ವಿಶಾಲ್ ದುಸ್ಥಿತಿಗೆ ಲವ್-ದೋಖಾ-ಸಾಲ-ಸೋಲ ಕಾರಣ ಅಂತ ಹೇಳಲಾಗ್ತಾ ಇದೆ.ಇನ್ನೂ ವೇದಿಕೆ ಮೇಲೆ ಮಾತನಾಡೋದಕ್ಕೆ ಮುಂದಾದ ವೇಳೆ ವಿಶಾಲ್ ಬಾಯಿ ತೊದಲ್ತಾ ಇತ್ತು. ಮೈಕ್ ಹಿಡಿದುಕೊಂಡಿದ್ದ ವಿಶಾಲ್ ಕೈ ನಡುಗ್ತಾ ಇತ್ತು. ಅರೇ ಆರಡಿ ಆಜಾನುಬಾಹು ಆಕ್ಷನ್ ಹೀರೋ ವಿಶಾಲ್​ಗೆ ಇದೇನಾಯ್ತು ಅಂತ ಜನ ಶಾಕ್ ಆಗಿದ್ರು.ಮಿಳಿನ ಹಿರಿಯ ವಿಮರ್ಷಕ, ಪತ್ರಕರ್ತ ಚಿಯಾರು ಬಾಲು ಹೇಳೋ ಪ್ರಕಾರ ವಿಶಾಲ್​ರ ಇವತ್ತಿನ ಸ್ಥಿತಿಗೆ ಕಾರಣ ಅವರ ಮುರಿದು ಬಿದ್ದ ಸಂಬಂಧಗಳು. ಅಸಲಿಗೆ ಶರತ್ ಕುಮಾರ್ ಪುತ್ರಿ ವರಲಕ್ಷ್ಮೀ ಜೊತೆಗೆ ವಿಶಾಲ್ ಲವ್ ಅಫೇರ್ ಇತ್ತು.ಮುರಿದುಬಿದ್ದ ಸಂಬಂಧಗಳು, ಕೆಲ ಸ್ನೇಹಿತರು ಮಾಡಿದ ದೋಖಾಗಳು, ಆರ್ಥಿಕ ಒತ್ತಡಗಳ ನಡುವೆ ವಿಶಾಲ್ ಕುಡಿತದ ದಾಸನಾದ್ರು. ಅವನ್ ಇವನ್ ಸಿನಿಮಾ ಟೈಂನಲ್ಲಿ ವಿಶಾಲ್ ದೃಷ್ಟಿದೋಷ ಇರುವ ಯುವಕನಂತೆ ಕಾಣೋದಕ್ಕೆ ಸರ್ಜರಿ ಮಾಡಿಸಿಕೊಂಡಿದ್ರು. ಅದರ ಅಡ್ಡಪರಿಣಾಮದಿಂದ ಆರೋಗ್ಯ ಸಮಸ್ಯೆ ಬೆನ್ನುಬೀಳ್ತಾ ಹೋಯಿತ್ತು.

ಮಾಜಿ ಮುಖ್ಯಮಂತ್ರಿ ಜೊತೆ ನಟಿ ರಚಿತಾ ರಾಮ್ ಒಡನಾಟ, ಲಾಭ ಅಷ್ಟಿಷ್ಟಲ್ಲ: ಲಾಯರ್ ಜಗದೀಶ್ ಹೇಳಿಕೆ ವೈರಲ್