Dec 22, 2024, 5:00 PM IST
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಬೆಳ್ಳಿ ತೆರೆ ಮೇಲೆ ರಾಯಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. 9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನದಲ್ಲಿ ಯುಐ ಸಿನಿಮಾ ಬಂದಿದೆ. ಈ ಮೂವಿ ನಿರೀಕ್ಷೆ ಕುತೂಹಲ ಮೌಂಟ್ ಎವರೆಸ್ಟ್ನಷ್ಟಿತ್ತು. ಹೀಗಾಗಿ ಗಲ್ಲಾಪೆಟ್ಟಿಗೆ ಉಪ್ಪಿ ಪಾಲಿಗೆ ಅನ್ನೋದನ್ನ ಫ್ಯಾನ್ಸ್ ಪಕ್ಕಾ ಮಾಡಿಕೊಂಡಿದ್ರು. ಇದೀಗ ಬಾಕ್ಸಾಫೀಸ್ನಲ್ಲಿ ಉಪೇಂದ್ರ ಬ್ಯಾಂಗ್ ಬ್ಯಾಂಗ್ ಎನ್ನುತ್ತಿದ್ದಾರೆ. ಫಸ್ಟ್ ಡೇ ಕಲೆಕ್ಷನ್ನಲ್ಲಿ 'ಯುಐ' ಕಮಾಲ್ ಮಾಡಿದೆ.
ಉಪೇಂದ್ರ ಡೈರೆಕ್ಷನ್ ಕ್ಯಾಪ್ ತೊಟ್ರೆ ಮುಗೀತು. ಆ ಸಿನಿಮಾ ಕ್ರೇಜ್ ಬಿಸಿ ಬಿಸಿ ಬಿರಿಯಾನಿ ತರ ಇರುತ್ತೆ. ಹೀಗಾಗೆ ಉಪ್ಪಿ ಸಿನಿಮಾಗಳ ಮೇಲೆ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ದೊಡ್ಡದಾಗೆ ಇರುತ್ತೆ. ಯುಐ ರಿಲೀಸ್ ಡೇಟ್ ಅನೌನ್ಸ್ ಆದಾಗ ಈ ಸಿನಿಮಾ ಮೊದಲ ದಿನ 8 ರಿಂದ 10 ಕೋಟಿ ಕಲೆಕ್ಷನ್ ಮಾಡುತ್ತೆ ಅಂತ ಅಂದಾಜಿಸಲಾಗಿತ್ತು. ಈಗ ಈ ನಿರೀಕ್ಷೆ ಸುಳ್ಳಾಗಲಿಲ್ಲ. ಗೆಲುವು ಉಪ್ಪಿ ಕೈ ಹಿಡಿತಲ್ಲಾ.. ಯುಐ ಫಸ್ಟ್ ಡೇ 9 ಕೋಟಿ ಗಳಿಸಿದೆ.
ಯುಐ ಕ್ರೇಜ್ಗೆ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಫಸ್ಟ್ ಡೇ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ವು. ಹೀಗಾಗೆ ಕರ್ನಾಟಕ ಒಂದರಲ್ಲೇ 7.75 ಕೋಟಿ ಕಲೆಕ್ಷನ್ ಯುಐ ಮಾಡಿದೆ. ಇನ್ನುಳಿದದ್ದು ತೆಲುಗು, ತಮಿಳು ಹಾಗು ಹಿಂದಿಯಿಂದ ಬಂದಿದೆ. ಈಗ ವೀಕ್ ಎಂಡ್ ಆಗಿರೋದ್ರಿಂದ ಮೂರು ದಿನದಲ್ಲಿ 20 ಕೋಟಿ ಥಿಯೇಟ್ರಿಕಲ್ ಕಲೆಕ್ಷನ್ ಆಗೋ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..