ಕರ್ನಾಟಕದಾದ್ಯಂತ ಏಕರೂಪ ಸಿನಿಮಾ ಟಿಕೆಟ್ ದರ ಜಾರಿಗೆ ಬಂದಿದೆ. ಗರಿಷ್ಟ 236 ರೂಪಾಯಿ ಟಿಕೆಟ್ ಬೆಲೆ ನಿಗದಿಯಾಗಿದ್ದು ಸಿನಿಪ್ರಿಯರಿಗೆ ಖುಷಿ ತಂದಿದೆ. ಆದ್ರೆ ಇದರ ವಿರುದ್ದ ಹೊಂಬಾಳೆ ಫಿಲಂಸ್ ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿವೆ.
ಹಾಗಾದ್ರೆ ಮತ್ತೆ ಟಿಕೆಟ್ ದರ ದುಬಾರಿ ಆಗುತ್ತಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ಬಹುವರ್ಷಗಳ ಹೋರಾಟದ ಬಳಿಕ ಕರ್ನಾಟಕದಲ್ಲಿ ಕೊನೆಗೂ ಏಕರೂಪ ಟಿಕೆಟ್ ದರ ಜಾರಿಗೆ ಬಂದಿದೆ. ಸದ್ಯ ಯಾವುದೇ ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಗಳಲ್ಲಿ ಹೆಚ್ಚು ಅಂದ್ರೆ 236 ರೂಪಾಯಿ ಟಿಕೆಟ್ ದರ ಫಿಕ್ಸ್ ಆಗಿದೆ. ಆದ್ರೆ ಇದರ ವಿರುದ್ದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್, ವಿಕೆ. ಫಿಲಂಸ್ ಮತ್ತು ಹೊಂಬಾಳೆ ಫಿಲಂಸ್ ಹೈಕೋರ್ಟ್ ಮೆಟ್ಟಿಲೇರಿವೆ.