ಕನ್ನಡದಲ್ಲೂ ತೆರೆಗೆ ಬರಲು ಸಜ್ಜಾದ 'ಲವ್ ರೆಡ್ಡಿ': ಸಿನಿಮಾಗೆ ಸ್ಯಾಂಡಲ್​ವುಡ್ ಸಲಗ ಸಾಥ್!

ಕನ್ನಡದಲ್ಲೂ ತೆರೆಗೆ ಬರಲು ಸಜ್ಜಾದ 'ಲವ್ ರೆಡ್ಡಿ': ಸಿನಿಮಾಗೆ ಸ್ಯಾಂಡಲ್​ವುಡ್ ಸಲಗ ಸಾಥ್!

Published : Nov 13, 2024, 04:09 PM IST

ನೈಜ ಘಟನೆಯನ್ನ ಆಧಾರವಾಗಿ ಇಟ್ಟುಕೊಂಡು ಮೂಡಿಬಂದ ‘ಲವ್ ರೆಡ್ಡಿ’ ಸಿನಿಮಾಗೆ ತೆಲುಗಿನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸ್ ಆಫೀಸ್​​ನಲ್ಲೂ ಲವ್ ರೆಡ್ಡಿ  ಸದ್ದು ಮಾಡಿದ್ದು,  ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. 

ನೈಜ ಘಟನೆಯನ್ನ ಆಧಾರವಾಗಿ ಇಟ್ಟುಕೊಂಡು ಮೂಡಿಬಂದ ‘ಲವ್ ರೆಡ್ಡಿ’ ಸಿನಿಮಾಗೆ ತೆಲುಗಿನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸ್ ಆಫೀಸ್​​ನಲ್ಲೂ ಲವ್ ರೆಡ್ಡಿ  ಸದ್ದು ಮಾಡಿದ್ದು,  ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಈಗ ಈ ಸಿನಿಮಾವನ್ನ ಕನ್ನಡದಲ್ಲೂ ಬಿಡುಗಡೆ ಮಾಡಲಾಗ್ತಿದ್ದು, ಇತ್ತೀಚೆಗೆ ಕನ್ನಡ ವರ್ಷನ್​ ಟ್ರೇಲರ್​ ರಿಲೀಸ್ ಆಗಿದೆ. ದುನಿಯಾ ವಿಜಯ್  ಈ ಟ್ರೇಲರ್​ ಬಿಡುಗಡೆ ಮಾಡೋ ಮೂಲಕ ‘ಲವ್ ರೆಡ್ಡಿ’ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.  ಹೊಂಬಾಳೆ ಫಿಲ್ಸ್ಮ್​ ಮೂಲಕ ಈ ಸಿನಿಮಾ ಕರ್ನಾಟಕದಲ್ಲಿ ನ.22ರಂದು ಬಿಡುಗಡೆ ಆಗಲಿದೆ.

ಜೇಮ್ಸ್ ಬಾಂಡ್ ಅವತಾರದಲ್ಲಿ ಫಸ್ಟ್ ರ‍್ಯಾಂಕ್ ರಾಜು..! ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕನಾಗಿ  ನಟಿಸಿರೋ“ರಾಜು ಜೇಮ್ಸ್ ಬಾಂಡ್ " ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.  ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ  ಮೂಡಿಬಂದಿರೋ ಈ ಸಿನಿಮಾದಲ್ಲಿ ಗುರುನಂದನ್ ಬಾಂಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೃದುಲಾ ನಾಯಕಿಯಾಗಿ ನಟಿಸಿದ್ದು, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್ ಮತ್ತು ಜೈ ಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಸೆಂಬರ್ 27ಕ್ಕೆ ರಾಜು ಜೇಮ್ಸ್ ಬಾಂಡ್ ರಿಲೀಸ್ ಆಗಲಿದೆ. 

ರಾಜ್ ಕಪ್ ಸೀಸನ್-6ಗೆ ಮುಹೂರ್ತ ಫಿಕ್ಸ್..!: ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಅಗಿದ್ದು ಸ್ಯಾಂಡಲ್​ವುಡ್ ತಾರೆಯರು ತಯಾರಿ ಶುರು  ಮಾಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಜ್ಯಾನಜ್ಯೋತಿ ಆಡಿಟೋರಿಯಂನಲ್ಲಿ ಜೆರ್ಸಿ ಬಿಡುಗಡೆ ಮಾಡಲಾಗಿದ್ದು, ಅಶ್ವಿನಿ ಪುನೀತ್​ರಾಜ್​ಕುಮಾರ್ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟಿದ್ದಾರೆ. ಈ ಬಾರಿಯ ರಾಜ್ ಕಪ್ ಪಂದ್ಯಾವಳಿ ನವೆಂಬರ್ 28ರಿಂದ ಡಿಸೆಂಬರ್ 10ರ ವರೆಗೂ ನಡೆಯಲಿದ್ದು ವಿಶ್ವದ ನಾನಾ ದೇಶಗಳಲ್ಲಿ ಪಂದ್ಯಗಳ ಅಯೋಜನೆ ಆಗಿವೆ. ಡಾಲಿ ಧನಂಜಯ್, ಅನಿರುದ್ಧ್, ಡಾರ್ಲಿಂಗ್ ಕೃಷ್ಣ, ಅಭಿಷೇಕ್ ಅಂಬರೀಶ್, ನಿನಾಸಂ ಸತೀಶ್, ಯೋಗಿ, ವಸಿಷ್ಟ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜು ಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more