ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿರ್ತೀನಿ, ರಾಜ್ ಕುಟುಂಬ ಅನುಮತಿ ನೀಡಲಿ; ಶಕ್ತಿಧಾಮ ಭೇಟಿ ಬಳಿಕ ವಿಶಾಲ್ ಮಾತು

Sep 10, 2022, 1:56 PM IST

ತಮಿಳಿನ ಖ್ಯಾತ ನಟ ವಿಶಾಲ್ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಇಂದು (ಸೆಪ್ಟಂಬರ್ 10) ದಿಢೀರ್ ಮೈಸೂರಿಗೆ ಬಂದ ನಟ ವಿಶಾಲ್ ನೇರವಾಗಿ ಶಕ್ತಿಧಾಮಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರೋ ಶಕ್ತಿಧಾಮಕ್ಕೆ ಬಂದ ವಿಶಾಲ್ ಅಲ್ಲಿನ ಆಡಳಿತ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ. ಅಂದಹಾಗೆ ವಿಶಾಲ್, ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಶಕ್ತಿಧಾಮದ ಬಗ್ಗೆ ಮಾತನಾಡಿದ್ದರು. ಶಕ್ತಿಧಾಮವನ್ನು ತಾನು ನೋಡಿಕೊಳ್ಳುವುದಾಗಿ ಪ್ರಸ್ತಾಪ ಮಾಡಿದ್ದರು.  ಇದೀಗ ದಿಢೀರ್ ಭೇಟಿ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ. ಕೆಲ ಸಮಯ ಅಲ್ಲಿನ ಮಕ್ಕಳ ಜೊತೆ ಸಮಯ ಕೆಳೆದಿದ್ದಾರೆ. ಬಳಿಕ ಮಾತನಾಡಿ ನಾನು ಯಾವಗಲು ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ ಎಂದುಹೇಳಿದರು. ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತ್ತು ಎಂದಿರುವ ವಿಶಾಲ್ ದೇವಸ್ಥಾನಕ್ಕೆ ಹೋದ್ರೆ ಒಂದು ದೇವರ ದರ್ಶನ ಪಡೆಯಬಹುದು ಆದರೆ ಇಲ್ಲಿ ಒಂದೊಂದು ಮಕ್ಕಳಲ್ಲೂ ಒಂದೊಂದು ದೇವರನ್ನ ನೋಡಿದೆ ಎಂದು ವಿಶಾಲ್ ಹೇಳಿದರು. ರಾಜ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮಕ್ಕಳ ಜೊತೆ ನಾನು ಮಾತನಾಡಿದೆ. ಡ್ಯಾನ್ಸ್ ಮಾಡಿದ್ರು, ಆಟವಾಡಿದ್ರು ತುಂಬಾ ಉತ್ಸಾಹದಿಂದ ಇದ್ದಾರೆ. ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.