Feb 23, 2023, 1:23 PM IST
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಮಾಡೋದು ಪಕ್ಕಾ ಆದ್ಮೇಲೆ, ಸೌತ್ ಸಿನಿ ರಂಗದಲ್ಲಿ ದೊಡ್ಡ ಸುದ್ದಿಯೊಂದು ಪ್ರತಿದಿನ ಸೌಂಡ್ ಮಾಡ್ತಿದೆ. ಕಾಂತಾರ-2 ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಇರ್ತಾರೆ ಅನ್ನೋ ಸುದ್ದಿ ಅದು. ಕಾಂತಾರ ಸಿನಿಮಾ ಬಂದಾಗ ತಲೈವಾ ರಜನಿಕಾಂತ್ ಸಿನಿಮಾ ನೋಡಿ ಹೊಗಳಿದ್ರು. ರಿಷಬ್ ಶೆಟ್ಟಿಯನ್ನು ಕೊಂಡಾಡಿದ್ರು. ಅಷ್ಟೆ ಅಲ್ಲ ತಮ್ಮ ಬಾಬಾ ಸಿನಿಮಾಗೆ ಕಾಂತಾರದ ಲಿಂಕ್ ಕೊಟ್ಟಿದ್ರು. ಈಗ ಕಾಂತಾರ ಪಾರ್ಟ್2 ಸಿನಿಮಾದಲ್ಲಿ ರಜನಿಕಾಂತ್ ನಟಿಸ್ತಾರಾ ಅಂತ ರಿಷಬ್ ಶೆಟ್ಟಿಗೆ ಕೇಳಿದ್ದಕ್ಕೆ, ಅದನ್ನು ನೋಡೋಣ ನಮ್ಮ ಪ್ರೊಡಕ್ಷನ್ ಹೌಸ್ ಹೇಳ್ತಾರೆ ಅಂದ್ರು. ಕಾಂತಾರದಲ್ಲಿ ರಜನಿಕಾಂತ್ ಇರ್ತಾರಾ ಅನ್ನೋ ಪ್ರಶ್ನೆಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟಿರೋ ರಷಬ್ ತಮ್ಮ ಕಾಂತಾರ ಚಾಪ್ಟರ್2 ಸಿನಿಮಾದಲ್ಲಿ ರಜನಿಕಾಂತ್ ಇರಲ್ಲ ಅಂತ ಎಲ್ಲೂ ಹೇಳಿಲ್ಲ.