Jan 16, 2025, 11:51 AM IST
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಆ ಬಳಿಕ ಜೈಲರ್-2 ಬರುತ್ತೆ ಅನ್ನೋ ಸುದ್ದಿ ಸದ್ದು ಮಾಡಿತ್ತು. ಇದೀಗ ಸಂಕ್ರಾಂತಿ ಹೊತ್ತಲ್ಲಿ ಜೈಲರ್-2 ಮೂವಿಯ ಆಫೀಷಿಯಲ್ ಅನೌನ್ಸ್ಮೆಂಟ್ ಆಗಿದೆ. ಅಷ್ಟೇ ಅಲ್ಲ ಟೈಗರ್ ಕಾ ಹುಕುಂ ಕೂಡ ಶುರುವಾಗಿದ್ದು, ತಲೈವಾ ಅಬ್ಬರ ಕಂಡು ಫ್ಯಾನ್ಸ್ ವಾರೆವ್ಹಾ ಅಂತಿದ್ದಾರೆ.
ಯೆಸ್ ಜೈಲರ್ - 2 ಸಿನಿಮಾ ಆಫೀಷಿಯಲ್ ಅಗಿ ಅನೌನ್ಸ್ ಮೆಂಟ್ ಆಗಿದೆ. ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೆಶಕ ಅನಿರುಧ್ ರವಿಚಂದರ್ ಈ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಲೈವಾ ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಅವತಾರದಲ್ಲಿ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಬರೊಬ್ಬರಿ 4 ನಿಮಿಷಗಳ ಈ ಅನೌನ್ಸ್ಮೆಂಟ್ ಟೀಸರ್ ಸದ್ಯ ಕಿಚ್ಚು ಹಚ್ಚಿದೆ. ಟೈಗರ್ ಕಾ ಹುಕುಂ ಕಂಡು ಫ್ಯಾನ್ಸ್ ಜೈ ಹೋ ತಲೈವಾ ಅಂತಿದ್ದಾರೆ. ಟೀಸರ್ನಲ್ಲಿರೋ ಎಲೆಮೆಂಟ್ಸ್ ಸಿನಿಮಾ ಡಬಲ್ ಮಾಸ್ ಆಗಿರುತ್ತೆ ಅನ್ನೋದ್ರ ಸೂಚನೆ ಕೊಡ್ತಾ ಇವೆ.
2023ರಲ್ಲಿ ಬಂದ ಜೈಲರ್ ಸಿನಿಮಾ ಪ್ಯಾನ್ ಇಂಡಿಯಾ ಬಾಕ್ಸಾಪೀಸ್ ಕೊಳ್ಳೆ ಹೊಡೆದಿತ್ತು. ರಿಟೈರ್ಡ್ ಜೈಲರ್ ಪಾತ್ರದಲ್ಲಿ ಮಿಂಚಿದ್ದ ತಲೈವಾ ಹೊಸ ಅವತಾರದಲ್ಲಿ ಕಮಾಲ್ ಮಾಡಿದ್ರು. ಒಂದು ಕಡೆ ಫ್ಯಾಮಿಲಿ ಕಥೆ ಮತ್ತೊಂದು ಕಡೆ ಹೈವೋಲ್ಟೇಜ್ ಆಕ್ಷನ್ ಸಿಕ್ವೆನ್ಸ್ ಫ್ಯಾನ್ಸ್ ಕಿಕ್ ಕೊಟ್ಟಿದ್ರು. ಸೋ ಸಿನಿಮಾ ಬಾಕ್ಸಾಫೀಸ್ನಲ್ಲಿ ಭರ್ತಿ 700 ಕೋಟಿ ಗಳಿಕೆ ಮಾಡಿತ್ತು.
ಇದೀಗ ಜೈಲರ್ 2 ಅನೌನ್ಸ್ ಆಗಿದ್ದು ಫ್ಯಾನ್ಸ್ ನಿರೀಕ್ಷೆ ಡಬಲ್ ಆಗಿದೆ. ಇನ್ನೂ ಜೈಲರ್ ನಲ್ಲಿ ನಮ್ಮ ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವಣ್ಣ ನರಸಿಂಹನ ಅವತಾರದಲ್ಲಿ ಮಿಂಚಿ ಮೋಡಿ ಮಾಡಿದ್ರು. ಸೋ ಜೈಲರ್ -2 ಶಿವತಾಂಡವ ಕೂಡ ಇರುತ್ತಾ ಅಂತ ಫ್ಯಾನ್ಸ್ ಕುತೂಹಲದಿಂದ ಕಾಯ್ತಾ ಇದ್ದಾರೆ.
ಮೂಲಗಳ ಪ್ರಕಾರ ಜೈಲರ್ ನಲ್ಲಿ ಶಿವರಾಜ್ಕುಮಾರ್, ಮೋಹನ್ ಲಾಲ್ ಜೊತೆಗೆ ಬಾಲಿವುಡ್ ಒಬ್ಬ ಬಿಗ್ ಸ್ಟಾರ್ ಕೂಡ ಇರಲಿದ್ದಾರಂತೆ. ಇದನ್ನ ಬಿಗ್ಗಸ್ಟ್ ಮಲ್ಟಿಸ್ಟಾರರ್ ಮೂವಿಯಾಗಿಸೋಕೆ ಸನ್ ಪಿಕ್ಚರ್ಸ್ ಪ್ಲಾನ್ ಮಾಡಿದೆ. ನಿರ್ದೇಶಕ ನೆಲ್ಸನ್ ಈಗಾಗ್ಲೇ ಸ್ಕ್ರಿಪ್ಟ್ ರೆಡಿಮಾಡಿದ್ದಾರೆ. ಈ ಅನೌನ್ಸ್ಮೆಂಟ್ ಟೀಸರ್ ಮೂಲಕ ಜೈಲರ್ 2 ಹೇಗಿರುತ್ತೆ ಅನ್ನೋ ಸಣ್ಣ ಝಲಕ್ ತೋರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..