ರಕ್ಷಕನೂ ಹೌದು.. ರಕ್ಕಸನೂ ಹೌದು.. ಈ ಬಘೀರ: ಮಾಸ್ಕ್​ಮ್ಯಾನ್ ಹಿಂದಿರೋ ಸೀಕ್ರೆಟ್ ಏನು?

ರಕ್ಷಕನೂ ಹೌದು.. ರಕ್ಕಸನೂ ಹೌದು.. ಈ ಬಘೀರ: ಮಾಸ್ಕ್​ಮ್ಯಾನ್ ಹಿಂದಿರೋ ಸೀಕ್ರೆಟ್ ಏನು?

Published : Oct 25, 2024, 04:13 PM IST

ಡಾ.ಸೂರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಸಿನಿಮಾ ಟ್ರೈಲರ್ ನೋಡಿದವರಿಗೆ ಇದ್ರಲ್ಲಿ ಶ್ರೀಮುರಳಿ ರಕ್ಷಕನೂ ಹೌದು ರಾಕ್ಷಸನೂ ಹೌದು ಅನ್ನೋದು ಗೊತ್ತಾಗಿದೆ. ಒಂದು ಕಡೆ ಖಾಕಿಧಾರಿ ರಕ್ಷಕನಾಗಿ ಮಿಂಚಿದ್ರೆ ಮತ್ತೊಂದೆಡೆ ಮಾಸ್ಕ್ ಧಾರಿ ಬಘೀರನಾಗಿ ರಕ್ಕಸನ ಅವತಾರದಲ್ಲಿ ಮಿಂಚಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇನ್ನೇನು ದೀಪಾವಳಿಗೆ ತೆರೆಗೆ ಬರ್ತಾ ಇದೆ. ಬಘೀರನ ಟ್ರೈಲರ್ ನೋಡಿದವರು ಈ ಸಿನಿಮಾದ ಕಹಾನಿ ಏನಿರಬಹುದು ಅನ್ನೋದನ್ನ ಗೆಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾಗೆ ಬಿಗ್ ಬಿ ಅಮಿತಾಭ್ ನಟನೆಯ ಸಿನಿಮಾ ಸ್ಪೂರ್ತಿ ಇರಬಹುದಾ ಅಂತ ಊಹೆ ಕೂಡ ಮಾಡ್ತಾ ಇದ್ದಾರೆ. ಇದೇ ದೀಪಾವಳಿಗೆ ರೋರಿಂಗ್ ಸ್ಟಾರ್ ಶ್ರೀಮರುಳಿ ನಟನೆಯ ಬಘೀರ ಸಿನಿಮಾ ತೆರೆಗೆ ಬರ್ತಾ ಇದೆ. ಹೊಂಬಾಳೆ ಫಿಲಂಸ್ ನಿರ್ಮಿಸಿರೋ ಈ ಬಿಗ್ ಬಜೆಟ್ ಌಕ್ಷನ್ ಡ್ರಾಮಾ ಕನ್ನಡ ಮತ್ತು ತೆಲುಗುನಲ್ಲಿ ಏಕಕಾಲದಲ್ಲಿ ರಿಲೀಸ್ ಆಗ್ತಾ ಇದೆ. ಬಘೀರ ಸಿನಿಮಾದ ಸ್ಪೆಷಾಲಿಟಿ ಅಂದ್ರೆ ಇದಕ್ಕೆ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆಯನ್ನ ಬರೆದಿದ್ದಾರೆ. ಉಗ್ರಂ ಬಳಿಕ ಶ್ರೀಮುರುಳಿಗೆ ಇಮೇಜ್ ಸೂಟ್ ಆಗುವಂಥಾ ಮಾಸ್ ಕಹಾನಿಯನ್ನ ರೆಡಿ ಮಾಡಿಕೊಟ್ಟಿದ್ದಾರೆ. 

ಡಾ.ಸೂರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಸಿನಿಮಾ ಟ್ರೈಲರ್ ನೋಡಿದವರಿಗೆ ಇದ್ರಲ್ಲಿ ಶ್ರೀಮುರಳಿ ರಕ್ಷಕನೂ ಹೌದು ರಾಕ್ಷಸನೂ ಹೌದು ಅನ್ನೋದು ಗೊತ್ತಾಗಿದೆ. ಒಂದು ಕಡೆ ಖಾಕಿಧಾರಿ ರಕ್ಷಕನಾಗಿ ಮಿಂಚಿದ್ರೆ ಮತ್ತೊಂದೆಡೆ ಮಾಸ್ಕ್ ಧಾರಿ ಬಘೀರನಾಗಿ ರಕ್ಕಸನ ಅವತಾರದಲ್ಲಿ ಮಿಂಚಿದ್ದಾರೆ. ಇದನ್ನ ನೋಡ್ತಾ ಇದ್ರೆ ಬಿಗ್ ಬಿ ಅಮಿತಾಭ್ ನಟನೆಯ ಹಳೆಯ ಸಿನಿಮಾವೊಂದು ನೆನಪಾಗ್ತಾ ಇದೆ. 1990ರಲ್ಲಿ ಬಂದ ಅಜೂಬಾ ಸಿನಿಮಾದಲ್ಲಿ ಅಮಿತಾಭ್ ಇದೇ ರೀತಿ ಮಾಸ್ಕ್ ಮ್ಯಾನ್ ಸೂಪರ್ ಹೀರೋ ಆಗಿ ಬಂದು ದುಷ್ಟರನ್ನ ಶಿಕ್ಷಿಸ್ತಾ ಇರ್ತಾರೆ. ಇದೂ ಸೇರಿದಂತೆ ಅನೇಕ ಸೂಪರ್ ಹೀರೋ ಸಿನಿಮಾಗಳ ಜೊತೆಗೆ ಬಘೀರನನ್ನ ಹೋಲಿಕೆ ಮಾಡಲಾಗ್ತಾ ಇದೆ. ಸೋ ಬಘೀರ ಬಗ್ಗೆ ಫ್ಯಾನ್ಸ್ ನಡುವೆ ಇದೇ ಕಾರಣಕ್ಕೆ ದೊಡ್ಡ ಕುತೂಹಲವೂ ಸೃಷ್ಟಿಯಾಗ್ತಾ ಇದೆ. ಅಕ್ಟೋಬರ್ 31ಕ್ಕೆ ಬಘೀರ ತೆರೆಗೆ ಬರಲಿದ್ದು, ಈ ಕುರಿತ ಕುತೂಹಲಗಳಿಗೆಲ್ಲಾ ಉತ್ತರ ಸಿಗಲಿದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?