ಡಾ. ರಾಜ್​ ಕಿಡ್ನಾಪ್ ಕೇಸ್: ಎಸ್ಎಂ ಕೃಷ್ಣ, ಅಂಬಿ & ರಜನಿ ನಡುವೆ ನಡೆದಿತ್ತು ರಹಸ್ಯ ಒಪ್ಪಂದ !

Dec 11, 2024, 12:09 PM IST

ಅವು ಅದೆಂಥಾ ಅತಂಕದ ದಿನಗಳು ಅಂದ್ರೆ, ಕರುನಾಡಿನ ಜನತೆ ಪ್ರತಿದಿನವೂ ಏನಾಗಿಬಿಡುತ್ತೋ ಅನ್ನೋ ಭಯದಲ್ಲಿ ಮುಳುಗಿದ್ರು. ನರಹಂತಕ ವೀರಪ್ಪನ್, ರಾಜ್​ಕುಮಾರ್​ಗೆ ಏನು ಮಾಡಿಬಿಡ್ತಾನೋ ಅನ್ನೋ ಆತಂಕದಲ್ಲಿ ದಿನದೂಡ್ತಾ ಇದ್ರು. ಅಣ್ಣಾವ್ರಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತೆ ಅನ್ನೋ ವಿಚಾರ ಮುಖ್ಯಮಂತ್ರಿ ಎಸ್,ಎಂ ಕೃಷ್ಣಗಿತ್ತು. ಇಂಥಾ ಸಮಯದಲ್ಲಿ ಯಾರು ತಾನೇ ನೆಮ್ಮದಿಯಿಂದ ನಿದ್ರಿಸೋಕೆ ಸಾಧ್ಯ..?

ಎಸ್.ಎಂ ಕೃಷ್ಣ - ತಮಿಳುನಾಡು ಸರ್ಕಾರದ ಜೊತೆಗೂಡಿ ಸಂಧಾನಕಾರರನ್ನ ಕಳುಹಿಸಿ, ರಾಜ್ ಬಿಡುಗಡೆಗೆ ಅವಿರತ ಪ್ರಯತ್ನ ಮಾಡ್ತಾ ಇದ್ರು. ನೆಡುಮಾರನ್ ಸಂಧಾನಕಾರನಾಗಿ ಎಂಟ್ರಿ ಕೊಟ್ಟ ಮೇಲೆ ತಕ್ಕ ಮಟ್ಟಿಗೆ ಸಂಧಾನ ಫಲಪೃದವಾಯ್ತು. ಮೊದಲ ಹಂತದಲ್ಲಿ ರಾಜ್​ಕುಮಾರ್ ಅಳಿಯ ಗೋವಿಂದರಾಜು ರಿಲೀಸ್ ಅದ್ರು. ಗೋವಿಂದ್​ರಾಜುರನ್ನ ಕೂರಿಸಿಕೊಂಡು ಅಲ್ಲಿನ ಸಕಲ ವಿಷಯ ತಿಳಿದುಕೊಂಡು ಮುಂದಿನ ಹೆಜ್ಜೆ ಇಟ್ರು ಎಸ್.ಎಂ ಕೃಷ್ಣ.

ಒಂದು ಹಂತದಲ್ಲಿ ಕೇಂದ್ರ ಸರ್ಕಾರವೇ ವೀರಪ್ಪನ್ ಸಹಚರರ ಬಿಡುಗಡೆಗೆ ಒಪ್ಪಿಗೆ ಕೊಟ್ರೂ, ಕೋರ್ಟ್ ಇದಕ್ಕೆ ಅವಕಾಶ ಕೊಡಲಿಲ್ಲ. ಅರಣ್ಯದಲ್ಲಿದ್ದ ಡಾ.ರಾಜ್​ಕುಮಾರ್ ಆರೋಗ್ಯ ಕೂಡ ಹದಗೆಡ್ತಾ ಇದೆ ಅನ್ನೋ ಸುದ್ದಿ ಮತ್ತಷ್ಟು ಆತಂಕ ಸೃಷ್ಟಿಮಾಡ್ತಾ ಇತ್ತು. ಆ ಹಂತದಲ್ಲೇ ಹಲವಾರು ರಹಸ್ಯ ಮಾತುಕಥೆಗಳನ್ನ ಮಾಡಿ, ಕೊನೆಗೂ ಅಣ್ಣಾವ್ರ ರಿಲೀಸ್​ಗೆ ಕೃಷ್ಣ ಒಂದು ವ್ಯೂಹವನ್ನ ರೂಪಿಸಿದ್ರು. ಅಂಬರೀಷ್ ರಜಿನಿಕಾಂತ್ ಮತ್ತು ಕೃಷ್ಣ ಬಿಟ್ರೆ ಆ ವಿಚಾರ ಯಾರಿಗೂ ತಿಳಿದಿರಲಿಲ್ಲ... ಅದೇನು ಅಂತ ವಿಡಿಯೋ ನೋಡಿ...