ಶಿವರಾಜ್ ಕುಮಾರ್ (Shivaraj Kumar) ಅಭಿನಯದ ಮಲ್ಟಿ ಸ್ಟಾರರ್ ಸಿನಿಮಾ ಬೈರಾಗಿ (Bhyragi) ಇತ್ತೀಚಿಗಷ್ಟೇ ಸಿನಿಮಾ ಹಾಡೊಂದಕ್ಕೆ ಶಿವಣ್ಣನ ಜೊತೆ ಹಾಡಲು ಸ್ಟಾರ್ ಒಬ್ಬರನ್ನ ಕರೆತರ್ತಾರೆ ಅನ್ನೋ ಹಿಂಟ್ ನೀಡಿತ್ತು ಸಿನಿಮಾ ಟೀಂ ..ಈಗ ಆ ಸೀಕ್ರೆಟ್ ರಿವಿಲ್ ಆಗಿದೆ.
ಶಿವರಾಜ್ ಕುಮಾರ್ (Shivaraj Kumar) ಅಭಿನಯದ ಮಲ್ಟಿ ಸ್ಟಾರರ್ ಸಿನಿಮಾ ಬೈರಾಗಿ (Bhyragi) ಇತ್ತೀಚಿಗಷ್ಟೇ ಸಿನಿಮಾ ಹಾಡೊಂದಕ್ಕೆ ಶಿವಣ್ಣನ ಜೊತೆ ಹಾಡಲು ಸ್ಟಾರ್ ಒಬ್ಬರನ್ನ ಕರೆತರ್ತಾರೆ ಅನ್ನೋ ಹಿಂಟ್ ನೀಡಿತ್ತು ಸಿನಿಮಾ ಟೀಂ. ಈಗ ಆ ಸೀಕ್ರೆಟ್ ರಿವಿಲ್ ಆಗಿದೆ.
ನಟ ಶರಣ್ ಶಿವಣ್ಣನಿಗಾಗಿ ಮತ್ತೊಂದು ಹಾಡನ್ನ ಹಾಡಿದ್ದಾರೆ. ಈ ಹಿಂದೆ ವಜ್ರಕಾಯ ಸಿನಿಮಾದಲ್ಲಿ "ತೂಕತು ಗಡಬಡ ಚಲ್ ಚಲ್ ಹುಡುಗಿ'' ಅನ್ನೋ ಹಾಡನ್ನ ಹಾಡಿದ್ರು.ಈಗ ಬೈರಾಗಿ ಚಿತ್ರದ ರಿಧಮ್ ಆಫ್ ಶಿವಪ್ಪ ಹಾಡಿನಲ್ಲಿ ಎ ಫಾರ್ ಆಪಲ್.. ಬಿ ಫಾರ್ ಬಾರ್ಬರ್.. ನಾನಿಮ್ಮ ಹೆಡ್ ಮಾಸ್ಟರ್ ಎಂದು ಹಾಡಿದ್ದಾರೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಶರಣ್ ಅವ್ರಿಗೆ ಶಿವಣ್ಣ ಕೂಡ ಸಾಥ್ ಕೊಟ್ಟಿದ್ದಾರೆ.
ಬೈರಾಗಿ ಸಿನಿಮಾದ ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಬಹಳ ದಿನಗಳ ನಂತ್ರ ಶಿವಣ್ಣ ಮೈಕ್ ಮುಂದೆ ನಿಂತು ಹಾಡಿದ್ದಾರೆ. ಇನ್ನು ಬೈರಾಗಿ ಸಿನಿಮಾದಲ್ಲಿ ಸ್ಟಾರ್ ಗಳ ದಂಡೇ ಇದ್ದು ಶಿವರಾಜ್ ಕುಮಾರ್ ಸೇರಿದಂತೆ ಡಾಲಿ ಧನಂಜಯ್, ಪೃಥ್ವಿ ಅಂಬರ್ , ಅಂಜಲಿ , ಯಶಾ ಶಿವಕುಮಾರ್ ಇನ್ನು ಅನೇಕರಿದ್ದಾರೆ..ಒಟ್ಟಾರೆ ಲುಕ್ , ಟೀಸರ್ ನಿಂದ ಸೌಂಡ್ ಮಾಡ್ತಿದ್ದ ಬೈರಾಗಿ ಸಿನಿಮಾ ಈಗ ಹಾಡಿನ ಮೂಲಕ ಸುದ್ದಿಯಲ್ಲಿದೆ...